ಮೈಮನಸಿಂಗ (ಬಾಂಗ್ಲಾದೇಶ) ಇಲ್ಲಿ ಮತಾಂಧ ಮುಸ್ಲಿಮರಿಂದ ಹಿಂದೂ ಕುಟುಂಬದ ಮೇಲೆ ಮಾರಣಾಂತಿಕ ದಾಳಿ Bangladesh Hindus Attacked

ಹಿಂದೂಗಳ ಧಾರ್ಮಿಕ ಸ್ಥಳದ ಮೇಲೂ ದಾಳಿ

ಮೈಮನಸಿಂಗ (ಬಾಂಗ್ಲಾದೇಶ) – ಮೈಮನಸಿಂಗ ಜಿಲ್ಲೆಯಲ್ಲಿ ಮಾಲತಿ ದಾಸ (ವಯಸ್ಸು 60 ವರ್ಷ) ಮತ್ತು ಅವರ ಕುಟುಂಬದ ಮೇಲೆ ಜಿಹಾದಿ ಮುಸ್ಲಿಮರು ಮಾರಣಾಂತಿಕ ದಾಳಿ ಮಾಡಿದ ಘಟನೆ ಇತ್ತೀಚೆಗೆ ನಡೆದಿದೆ.

ಮಾಲತಿ ದಾಸ್ ಅವರು ನೀಡಿರುವ ದೂರಿನ ಪ್ರಕಾರ ಅಕ್ಟೋಬರ್ 22, 2025 ರಂದು ಆರೋಪಿಗಳಾದ ಮಹಮ್ಮದ್ ಸೈಕೂ ಮಾಮುನ್, ಇಮಾಮ್, ಮಹಮ್ಮದ್ ರಾಜ್ ಮತ್ತು ಇನ್ನುಳಿದ 3-4 ಅಜ್ಞಾತ ವ್ಯಕ್ತಿಗಳು ಕಾಳಿಬಾರಿ ತಾಜ್ ಬಂಗಾಳ ಸಮುದಾಯ ಕೇಂದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಅವರು ಈ ಧಾರ್ಮಿಕ ಸ್ಥಳವನ್ನು ಧ್ವಂಸಗೊಳಿಸಿ, ಅನೇಕ ಬೆಲೆಬಾಳುವ ವಸ್ತುಗಳನ್ನು ನಾಶಪಡಿಸಿ, ಸುಲಿಗೆಗೆ ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳು ಮಾಲತಿ ದಾಸ್ ಮತ್ತು ಅವರ ಕುಟುಂಬದ ಮೇಲೂ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಮಾಲತಿ ಅವರ ತಲೆ ಮತ್ತು ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರಕರಣದ ಕುರಿತು ‘ಬಾಂಗ್ಲಾದೇಶ್ ಮೈನಾರಿಟಿ ವಾಚ್’ ಸಂಸ್ಥೆಯು ಮಯಮನಸಿಂಗನ ಪೊಲೀಸ್ ಅಧೀಕ್ಷಕರನ್ನು ಸಂಪರ್ಕಿಸಿದಾಗ, 2 ಆರೋಪಿಗಳ ವಿರುದ್ಧ ಅಗತ್ಯ ಕಾನೂನು ಕ್ರಮಗಳು ಪ್ರಾರಂಭವಾಗಿದ್ದು, ಒಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಸಂಸ್ಥೆಯು ಹಿಂದೂ ಮಹಿಳೆ ಮತ್ತು ಮಕ್ಕಳ ಮೇಲೆ ನಡೆದ ದೈಹಿಕ ಹಲ್ಲೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ, ಹಾಗೆಯೇ ಕಾಳಿಬಾರಿ ಪ್ರದೇಶದ ಹಿಂದೂಗಳ ಧಾರ್ಮಿಕ ಸ್ಥಳಗಳ ಮೇಲೆ ನಡೆದ ವಿಧ್ವಂಸಕ ದಾಳಿಯ ನಂತರ ಆಕ್ರೋಶ ವ್ಯಕ್ತಪಡಿಸಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳು!