‘ಚಲನಚಿತ್ರದ ಹೆಸರನ್ನು ಬದಲಿಸಬಾರದಿತ್ತು'(ಅಂತೆ) – ನಟ ಮಹೇಶ ಮಾಂಜ್ರೇಕರ

  • ಹಿಂದುತ್ವನಿಷ್ಠರ ವಿರೋಧದ ನಂತರ ಚಲನಚಿತ್ರದ ‘ಮನಾಚೆ ಶ್ಲೋಕ’ ಹೆಸರನ್ನು ಬದಲಿಸಿದ ಪ್ರಕರಣ

  • ಅಸಂವೇದನಾಶೀಲ ಚಲನಚಿತ್ರ ನಿರ್ದೇಶಕ ಮತ್ತು ನಟ ಮಹೇಶ ಮಾಂಜ್ರೇಕರ ಅವರ ಉದ್ಧಟತನದ ಹೇಳಿಕೆ!

ಮುಂಬಯಿ – ಮರಾಠಿ ಚಿತ್ರರಂಗದ ಅನೇಕ ಕಲಾವಿದರು ಮೃಣ್ಮಯಿಯವರಿಗೆ (‘ಮನಾಚೆ ಶ್ಲೋಕ’ ಚಲನಚಿತ್ರದ ನಿರ್ದೇಶಕಿ ಮೃಣ್ಮಯಿ ದೇಶಪಾಂಡೆ) ಬೆಂಬಲ ನೀಡಿ ಈ ವಿವಾದವನ್ನು ವಿರೋಧಿಸಿದ್ದರು; ಆದರೆ ಮೃಣ್ಮಯಿ ತಕ್ಷಣವೇ ಹಿಂದೆಗೆದು ಚಲನಚಿತ್ರದ ಹೆಸರನ್ನು ಬದಲಿಸುವ ನಿರ್ಧಾರ ತೆಗೆದುಕೊಂಡರು. ‘ಮನಾಚೆ ಶ್ಲೋಕ’ ಎನ್ನುವುದು ‘ಮನವಾ’ ಮತ್ತು ‘ಶ್ಲೋಕ’ ಎಂಬ ಪಾತ್ರಗಳ ಕಥೆಯಾಗಿತ್ತು. ಅವರು ಅದರ ಬಗ್ಗೆ ದೃಢವಾಗಿ ನಿಲ್ಲಬೇಕಿತ್ತು. ಚಲನಚಿತ್ರದ ಹೆಸರನ್ನು ಬದಲಿಸಬಾರದಿತ್ತು. ‘ಶಿಕ್ಷಣಾಚ್ಯಾ ಆಯಚಾ ಘೋ’ ಚಲನಚಿತ್ರದ ಸಮಯದಲ್ಲಿ ನಾನು ‘ಖಂಡಿತಾ ಹೆಸರನ್ನು ಬದಲಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದೆ; ಏಕೆಂದರೆ ಇದು ಎದುರಿಗಿರುವವರಿಗೆ ಮತ್ತಷ್ಟು ಪ್ರೋತ್ಸಾಹ ನೀಡುತ್ತದೆ, ಇವರ ಮೇಲೆ ಆಕ್ರಮಣ ಮಾಡಿದರೆ ಇವರು ಹೆಸರನ್ನು ಬದಲಾಯಿಸುತ್ತಾರೆ ಎಂದು ನಟ ಮತ್ತು ನಿರ್ದೇಶಕ ಮಹೇಶ ಮಾಂಜ್ರೇಕರ ಅವರು ಉದ್ಧಟತನದ ಹೇಳಿಕೆಯನ್ನು ನೀಡಿದರು. ಇದರಿಂದ ಧರ್ಮ, ಆಧ್ಯಾತ್ಮ, ಸಂಸ್ಕೃತಿ ಮತ್ತು ಸಮರ್ಥ ರಾಮದಾಸ ಸ್ವಾಮಿಗಳ ಬಗ್ಗೆ ಅವರ ಅಸಂವೇದನಾಶೀಲತೆ ಕಂಡು ಬಂದಿತು. ‘ಲೋಕಸತ್ತಾ ಡಿಜಿಟಲ್ ಅಡ್ಡಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
‘ತೂ ಬೋಲ್ ನಾ’ ಎಂಬ ಹೊಸ ಹೆಸರಿನಲ್ಲಿ ಈ ಚಲನಚಿತ್ರವು ಬಿಡುಗಡೆಯಾಗಿದೆ.

ಸಂಪಾದಕೀಯ ನಿಲುವು

ಸಮರ್ಥ ರಾಮದಾಸ ಸ್ವಾಮಿಗಳ ಪವಿತ್ರ ‘ಮನಾಚೆ ಶ್ಲೋಕ’ಗೂ ಈ ಚಲನಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೆ, ಈ ಹೆಸರನ್ನು ಏಕೆ ನೀಡಲಾಗಿತ್ತು? ಸಂಯಮ ಮತ್ತು ನೈತಿಕತೆಯನ್ನು ಬೋಧಿಸುವ ‘ಮನಾಚೆ ಶ್ಲೋಕ’ ಮತ್ತು ವಿವಾಹೇತರ ಸಂಬಂಧಗಳನ್ನು ಪ್ರೋತ್ಸಾಹಿಸುವ ಚಲನಚಿತ್ರವು ಪರಸ್ಪರ ವಿರುದ್ಧವಾಗಿದ್ದರೂ, ಹಿಂದೂಗಳ ಧಾರ್ಮಿಕ ಭಾವನೆಗಳ ಬಗ್ಗೆ ಮಾಂಜ್ರೇಕರಗೆ ಯಾವುದೇ ಕಾಳಜಿ ಇಲ್ಲ ಎಂದು ಹೇಳಬೇಕಾಗುತ್ತದೆ!