ದೆಹಲಿಯಿಂದ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಭಯೋತ್ಪಾದಕರ ಬಂಧನ : Terrorist Arrested

ಒಬ್ಬ ಭಯೋತ್ಪಾದಕನಿಗೆ 19 ವರ್ಷ, ಮತ್ತೊಬ್ಬನಿಗೆ 20 ವರ್ಷ ವಯಸ್ಸು

ನವದೆಹಲಿ – ಇಲ್ಲಿನ ಪೊಲೀಸರು ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ’ (ಐಸಿಸ್) ಭಯೋತ್ಪಾದಕ ಸಂಘಟನೆಯ ಜಾಲವನ್ನು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ. ಅವರ ಹೆಸರುಗಳು ಮಹಮ್ಮದ್ ಅದ್ನಾನ್ ಖಾನ್ ಅಲಿಯಾಸ್ ಅಬು ಮುಹರಿಬ್ (ವಯಸ್ಸು 19 ವರ್ಷ) ಮತ್ತು ಅದ್ನಾನ್ ಖಾನ್ ಅಲಿಯಾಸ್ ಅಬು ಮುಹಮ್ಮದ್ (ವಯಸ್ಸು 20 ವರ್ಷ) ಎಂದು ಗುರುತಿಸಲಾಗಿದೆ.

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಒಬ್ಬ ಭಯೋತ್ಪಾದಕ!

ಮಹಮ್ಮದ್ ಅದ್ನಾನ್ ಖಾನ್ ನನ್ನು ಈ ಹಿಂದೆ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಬಂಧಿಸಿತ್ತು. ಅವನು ಜ್ಞಾನವಾಪಿ ಪ್ರಕರಣದ ಬಗ್ಗೆ ತೀರ್ಪು ನೀಡಿದ್ದ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ. ಖಾನ್ ಈ ಪ್ರಕರಣದಲ್ಲಿ 2024 ರಿಂದ ಜಾಮೀನಿನ ಮೇಲೆ ಹೊರಗಿದ್ದ. (ಇಂತಹ ಭಯೋತ್ಪಾದಕರಿಗೆ ಜಾಮೀನು ಸಿಗುತ್ತದೆ; ಆದರೆ ಸುಳ್ಳು ಆರೋಪದಲ್ಲಿ ಸಿಲುಕಿರುವ ಹಿಂದುತ್ವನಿಷ್ಠರಿಗೆ ಜಾಮೀನು ಏಕೆ ಸಿಗುವುದಿಲ್ಲ? ಎಂಬ ಪ್ರಶ್ನೆ ಹಿಂದುಗಳ ಮನಸ್ಸಿನಲ್ಲಿ ಮೂಡುತ್ತದೆ! – ಸಂಪಾದಕರು)