ಕದನ ವಿರಾಮ ಮಾತುಕತೆ ವಿಫಲವಾದರೆ, ಯುದ್ಧಕ್ಕೆ ಪರ್ಯಾಯವಿಲ್ಲ! Pakistan Afghanistan War

ಪಾಕಿಸ್ತಾನದ ರಕ್ಷಣಾ ಸಚಿವರಿಂದ ಅಫ್ಘಾನಿಸ್ತಾನಕ್ಕೆ ಯುದ್ಧದ ಬೆದರಿಕೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಅಫ್ಘಾನಿಸ್ತಾನದೊಂದಿಗೆ ನಡೆಯುತ್ತಿರುವ ಮಾತುಕತೆಗಳಲ್ಲಿ ಯಾವುದೇ ಒಪ್ಪಂದವಾಗದಿದ್ದರೆ, ಬಹಿರಂಗ ಯುದ್ಧ ಪ್ರಾರಂಭವಾಗಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಬೆದರಿಕೆ ಹಾಕಿದ್ದಾರೆ. ಅಕ್ಟೋಬರ್ ೨೫ ರಂದು ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯ ಎರಡನೇ ಸುತ್ತು ನಡೆಯುತ್ತಿದ್ದಾಗ ಆಸಿಫ್ ಅವರು ಈ ಹೇಳಿಕೆ ನೀಡಿದ್ದಾರೆ.