
೧. ಪರಾತ್ಪರ ಗುರು ಡಾ. ಆಠವಲೆಯವರು, “ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಸೇವೆಯ ಫಲನಿಷ್ಪತ್ತಿ ಹೆಚ್ಚಿದೆ, ಎಂದು ಹೇಳಿದ ನಂತರ ಶ್ರೀಚಿತ್‌ಶಕ್ತಿಯವರು ವ್ಯಕ್ತಪಡಿಸಿದ ವಿಚಾರಗಳನ್ನು ಇಲ್ಲಿ ಕೊಡಲಾಗಿದೆ.
“ದೇವರು ನನಗೆ ನೀಡಿರುವ ಸೇವೆಯನ್ನು ನಾನು ಮನಃಪೂರ್ವಕವಾಗಿ ಸ್ವೀಕರಿಸಿದೆನು ಮತ್ತು ಪ್ರತಿಯೊಂದು ಸೇವೆಯನ್ನು ಆನಂದದಿಂದ ಮಾಡಿದೆನು. ನಾನು ಆಶ್ರಮದಲ್ಲಿ ಹೆಜ್ಜೆ ಇಟ್ಟಿದಾಗಿನಿಂದ ಇದುವರೆಗೆ ಜೀವನದಲ್ಲಿ ಎಂದಿಗೂ ನನ್ನ ಸೇವೆಯ ಫಲನಿಷ್ಪತ್ತಿಯ ವೇಗವನ್ನು ಕಡಿಮೆ ಆಗಲು ಬಿಡಲಿಲ್ಲ. ಯಾವಾಗಲೂ ‘ಸೇವೆಯ ಫಲನಿಷ್ಪತ್ತಿ ಹೇಗೆ ಹೆಚ್ಚಾಗುವುದು ?, ಎಂದು ಪ್ರಯತ್ನಿಸಿದೆನು. ಫಲನಿಷ್ಪತ್ತಿ ಎಂದರೆ ‘ಕೇವಲ ಸ್ಥೂಲದಿಂದ ಕಾಣಿಸುವ ಕೃತಿಯಾಗದೇ ಅದರಿಂದ ‘ಸಾಧಕನ ಅಂತರ್ಮನಸ್ಸಿನ ಸಾಧನೆಯಾಗುವುದು ಅಪೇಕ್ಷಿತವಿದೆ. ಸೇವೆಯ ಬಗ್ಗೆ ಭಾವವಿದ್ದರೆ ಮಾತ್ರ ಅಂತರ್ಮನಸ್ಸಿನಿಂದ ಸಾಧನೆಯಾಗುತ್ತದೆ. ಪರಿಸ್ಥಿತಿಯು ಎಷ್ಟೇ ಪ್ರತಿಕೂಲವಾಗಿರಲಿ ಅಥವಾ ಇದ್ದಕ್ಕಿದ್ದಂತೆ ಒಂದೇ ಸಮಯದಲ್ಲಿ ಅನೇಕ ಸೇವೆಗಳು ಬರಲಿ, ‘ನಾನು ಯಾವಾಗಲೂ ಒಳಗಿನಿಂದ ಸ್ಥಿರವಾಗಿದ್ದು ದೇವರಿಗೆ ಸಂಪೂರ್ಣಶರಣಾಗಿ ಬಂದಿರುವ ಸೇವೆಗಳನ್ನು ಕಡಿಮೆ ಸಮಯದಲ್ಲಿ ಹೇಗೆ ಪರಿಪೂರ್ಣ ಮಾಡಬಹುದು ? ಮತ್ತು ಒಂದೇ ಸಮಯದಲ್ಲಿ ಅನೇಕ ಸೇವೆಗಳನ್ನು ಹೇಗೆ ಮಾಡಬಹುದು ?, ಎಂದು ನೋಡುತ್ತೇನೆ. ಇದರಲ್ಲಿ ನಾನು ‘ನನ್ನ ಕ್ಷಮತೆಯೊಂದಿಗೆ ಸಮಷ್ಟಿಯ ವಿಚಾರವನ್ನೂ ಮಾಡಿ ಅವರಿಗೂ ಸೇವೆಯಿಂದ ಆನಂದ ಸಿಗಬೇಕು ಮತ್ತು ಅವರ ಸೇವೆಯಲ್ಲಿನ ಉತ್ಸಾಹ ಉಳಿಯುವಂತೆ ಪ್ರಯತ್ನಿಸುತ್ತೇನೆ.
ಈ ಹಿಂದೆ ರಾತ್ರಿ ಮಲಗುವ ಮುನ್ನ ನಾನು ಪ್ರತಿದಿನ ನನ್ನ ಸೇವೆಯ ಮತ್ತು ಸಾಧನೆಯ ಫಲನಿಷ್ಪತ್ತಿಯ ಬಗ್ಗೆ ಸ್ವತಃ ವರದಿಯನ್ನು ತೆಗೆದುಕೊಂಡು ದೇವರ ಚರಣಗಳಲ್ಲಿ ಅರ್ಪಿಸುತ್ತಿದ್ದೆನು ಮತ್ತು ‘ಮರುದಿನ ಇನ್ನೂ ಸೇವೆ ಒಳ್ಳೆಯದಾಗಬೇಕು, ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಆ ರೀತಿ ಪ್ರಯತ್ನಿಸುತ್ತಿದ್ದೆನು. ಇಂತಹ ಪರಿಪೂರ್ಣ ಸೇವೆಯ ಫಲನಿಷ್ಪತ್ತಿಯ ಆನಂದ ಅನುಭವಿಸುವಂತಹದಾಗಿರುತ್ತದೆ ! ಇದರಿಂದಲೇ ದೇವರು ನನ್ನನ್ನು ರೂಪಿಸಿದನು.
ಈಗ ಫಲನಿಷ್ಪತ್ತಿಯ ವಿಚಾರವನ್ನು ಮಾಡುವ ಅವಶ್ಯಕತೆ ಇಲ್ಲ. ನೀರಿನ ಪ್ರವಾಹದಂತೆ ಸಹಜವಾಗಿ ಸಾಧನೆಯಲ್ಲಿ ಹರಿಯುತ್ತಿರುವುದು, ಇಷ್ಟೇ ಈಗ ನನ್ನ ಕೈಯಲ್ಲಿದೆ. ಉಳಿದೆಲ್ಲವನ್ನು ಪ.ಪೂ. ಡಾಕ್ಟರರೇ ನೋಡಿಕೊಳ್ಳುತ್ತಿದ್ದಾರೆ; ಏಕೆಂದರೆ ನಮಗೆ ನೀರಿನಲ್ಲಿ ಹರಿಯುವ ಯಾವುದಾದರೊಂದು ಹೂವಿನಂತೆ ಈಶ್ವರನ ಚರಣಗಳ ದಿಶೆಯಿಂದ ಸಹಜವಾಗಿ ಹರಿದೊಯ್ಯಲು ಬೇಕಾಗುವ ಗತಿಯೂ ಅವರೇ ಆಗಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ ಮತ್ತು ನಂತರ ‘ನಾನು ಸಾಧನೆ ಮಾಡುತ್ತೇನೆ, ಎಂಬ ಅಹಂಕಾರ ಇರುವುದಿಲ್ಲ. ಎಲ್ಲವೂ ತನ್ನಿಂದತಾನೇ ಆಗುತ್ತದೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೮.೫.೨೦೨೦)
ಮಾಯೆಯಿಂದ ಅಲಿಪ್ತರಾಗಿದ್ದು ಮಾಯೆಯಲ್ಲಿ ಬ್ರಹ್ಮನನ್ನು ನೋಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !
೧. ಪೂರ್ಣವೇಳೆ ಸಾಧನೆಗಾಗಿ ಗೋವಾಗೆ ಬಂದ ನಂತರ ಮನೆಯಲ್ಲಿ ಓರ್ವ ದಂಪತಿಗಳು ವಾಸಿಸುವಾಗ ಅವರಿಗೆ ಪರಕೀಯಭಾವನೆ ಬರದಂತೆ ನೋಡಿಕೊಳ್ಳುವುದು ಮತ್ತು ‘ಈ ಮನೆ ಗುರುಗಳದ್ದೇ ಆಗಿದೆ’, ಎಂಬ ಭಾವವಿರುವುದು
‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಸಾಧನೆಯಲ್ಲಿ ಹೊಸಬರಾಗಿದ್ದರು. ಆಗ ಪೂರ್ಣವೇಳೆ ಸೇವೆ ಮಾಡಲು ಅವರು ೨೦೦೨ ರಲ್ಲಿ ಗೋವಾದಲ್ಲಿ ವಾಸಿಸಲು ಬಂದಿದ್ದರು. ಸದ್ಗುರು ಡಾ. ಮುಕುಲ ಗಾಡಗೀಳ ಇವರೂ ಕೂಡ ಅವರ ಒಳ್ಳೆಯ ನೌಕರಿಯನ್ನು ತ್ಯಜಿಸಿ ಪೂರ್ಣವೇಳೆ ಸಾಧನೆ ಮಾಡುವ ಸಾಹಸದ ನಿರ್ಧಾರವನ್ನು ತೆಗೆದುಕೊಂಡಿದ್ದರು. ಫೋಂಡಾ (ಗೋವಾ)ದಲ್ಲಿ ಅವರು ವಾಸಿಸುತ್ತಿರುವ ಮನೆಯಲ್ಲಿ ಅವರು ಓರ್ವ ಸಾಧಕದಂಪತಿಗೆ ಇರಲು ಒಂದು ಕೋಣೆಯನ್ನು ಕೊಟ್ಟಿದ್ದರು. ಶ್ರೀ. ರಾಜೇಶ ಗಾವಕರ ಮತ್ತು ಅವರ ಪತ್ನಿ ಸೌ. ರಕ್ಷಂದಾ ಗಾವಕರ ಇವರು ಅಲ್ಲಿ ವಾಸಿಸುತ್ತಿದ್ದರು. ಸದ್ಗುರು ಡಾ. ಮುಕುಲ ಗಾಡಗೀಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆ ಮಾತನಾಡುವಾಗ ಅವರು, “ನಮಗೆ ನಾವು ಬೇರೆಯವರ ಮನೆಯಲ್ಲಿ ವಾಸಿಸುತ್ತೇವೆ, ಎಂದು ಯಾವಾಗಲೂ ಅನಿಸಲಿಲ್ಲ; ಏಕೆಂದರೆ ಸದ್ಗುರು ಡಾ. ಗಾಡಗೀಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ನಮಗೆ ಎಂದಿಗೂ ‘ಇದು ಅವರ ಸ್ವಂತದ್ದು’, ಎಂಬ ರೀತಿಯಲ್ಲಿ ನಡೆದುಕೊಳ್ಳಲಿಲ್ಲ. ಈ ರೀತಿ ನಡೆದುಕೊಳ್ಳುವುದು ದೂರವೇ ಉಳಿಯಿತು; ಆದರೆ ‘ಅವರಿಗೆ ನಮ್ಮ ಸ್ವಂತ ಮನೆಯಿದೆ’, ಎಂದೂ ಅನಿಸುತ್ತಿರಲಿಲ್ಲ. ಅವರಿಗೆ ‘ಅವರು ಶ್ರೀ ಗುರುಗಳ ಮನೆಯಾಗಿದೆ ಮತ್ತು ನಾವು ಅವರು ನೀಡಿದ ಮನೆಯಲ್ಲಿ ವಾಸಿಸುತ್ತಿದ್ದೇವೆ’, ಎಂದು ಅನಿಸುತ್ತಿತ್ತು” ಎಂದು ಹೇಳಿದರು. ಇದರಿಂದ ಗಮನಕ್ಕೆ ಬರುವುದೇನೆಂದರೆ, ಆವಾಗಿನಿಂದಲೂ ಆ ಇಬ್ಬರೂ ಮಾಯೆಯಿಂದ ಅಲಿಪ್ತರಾಗಿದ್ದರು.
೨. ಬಾಲ್ಯದಿಂದಲೂ ಸರಳ ಹಾಗೂ ಸಾದಾ ಜೀವನಶೈಲಿ ಮತ್ತು ತನ್ನನ್ನು ಪ್ರತ್ಯೇಕ ಎಂದು ತಿಳಿಯದಿರುವುದು
ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಜೀವನಶೈಲಿ-ವರ್ತನೆಯು ಮೊದಲಿನಿಂದಲೂ ಅತ್ಯಂತ ಸರಳವಾಗಿದೆ. ಅವರು ಎಂದಿಗೂ ಅವರ ತಾಯಿ-ತಂದೆಯವರಿಂದ ತಮಗಾಗಿ ಬೇರೆ ಏನು ಕೇಳಲಿಲ್ಲ. ಅವರಿಗೆ ಏನು ಸಿಕ್ಕಿದರೂ ಅದರಲ್ಲಿ ಸಂತೃಪ್ತರಾಗುತ್ತಿದ್ದರು. ಶಾಲೆ-ಕಾಲೇಜಿನಲ್ಲಿರುವಾಗ ತಾಯಿಯು ಕೊಟ್ಟಿದ ಊಟದ ಡಬ್ಬವಿರಲಿ ಅಥವಾ ವೈಯಕ್ತಿಕ ವಸ್ತುಗಳಿರಲಿ, ಈ ಎಲ್ಲವನ್ನು ಅವರು ಗೆಳತಿಯರೊಂದಿಗೆ ಹಂಚಿಕೊಳ್ಳುತ್ತಿದ್ದರು.
ಅವರ ತಂದೆ (ಪೂ. ಸದಾಶಿವ ಪರಾಂಜಪೆ (ಸನಾತನದ ೮೯ ನೇ ಸಂತರು, ವಯಸ್ಸು ೮೨ ವರ್ಷ)) ಅವರಿಗೆ ಕಾರಿನಲ್ಲಿ ಕಾಲೇಜಿಗೆ ಬಿಡಲು ಬರುತ್ತಿದ್ದರು. ಆಗ ಅವರು ತಂದೆಯವರಿಗೆ, “ಅಪ್ಪಾ, ನೀವು ನನಗೆ ಕಾಲೇಜಿನಿಂದ ಸ್ವಲ್ಪ ದೂರದಲ್ಲಿ ಬಿಡಿ. ಮುಂದೆ ನಾನು ನಡೆದುಕೊಂಡು ಹೋಗುತ್ತೇನೆ” ಎಂದು ಹೇಳುತ್ತಿದ್ದರು. ಅದರ ಕಾರಣವೇನೆಂದರೆ, ಅವರಿಗೆ ‘ಆ ಸಮಯದಲ್ಲಿ ಯಾವುದೇ ಗೆಳತಿಯರ ಬಳಿ ಕಾರು ಇರಲಿಲ್ಲ ಮತ್ತು ತಾನು ಕಾರಿನಲ್ಲಿ ಬಂದಿರುವುದನ್ನು ಗೆಳತಿಯರು ನೋಡಿದರೆ ಅವರಿಗೆ ಆತ್ಮೀಯತೆ ಬೆಳೆಸಲು ಕಷ್ಟವಾಗುವುದು, ಎಂದು ಅನಿಸುತ್ತಿತ್ತು. ‘ನಾನು ಶ್ರೀಮಂತೆ’, ಎಂದು ಗೆಳತಿಯರಿಗೆ ಅನಿಸಬಾರದು’, ಎಂಬ ವಿಚಾರವನ್ನೂ ಮಾಡುತ್ತಿದ್ದರು. ಇತರರಿಂದ ಪ್ರೀತಿ ಸಿಗಬೇಕು, ಸಮಷ್ಟಿಯ ಜೀವನವನ್ನು ನಡೆಸಬೇಕು ಮತ್ತು ಅವರಿಗೆ ಪ್ರೀತಿಯನ್ನು ತೋರಿಸಬೇಕು; ಎಂದು ಅವರು ತಮ್ಮ ಸುಖ-ಸೌಲಭ್ಯಗಳನ್ನು ತ್ಯಾಗ ಮಾಡಿದರು.
೩. ಮೊದಲಿನಿಂದಲೂ ಸಾಮಾನ್ಯ ಸೀರೆಗಳನ್ನು ಉಡುವುದು ಮತ್ತು ಪ್ರವಾಸ ಮಾಡಲು ಆರಂಭಿಸಿದ ನಂತರ ಪರಾತ್ಪರ ಗುರುಗಳು ಹೇಳಿದ ನಂತರ ಒಳ್ಳೆಯ ಸೀರೆಗಳನ್ನು ಉಡಲು ಪ್ರಾರಂಭಿಸುವುದು ರಾಮನಾಥಿ ಆಶ್ರಮಕ್ಕೆ ಬಂದ ನಂತರ ಅನೇಕ ವರ್ಷಗಳ ವರೆಗೆ ಅವರು ಮನೆಯಲ್ಲಿ ಉಡುವಂತಹ ಸಾಮಾನ್ಯ ಸೀರೆಗಳನ್ನೇ ಉಡುತ್ತಿದ್ದರು. ಅವರು ಅನೇಕ ಬಾರಿ ತಮ್ಮ ತಾಯಿ ಪೂ. (ಸೌ.) ಶೈಲಜಾ ಪರಂಜಪೆಅಜ್ಜಿ (ಸನಾತನದ ೯೦ ನೇ ಸಂತರು, ವಯಸ್ಸು ೭೭ ವರ್ಷ) ಇವರ ಸೀರೆಗಳನ್ನು ಉಡುತ್ತಿದ್ದರು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಬಳಿ ಒಂದು ಚಿಕ್ಕ ಬಟ್ಟೆಯ ಚೀಲ ಇರುತ್ತಿತ್ತು. ಅದನ್ನು ತೆಗೆದುಕೊಂಡು ಅವರು ಆಶ್ರಮದ ಹೊರಗೆ ಸೂಕ್ಷ್ಮ ಪರೀಕ್ಷಣೆಯ ಸೇವೆಗೆ ಹೋಗುತ್ತಿದ್ದರು. ಸುಮಾರು ೧೨ ವರ್ಷಗಳ ವರೆಗೆ ಅವರು ಆ ಚೀಲವನ್ನು ಬಳಸಿದರು. ಇದರಿಂದ ಅವರ ಮಿತವ್ಯಯ ಗಮನಕ್ಕೆ ಬರುತ್ತದೆ. ಅವರಿಗೆ ಒಳ್ಳೆಯ ಚೀಲ ಅಥವಾ ಸೀರೆಗಳನ್ನು ತೆಗೆದುಕೊಳ್ಳಲು ಸಾಧ್ಯವಿತ್ತು; ಆದರೆ ಅವರು ಆ ವಸ್ತುಗಳ ತ್ಯಾಗ ಮಾಡಿದರು. ಯಾವಾಗ ಅವರ ಪ್ರವಾಸ ಆರಂಭವಾಯಿತೋ, ಆಗ ಸ್ವತಃ ಪರಾತ್ಪರ ಗುರುದೇವರು ಅವರಿಗೆ, “ಹೊರಗೆ ಹೋಗುವಾಗ ನಿಮ್ಮ ಬಳಿ ಸಾಕಾಗುವಷ್ಟು ಸೀರೆಗಳಿವೆಯಲ್ಲ ? ಎಂದು ಕೇಳಿದರು. ಸನಾತನ ಸಂಸ್ಥೆಯ ಪ್ರತಿನಿಧಿ ಎಂದು ನೀವು ಹೊರಗಿನ ಸಂತರನ್ನು ಮತ್ತು ಗಣ್ಯ ವ್ಯಕ್ತಿಗಳನ್ನು ಭೇಟಿಯಾಗುತ್ತೀರಿ. ಇದೊಂದು ಅವಿಸ್ಮರಣೀಯ ಇತಿಹಾಸವಾಗಲಿದೆ,” ಎಂದು ಹೇಳಿದರು. ಅಂದಿನಿಂದ ಅವರು ಹೊರಗೆ ಹೋಗುವಾಗ ಒಳ್ಳೆಯ ಸೀರೆಗಳನ್ನು ಉಡಲು ಪ್ರಾರಂಭಿಸಿದರು.
ಸಾಯೀಬಾಬಾರವರಿಗೆ ಅವರ ಓರ್ವ ಭಕ್ತನು, “ಬಾಬಾ, ನೀವು ಎಷ್ಟೊಂದು ಮಹಾನ ಸಂತರಾಗಿದ್ದಿರಿ. ಆದರೂ ಹೀಗೆ ಹರಿದ ಬಟ್ಟೆಗಳಲ್ಲಿ ಮತ್ತು ಹಾಳುಬಿದ್ದ ಜಾಗದಲ್ಲಿ ಏಕೆ ವಾಸಿಸುತ್ತೀರಿ ?” ಎಂದು ಕೇಳಿದನು. ಅದಕ್ಕೆ ಸಾಯೀಬಾಬಾರವರು, “ಇಂದು ನನ್ನ ಮೈಮೇಲೆ ಹರಿದ ಬಟ್ಟೆಗಳಿವೆ ಮತ್ತು ವಾಸಿಸಲು ಹಾಳುಬಿದ್ದ ಮನೆಯಿದೆ. ನಾಳೆ ಯಾರಾದರು ನನಗೆ ರಾಜವಸ್ತ್ರಗಳನ್ನು ತಂದುಕೊಟ್ಟರೆ ಮತ್ತು ಅರಮನೆಯಲ್ಲಿಟ್ಟರೆ, ಅದನ್ನು ನಾನು ಆ ರಾಜವಸ್ತ್ರಗಳನ್ನೂ ಧರಿಸುವೆನು ಮತ್ತು ಅರಮನೆಯಲ್ಲಿಯೂ ಅಷ್ಟೇ ಆನಂದದಿಂದ ಇರುತ್ತೇನೆ,” ಎಂದು ಹೇಳಿದರು. ‘ಸಂತರು ಮಾಯೆ ಮತ್ತು ಬ್ರಹ್ಮ ಈ ಎಲ್ಲದರ ಆಚೆಗೆ ಇರುತ್ತಾರೆ’, ಇದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಉದಾಹರಣೆಯಿಂದ ಕಲಿಯಲು ಸಿಕ್ಕಿತು.
೪. ಪ್ರವಾಸದಲ್ಲಿರುವಾಗ ತಮ್ಮ ವಿಶೇಷ ಪರಿಚಯವನ್ನು ಮಾಡಿಕೊಡದಿರುವುದು
ಇತ್ತೀಚಿನ ಉದಾಹರಣೆ ಕೊಡುವುದಾದರೆ, ಸೇವೆಯ ನಿಮಿತ್ತ ಪ್ರಯಾಣ ಮಾಡುವಾಗ ಅವರು ಎಂದಿಗೂ ತಾವಾಗಿ ತಮ್ಮ ಪರಿಚಯವನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ’ ಎಂದು ಮಾಡಿಕೊಡುವುದಿಲ್ಲ. ಅವರು, “ಎದುರಿಗಿರುವವರಿಗೆ ನಾವು ಅವರಲ್ಲಿ ಒಬ್ಬರು’, ಎಂದು ಅನಿಸಬೇಕು. ಆ ರೀತಿ ನಮ್ಮ ನಡೆ-ನುಡಿಯಾಗಿರಬೇಕು. ಆದ್ದರಿಂದ ಸಮಷ್ಟಿಯೊಂದಿಗೆ ಒಳ್ಳೆಯ ಆತ್ಮೀಯತೆಯನ್ನು ಸಾಧಿಸಿ ಅವರನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಮುಖ್ಯವೆಂದರೆ ಎದುರಿನ ಹೊಸ ವ್ಯಕ್ತಿಗಳ ಮೇಲೆ ನಮ್ಮ ಉಚ್ಚ ಪದವಿಯ ಬಗ್ಗೆ ಒತ್ತಡ ಬರುವುದಿಲ್ಲ. ಅವರಿಗೂ ನಮ್ಮೊಂದಿಗೆ ಮನಮುಕ್ತತೆಯಿಂದ ಮಾತನಾಡಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ತಮ್ಮ ಜೀವನದಲ್ಲಿ ಮೊದಲಿನಿಂದಲೂ ಈ ವಿವಿಧ ದೈವೀ ಅನನ್ಯತೆಯನ್ನು (ಅಲಿಪ್ತತೆಯನ್ನು) ರೂಢಿಸಿಕೊಂಡಿದ್ದಾರೆ; ಬಹುಶಃ ಅವುಗಳು ಅವರಲ್ಲಿ ಹುಟ್ಟಿದಾಗಿನಿಂದಲೇ ಇವೆ. ಎಲ್ಲರ ಮಧ್ಯೆ ಇದ್ದರೂ ಅವರು ಯಾವುದರಲ್ಲೂ ಇರುವುದಿಲ್ಲ. ಇದಕ್ಕೇ ‘ಮಾಯೆಯಿಂದ ನಿಜವಾದ ಅಲಿಪ್ತತೆ’ ಎಂದು ಹೇಳುತ್ತಾರೆ ಮತ್ತು ಇದೇ ಆ ಮಾಯೆಯಲ್ಲಿನ ಬ್ರಹ್ಮವನ್ನು ನೋಡುವುದು !’
– ಓರ್ವ ಸಾಧಕ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಶ್ರೀ ರಾಜಮಾತಂಗಿ ಮಹಾಯಜ್ಞ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !