‘ಎಐ’ ದುರ್ಬಳಕೆ ತಡೆಯಲು ಪರವಾನಗಿ ವ್ಯವಸ್ಥೆ ಸಿದ್ಧಪಡಿಸಲು ಕೇಂದ್ರ ಸರಕಾರಕ್ಕೆ ಆದೇಶಿಸಿ! Supreme Court Artificial Intelligence

ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾದ ಅರ್ಜಿಯಲ್ಲಿ ಆಗ್ರಹ!

ನವದೆಹಲಿ – ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ (‘ಎಐ’ – ಕೃತಕ ಬುದ್ಧಿಮತ್ತೆ) ದುರ್ಬಳಕೆಯಿಂದ ದೇಶದ ನಾಗರಿಕರ ಗೌಪ್ಯತೆ, ಪ್ರತಿಷ್ಠೆ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಕಾರಣ, ಅದರ ಹೆಚ್ಚುತ್ತಿರುವ ದುರ್ಬಳಕೆಯನ್ನು ತಡೆಯಲು ಮತ್ತು ಸಮಗ್ರ ನಿಯಂತ್ರಣ ಹಾಗೂ ಪರವಾನಗಿ ವ್ಯವಸ್ಥೆಯನ್ನು ರೂಪಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನ್ಯಾಯವಾದಿ ಅನಿಲೇಂದ್ರ ಪಾಂಡೆ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

೧. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಕಲಾವಿದರು ಮತ್ತು ಪತ್ರಕರ್ತರನ್ನು ಗುರಿಯಾಗಿಸಿದ ‘ಡೀಪ್‌ಫೇಕ್’ನ (ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮೂಲಕ ವ್ಯಕ್ತಿಯ ಮುಖವನ್ನು ಬದಲಾಯಿಸಿ ವಂಚಿಸುವುದು) ಘಟನೆಗಳು ನಡೆದಿವೆ. ಅಕ್ಷಯ ಕುಮಾರ, ಕುಮಾರ ಸಾನು ಮತ್ತು ಪತ್ರಕರ್ತ ಸುಧೀರ್ ಚೌಧರಿ ಅವರು ಇಂತಹ ಘಟನೆಗಳನ್ನು ಎದುರಿಸಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

೨. ‘ಎಐ’ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇತರ ಉಚ್ಚ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಎಲ್ಲ ಪ್ರಕರಣಗಳನ್ನು ಸರ್ವೋಚ್ಚ ನ್ಯಾಯಾಲಯವು ತನ್ನ ಸುಪರ್ದಿಗೆ ತೆಗೆದುಕೊಂಡು, ನಂತರ ದೇಶಾದ್ಯಂತ ಏಕರೂಪದ ಕಾನೂನು ನಿಬಂಧನೆಗಳನ್ನು ಜಾರಿಗೊಳಿಸಲು ಒಟ್ಟಾಗಿ ವಿಚಾರಣೆ ನಡೆಸಬೇಕು ಎಂದೂ ಸಹ ಅರ್ಜಿಯಲ್ಲಿ ಆಗ್ರಹಿಸಲಾಗಿದೆ.