ಮಾದಕ ವಸ್ತುಗಳ ಅಡ್ಡೆಗಳು ಮತ್ತು ಕಳ್ಳಸಾಗಣೆಯ ವಿರೋಧ

ವಾಷಿಂಗ್ಟನ್ ಡಿ.ಸಿ. (ಅಮೇರಿಕಾ) – ಪ್ರಶಾಂತ ಮಹಾಸಾಗರದಲ್ಲಿ ಅಮೇರಿಕಾದ ನೆರೆಯ ದ್ವೀಪ ರಾಷ್ಟ್ರವಾದ ವೆನೆಜುವೆಲಾ ದ್ವೀಪದ ಮೇಲೆ ಅಮೇರಿಕಾ ಶೀಘ್ರದಲ್ಲೇ ಆಕ್ರಮಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೆನೆಜುವೆಲಾದಲ್ಲಿನ ಮಾದಕ ವಸ್ತುಗಳ ಅಡ್ಡೆಗಳು ಮತ್ತು ಕಳ್ಳಸಾಗಣೆ ಮಾರ್ಗಗಳ ಮೇಲೆ ದಾಳಿ ನಡೆಸಲು ಅಮೇರಿಕಾ ಯೋಜಿಸುತ್ತಿದೆ. ಅಮೇರಿಕಾಕ್ಕೆ ಮಾದಕ ವಸ್ತುಗಳ ಸಾಗಣೆಯನ್ನು ನಿಲ್ಲಿಸಲು ವೆನೆಜುವೆಲಾ ಜೊತೆ ರಾಜತಾಂತ್ರಿಕ ಮಾತುಕತೆಗಳ ಆಯ್ಕೆಯೂ ತೆರೆದಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೇರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗಸೆತ್ ಅವರು ಯುರೋಪಿನಲ್ಲಿರುವ ಅಮೇರಿಕಾದ ನೌಕಾಪಡೆಯ ಅತ್ಯಾಧುನಿಕ ವಿಮಾನವಾಹಕ ನೌಕೆ ‘ಜೆರಾಲ್ಡ್ ಆರ್. ಫೋರ್ಡ್’ ಅನ್ನು ವೆನೆಜುವೆಲಾ ಸಮೀಪದ ಸಮುದ್ರಕ್ಕೆ ಕಳುಹಿಸಲು ಆದೇಶಿಸಿದ್ದಾರೆ.
ನಾವು ಸಂಕಷ್ಟವನ್ನು ಎದುರಿಸಲು ಸಿದ್ಧ – ವೆನೆಜುವೆಲಾ ಅಧ್ಯಕ್ಷ

ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರು, ಅಮೇರಿಕಾದ ಬೆದರಿಕೆಯನ್ನು ಎದುರಿಸಲು ರಷ್ಯಾದಿಂದ ಪಡೆದ 5 ಸಾವಿರ ‘ಇಗ್ಲಾ-ಎಸ್’ ಕ್ಷಿಪಣಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಶಸ್ತ್ರಾಸ್ತ್ರಗಳು ಯಾವುದೇ ಸಾಮ್ರಾಜ್ಯಶಾಹಿ ಬೆದರಿಕೆಗೆ ಪ್ರತಿಕ್ರಿಯಿಸಲು ಸಿದ್ಧವಾಗಿವೆ ಮತ್ತು ವೆನೆಜುವೆಲಾದ ಸೈನ್ಯವು ಮಾತೃಭೂಮಿಯ ಪ್ರತಿಯೊಂದು ಇಂಚನ್ನೂ ರಕ್ಷಿಸಲು ಸನ್ನದ್ಧವಾಗಿದೆ ಎಂದಿದ್ದಾರೆ.
ಅಮೇರಿಕಾ ವೆನೆಜುವೆಲಾದ ಮಾದಕ ವಸ್ತು ಕಳ್ಳಸಾಗಣೆ ಹಡಗುಗಳ ಮೇಲೆ ದಾಳಿ
ಕಳೆದ ಕೆಲವು ವಾರಗಳಲ್ಲಿ ಅಮೇರಿಕಾವು ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ವೆನೆಜುವೆಲಾದ ನೌಕೆಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಇದುವರೆಗೆ 43 ಜನರು ಸಾವನ್ನಪ್ಪಿದ್ದಾರೆ. ಆಗಸ್ಟ್ 7 ರಂದು ಅಮೇರಿಕಾ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಮೇಲೆ 5 ಕೋಟಿ ಡಾಲರ್‌ಗಳ (420 ಕೋಟಿ ರೂಪಾಯಿ) ಬಹುಮಾನವನ್ನು ಘೋಷಿಸಿತ್ತು. ಅಲ್ಲದೆ, ಅವರಿಗೆ ಸಂಬಂಧಿಸಿದ 70 ಕೋಟಿ ಡಾಲರ್‌ಗಳಿಗಿಂತ (5 ಸಾವಿರದ 880 ಕೋಟಿ ರೂಪಾಯಿಗಳಿಗಿಂತ) ಹೆಚ್ಚಿನ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ, ಇದರಲ್ಲಿ 2 ಖಾಸಗಿ ವಿಮಾನಗಳು ಸೇರಿವೆ. ಮಡುರೊ ಅವರು ಮಾದಕ ವಸ್ತುಗಳ ಕಳ್ಳಸಾಗಣೆದಾರರಾಗಿದ್ದು, ಅವರು ಫೆಂಟಾನಿಲ್-ಮಿಶ್ರಿತ ಕೊಕೇನ್ ಎಂಬ ಮಾದಕ ವಸ್ತುವನ್ನು ಅಮೇರಿಕಾಕ್ಕೆ ಕಳ್ಳಸಾಗಣೆ ಮಾಡಲು ಮಾದಕ ವಸ್ತು ಉತ್ಪಾದನೆ ಮತ್ತು ಮಾರಾಟ ಮಾಡುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಟ್ರಂಪ್ ಆಡಳಿತವು ಆರೋಪಿಸಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation