ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ಬಗ್ಗೆ ಫ್ರಾನ್ಸ್‌ನ ‘ಎಫ್.ಎ.ಟಿ.ಎಫ್.’ ಸಂಸ್ಥೆಯಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ – FATF Pakistan Grey List

‘ಎಫ್.ಎ.ಟಿ.ಎಫ್.’ ಅಕ್ಟೋಬರ್ ೨೦೨೨ ರಲ್ಲಿ ಪಾಕಿಸ್ತಾನದ ಹೆಸರನ್ನು ‘ಗ್ರೇ ಲಿಸ್ಟ್’ನಿಂದ ತೆಗೆದುಹಾಕಿತ್ತು!

(ಎಫ್.ಎ.ಟಿ.ಎಫ್. – ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್)

ಪ್ಯಾರಿಸ್ (ಫ್ರಾನ್ಸ್) – ‘ಗ್ರೇ ಲಿಸ್ಟ್’ನಿಂದ ತೆಗೆದುಹಾಕಿದರೂ, ಪಾಕಿಸ್ತಾನವು ಅಕ್ರಮ ಆರ್ಥಿಕ ವಹಿವಾಟುಗಳು ಅಥವಾ ಭಯೋತ್ಪಾದಕರಿಗೆ ಹಣಕಾಸು ಒದಗಿಸುವ ವಿಚಾರಣೆಯಿಂದ ಮುಕ್ತವಾಗುವುದಿಲ್ಲ ಎಂದು ‘ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್’ ಅಂದರೆ ‘ಎಫ್.ಎ.ಟಿ.ಎಫ್.’ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಪ್ರಪಂಚದಾದ್ಯಂತ ಭಯೋತ್ಪಾದಕರಿಗೆ ಹಣಕಾಸು ಪೂರೈಕೆಯ ಮೇಲೆ ನಿಗಾ ಇಡುವ ಸಂಸ್ಥೆ ಎಂದು ಗುರುತಿಸಿಕೊಂಡಿರುವ ‘ಎಫ್.ಎ.ಟಿ.ಎಫ್.’ ಮತ್ತೊಮ್ಮೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದೆ. ‘ಎಫ್.ಎ.ಟಿ.ಎಫ್.’ ಅಕ್ಟೋಬರ್ ೨೦೨೨ ರಲ್ಲಿ ಪಾಕಿಸ್ತಾನದ ಹೆಸರನ್ನು ‘ಗ್ರೇ ಲಿಸ್ಟ್’ನಿಂದ ತೆಗೆದುಹಾಕಿತ್ತು. ಫ್ರಾನ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಎಫ್.ಎ.ಟಿ.ಎಫ್.’ ಅಧ್ಯಕ್ಷರು ಈ ಹೇಳಿಕೆ ನೀಡಿರುವುದರಿಂದ, ಈಗ ಪಾಕಿಸ್ತಾನದ ಮೇಲೆ ಮತ್ತೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ‘ಎಫ್.ಎ.ಟಿ.ಎಫ್.’, ‘ಗ್ರೇ ಲಿಸ್ಟ್’ನಲ್ಲಿರುವ ಅಥವಾ ಅದರಿಂದ ಹೊರಬಂದ ಯಾವುದೇ ದೇಶವು ಅಕ್ರಮ ಆರ್ಥಿಕ ವಹಿವಾಟುಗಳು ಅಥವಾ ಭಯೋತ್ಪಾದಕರು ಮಾಡಿದ ಕ್ರಿಮಿನಲ್ ಕೃತ್ಯಗಳಿಂದ ಸುರಕ್ಷಿತವಾಗಿಲ್ಲ’ ಎಂದು ಹೇಳಿದೆ. ಪಾಕಿಸ್ತಾನದಂತಹ ದೇಶಗಳು ಹೆಚ್ಚು ಜಾಗರೂಕ ಮತ್ತು ಬದ್ಧವಾಗಿರಬೇಕು ಮತ್ತು ಈ ಕುರಿತು ‘ಎಫ್.ಎ.ಟಿ.ಎಫ್.’ ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದೆ ಎಂಬ ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ನೀಡಲಾಯಿತು.

‘ಎಫ್.ಎ.ಟಿ.ಎಫ್.’ ಎಂದರೇನು?

‘ಎಫ್.ಎ.ಟಿ.ಎಫ್.’ ಎಂಬುದು ಪ್ರಪಂಚದಾದ್ಯಂತ ಅನಿಯಂತ್ರಿತವಾಗಿ ಹರಿಯುವ ಹಣವು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುವುದನ್ನು ತಡೆಯಲು ಶ್ರಮಿಸುವ ಸಂಸ್ಥೆಯಾಗಿದೆ. ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ದುರ್ವ್ಯವಹಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದು ಮತ್ತು ಅಂತರರಾಷ್ಟ್ರೀಯ ಆರ್ಥಿಕ ವ್ಯವಸ್ಥೆಗೆ ಇರುವ ಅಪಾಯಗಳಿಂದ ರಕ್ಷಣೆ ಪಡೆಯಲು ಅಗತ್ಯವಾದ ವಿಷಯಗಳ ಮೇಲೆ ಈ ಸಂಸ್ಥೆ ನಿಗಾ ಇಡುತ್ತದೆ, ಹಾಗೆಯೇ ಆ ಬಗ್ಗೆ ಇತರ ದೇಶಗಳಿಗೆ ಅಗತ್ಯವಾದ ನಿಯಮಗಳು, ಮಾರ್ಗದರ್ಶಿ ಸೂಚಿ ಮತ್ತು ಕಾರ್ಯವಿಧಾನಗಳನ್ನು ಈ ಸಂಸ್ಥೆಯ ಮೂಲಕ ಸೂಚಿಸಲಾಗುತ್ತದೆ.

‘ಗ್ರೇ ಲಿಸ್ಟ್’ ಎಂದರೇನು?

‘ಎಫ್.ಎ.ಟಿ.ಎಫ್.’ ಈ ‘ಗ್ರೇ ಲಿಸ್ಟ್’ ಅನ್ನು ಸಿದ್ಧಪಡಿಸುತ್ತದೆ. ‘ಎಫ್.ಎ.ಟಿ.ಎಫ್.’ ಪ್ರಕಾರ, ಅಂತರರಾಷ್ಟ್ರೀಯ ಆರ್ಥಿಕ ದುರ್ವ್ಯವಹಾರವನ್ನು ತಡೆಯಲು ನಿರಂತರವಾಗಿ ವಿಫಲರಾಗುವ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವುದನ್ನು ತಡೆಯಲು ಸಾಧ್ಯವಾಗದ ಮತ್ತು ಆದ್ದರಿಂದ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ಟೀಕೆಗೆ ಗುರಿಯಾಗುವ ದೇಶಗಳನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ಪಟ್ಟಿಯಲ್ಲಿ ಪಾಕಿಸ್ತಾನವೂ ನಾಲ್ಕು ವರ್ಷಗಳಿಂದ ಇತ್ತು. ಪ್ರಸ್ತುತ ಈ ಪಟ್ಟಿಯಲ್ಲಿ ೨೩ ದೇಶಗಳಿವೆ.

ಸಂಪಾದಕೀಯ ನಿಲುವು

  • ಏಪ್ರಿಲ್‌ನಲ್ಲಿ ಪಾಕಿಸ್ತಾನವು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ ನಂತರ, ‘ಎಫ್.ಎ.ಟಿ.ಎಫ್.’ ಪಾಕಿಸ್ತಾನದ ಮೇಲೆ ತಕ್ಷಣ ಕ್ರಮ ಕೈಗೊಂಡು ಅದನ್ನು ಮತ್ತೆ ‘ಗ್ರೇ ಲಿಸ್ಟ್’ಗೆ ಏಕೆ ಸೇರಿಸಲಿಲ್ಲ?
  • ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದನ್ನು ತಡೆಯಲು ಪ್ರಪಂಚದಾದ್ಯಂತದ ಆರ್ಥಿಕ ವಹಿವಾಟುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದರೂ, ಪಾಕಿಸ್ತಾನವು ಭಾರತದ ವಿರುದ್ಧ ನಿರಂತರವಾಗಿ ಭಯೋತ್ಪಾದಕ ಕೃತ್ಯಗಳನ್ನು ಮಾಡುತ್ತಿದೆ. ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಒತ್ತಡದ ಬಗ್ಗೆ ಯಾವುದೇ ಚಿಂತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ, ‘ಎಫ್.ಎ.ಟಿ.ಎಫ್.’ ನಂತಹ ಸಂಸ್ಥೆಗಳ ಮೇಲೆ ಪ್ರಶ್ನೆ ಉದ್ಭವಿಸುತ್ತದೆ!