
ಭಾಗ್ಯನಗರ (ತೆಲಂಗಾಣ) – ನಗರದ ಘಟಕೇಸರ್ ಪ್ರದೇಶದಲ್ಲಿ ಗೋ-ಕಳ್ಳಸಾಗಣೆ ಮಾಡುವವರು ಪ್ರಶಾಂತ ಅಲಿಯಾಸ್ ಸೋನು ಎಂಬ ಗೋರಕ್ಷಕನ ಮೇಲೆ ಗುಂಡು ಹಾರಿಸಿದ ಪರಿಣಾಮ ಸೋನು ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಪ್ರಶಾಂತ ಕಳೆದ 5-6 ವರ್ಷಗಳಿಂದ ಗೋರಕ್ಷಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ.
ಕೆಲವರು ಅಕ್ಟೋಬರ್ 22 ರ ಸಂಜೆ 5.30 ಕ್ಕೆ ಪ್ರಶಾಂತ ಅವರನ್ನು ಪೋಚರಾಂನಲ್ಲಿರುವ ಐಟಿ ಕಾರಿಡಾರ್ ಗೆ ಕರೆದರು ಮತ್ತು ಅವರಿಗೆ ಗೋವುಗಳ ಕಳ್ಳಸಾಗಣೆಯ ಸುಳ್ಳು ಮಾಹಿತಿ ನೀಡಿ ಅವರ ಮೇಲೆ ಗುಂಡು ಹಾರಿಸಲಾಯಿತು.
1. ಗುಂಡಿನ ದಾಳಿಯ ಹಿಂದೆ ಎಐಎಂಐಎಂ ! – ಭಾಜಪ ನಾಯಕಿ ಮಾಧವಿ ಲತಾ
ಭಾಜಪ ನಾಯಕಿ ಮಾಧವಿ ಲತಾ ಅವರು ಈ ದಾಳಿಗೆ ಎಐಎಂಐಎಂ(ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್. ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪೊಲೀಸರು ಅಪರಾಧಿಯನ್ನು ಬಂಧಿಸದಿದ್ದರೆ, ಅದರರ್ಥ ಅವರು ಅಪರಾಧಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಪ್ರಶಾಂತಗೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ನಾನು ಸವಾಲು ಹಾಕುತ್ತೇನೆ ಎಂದು ಲತಾ ಅವರು ಹೇಳಿದರು.
2. ಭಾಜಪ ಸಂಸದ ಈಟಲ ರಾಜೇಂದರ್ ಅವರು ಗುಂಡು ಹಾರಿಸಿದವನು ಇಬ್ರಾಹಿಂ ಎಂದು ತಿಳಿಸಿದರು.
3. ಭಾಜಪ ರಾಜ್ಯಾಧ್ಯಕ್ಷ ಎನ್. ರಾಮಚಂದ್ರ ರಾವ್ ಅವರು, ಭಾಜಪ ಮತ್ತು ರಾ.ಸ್ವ.ಸಂಘದ ಕಾರ್ಯಕರ್ತರಿಗೆ ಬೆದರಿಕೆ ಹಾಕಲು ಎಐಎಂಐಎಂ ಗೂಂಡಾಗಳು ಈ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದರು.
4. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು, ಹೈದರಾಬಾದನಲ್ಲಿ ಮಾಫಿಯಾ ಚಟುವಟಿಕೆಗಳು ಮತ್ತು ಅಕ್ರಮ ಗೋವು ಕಳ್ಳಸಾಗಣೆಯನ್ನು ನಿಲ್ಲಿಸಬೇಕು. ಪೊಲೀಸರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಗೋರಕ್ಷಣೆಗಾಗಿ ಇನ್ನೂ 10 ಮಕ್ಕಳನ್ನು ಬಲಿ ನೀಡುತ್ತೇನೆ – ಪ್ರಶಾಂತ ಅವರ ತಾಯಿದೇಶದಲ್ಲಿ ಗೋರಕ್ಷಣೆಗಾಗಿ ಇಂತಹ ತ್ಯಾಗ ಮಾಡುವ ತಾಯಂದಿರಿದ್ದಾರೆ; ಆದರೆ ಅಧಿಕಾರದಲ್ಲಿರುವ ನಾಯಕರಿಲ್ಲ ಎಂಬುದನ್ನು ನಾವು ಗಮನಿಸಬೇಕು |
ಸಂಪಾದಕೀಯ ನಿಲುವು
|
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !