ಕಾನ್ಪುರ (ಉತ್ತರ ಪ್ರದೇಶ) ಗ್ರಾಮದಲ್ಲಿ ಅಪರಿಚಿತರಿಂದ ಶಿವದೇವಾಲಯದ ಮೂರ್ತಿಗಳ ಧ್ವಂಸ Shiva Temple Vandalized Gauri Lakkha Village

ಈ ಚಿತ್ರವನ್ನು ಕೇವಲ ಪರಿಸ್ಥಿತಿಯನ್ನು ತೋರಿಸಲು ಬಳಸಲಾಗಿದೆ, ಮತ್ತು ಯಾರಿಗೂ ಭಾವನಾತ್ಮಕವಾಗಿ ಧಕ್ಕೆ ತರುವ ಉದ್ದೇಶವಿಲ್ಲ.

ಕಾನ್ಪುರ (ಉತ್ತರ ಪ್ರದೇಶ) – ಕಾನ್ಪುರ ಜಿಲ್ಲೆಯ ಗೌರಿ ಲಕ್ಖಾ ಎಂಬ ಗ್ರಾಮದಲ್ಲಿ ಅಕ್ಟೋಬರ್ ೨೫ರ ರಾತ್ರಿ ಅಪರಿಚಿತರು ಇಲ್ಲಿನ ಶಿವದೇವಾಲಯಕ್ಕೆ ನುಗ್ಗಿ, ಶಿವ, ನಂದಿ ಮತ್ತು ಇತರ ದೇವತೆಗಳ ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆ. ಬೆಳಿಗ್ಗೆ ಈ ಘಟನೆ ತಿಳಿದುಬಂದ ನಂತರ ಇಡೀ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದೆ. ಗ್ರಾಮಸ್ಥರು ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು. ಘಟನೆಯ ಗಂಭೀರತೆಯನ್ನು ಮನಗಂಡ ಪೊಲೀಸ್ ಇನ್ಸ್‌ಪೆಕ್ಟರ್ ಆಶಿಶ ಕುಮಾರ ಚೌಬೆ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಿ, ಶೀಘ್ರದಲ್ಲೇ ಹೊಸ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದಾಗಿ ಭರವಸೆ ನೀಡಿದರು.

ಸಂಪಾದಕೀಯ ನಿಲುವು

ದೇಶದಲ್ಲಿ ಇಂತಹ ಘಟನೆಗಳ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೊಳಿಸುವುದು ಈಗ ಅವಶ್ಯಕವಾಗಿದೆ!