ಮುಸ್ಲಿಂ ಯುವಕನಿಂದ ಹಿಂದೂ ಯುವತಿಗೆ ಮದುವೆಯ ಭರವಸೆ ನೀಡಿ ಲೈಂಗಿಕ ಶೋಷಣೆ ಮತ್ತು ವಂಚನೆ

  • ಬೆಂಗಳೂರಿನಲ್ಲಿ ಲವ್ ಜಿಹಾದ್

  • ಇಸ್ಲಾಂಗೆ ಮತಾಂತರಗೊಳ್ಳುವಂತೆ ಮುಸ್ಲಿಂ ಯುವಕನ ಪೋಷಕರಿಂದ ಷರತ್ತು

ಬೆಂಗಳೂರು – ಇಲ್ಲಿ ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಇಟ್ಟುಕೊಂಡು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಹಮ್ಮದ್ ಇಶಾಕ್ ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

೧. ಅಕ್ಟೋಬರ್ ೧೭, ೨೦೨೪ ರಂದು ‘ಇನ್‌ಸ್ಟಾಗ್ರಾಮ್’ ಮೂಲಕ ಸಂತ್ರಸ್ತ ಯುವತಿ ಮತ್ತು ಆರೋಪಿ ಇಶಾಕ್ ಅವರ ಪರಿಚಯ ಆಗಿತ್ತು. ನಂತರ ಅವರ ಸ್ನೇಹ ಬೆಳೆದು ಪ್ರೇಮ ಸಂಬಂಧ ಪ್ರಾರಂಭವಾಯಿತು.

೨. ನಂತರ ಅಕ್ಟೋಬರ್ ೩೦ ರಂದು ಇಬ್ಬರೂ ಮೊದಲ ಬಾರಿಗೆ ತಣಿಸಂದ್ರದ ಒಂದು ಮಾಲ್‌ನಲ್ಲಿ ಭೇಟಿಯಾದರು. ಆ ಬಳಿಕ ‘ಮದುವೆ ಆಗುತ್ತೇನೆ’ ಎಂದು ಹೇಳಿ ಆತ ಹಲವು ಬಾರಿ ಆಕೆಯೊಂದಿಗೆ ದೈಹಿಕ ಸಂಬಂಧ ಇಟ್ಟುಕೊಂಡಿದ್ದನು; ಆದರೆ ಸೆಪ್ಟೆಂಬರ್ ೧೪, ೨೦೨೫ ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡನು.

೩. ಈ ವಿಷಯ ತಿಳಿದ ಹಿಂದೂ ಯುವತಿ ಆತನನ್ನು ಪ್ರಶ್ನಿಸಿದಾಗ, “ನಿನ್ನ ದಾರಿ ನೀನು ನೋಡು” ಎಂದು ಹೇಳಿದ್ದಾನೆ. ಇದರ ನಂತರ, ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.

೪. ಈ ಸಂದರ್ಭದಲ್ಲಿ ಇಶಾಕ್‌ನ ಪೋಷಕರು ಯುವತಿಗೆ ದೂರವಾಣಿ ಕರೆ ಮಾಡಿ, “ನೀನು ಇಶಾಕ್‌ನನ್ನು ಮದುವೆಯಾಗಬೇಕಾದರೆ ಇಸ್ಲಾಂ ಸ್ವೀಕರಿಸಬೇಕು” ಎಂದು ಷರತ್ತು ಹಾಕಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸ್ಲಿಂ ಯುವಕರನ್ನು ನಂಬುವ ತಪ್ಪನ್ನು ಹಿಂದೂ ಯುವತಿಯರು ಇನ್ನೆಷ್ಟು ದಿನ ಮುಂದುವರೆಸುತ್ತಾರೆ?