ಹೆಚ್ಚುತ್ತಿರುವ ಬಿಟ್‌ಕಾಯಿನ್ ಮಹತ್ವ !

೧. ಬಿಟ್‌ಕಾಯಿನ್‌ನ ಅವಶ್ಯಕತೆ

೨೦೦೮ ನೆಯ ಇಸವಿಯಲ್ಲಿ ಜಗತ್ತಿನಾದ್ಯಂತ ಆರ್ಥಿಕ ಹಿಂಜರಿತವಾದಾಗ, ಬ್ಯಾಂಕ್ ಮತ್ತು ಸರಕಾರದ ಮೇಲಿನ ಜನರ ವಿಶ್ವಾಸ ಕುಸಿಯಿತು. ಆ ಸಮಯದಲ್ಲಿ ಸತೋಷಿ ನಾಕಿಮೊಟೊ ಎಂಬ ವ್ಯಕ್ತಿ ಒಂದು ಲೇಖನವನ್ನು ಪ್ರಕಟಿಸಿದನು. ಅದರಲ್ಲಿ ಬ್ಯಾಂಕ್‌ಗಳಿಲ್ಲದೆ ವ್ಯವಹಾರಗಳನ್ನು ಮಾಡಲು ಸಾಧ್ಯವಿದೆ ಮತ್ತು ಪ್ರತಿ ವ್ಯವಹಾರದ ದಾಖಲೆಯನ್ನು ಎಲ್ಲರಿಗೂ ಪಾರದರ್ಶಕವಾಗಿ ಇಡಬಹುದು ಎಂಬ ಕಲ್ಪನೆಯನ್ನು ಮಂಡಿಸಿದರು ಆ ಕಲ್ಪನೆಯಿಂದಲೇ ಬಿಟ್‌ಕಾಯಿನ್ ಜನಿಸಿತು. ೨೦೧೭ ರ ಹೊತ್ತಿಗೆ ಜಗತ್ತಿನಾದ್ಯಂತ ೧ ಲಕ್ಷಕ್ಕೂ ಹೆಚ್ಚು ಸೂಪರ್ ಮಾರ್ಕೆಟ್ ಚೈನ್‌ಗಳು ಮತ್ತು ದೊಡ್ಡ ವ್ಯಾಪಾರಿಗಳು ಬಿಟ್‌ಕಾಯಿನ್‌ನಲ್ಲಿನ ವ್ಯವಹಾರಗಳಿಗೆ ಮಾನ್ಯತೆ ನೀಡಿದ್ದರು.

೨. ಬಿಟ್‌ಕಾಯಿನ್ ಹೇಗೆ ಕೆಲಸ ಮಾಡುತ್ತದೆ ?

ಈ ವ್ಯವಹಾರಗಳಿಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಯೂ ಸಾರ್ವಜನಿಕವಾಗಿ ‘ಬ್ಲಾಕ್‌ಚೈನ್ನಲ್ಲಿ ದಾಖಲಾಗುತ್ತದೆ. ಈ ದಾಖಲೆಗಳನ್ನು ಇಡಲು ಜಗತ್ತಿನಾದ್ಯಂತದ ಕಂಪ್ಯೂಟರ್‌ಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಈ ಕಂಪ್ಯೂಟರ್‌ಗಳನ್ನು ‘ಮೈನರ್ಸ್ ಎಂದು ಕರೆಯಲಾಗುತ್ತದೆ. ಇವರು ವ್ಯವಹಾರಗಳನ್ನು ಖಚಿತಪಡಿಸುತ್ತಾರೆ ಮತ್ತು ಅವರಿಗೆ ಬಹುಮಾನವಾಗಿ (ರಿವಾರ್ಡ್ಸ್) ಹೊಸ ಬಿಟ್‌ಕಾಯಿನ್‌ಗಳು ಸಿಗುತ್ತವೆ. ಆದರೆ, ಇದರಿಂದ ಹಣದುಬ್ಬರ (ಇನ್ಫ್ಲೇಶನ್) ಹೆಚ್ಚಾಗಬಾರದು ಎಂಬ ಕಾರಣಕ್ಕೆ ಒಂದು ನಿಯಮವಿದೆ: ಒಟ್ಟಾರೆಯಾಗಿ ೨೧ ಕೋಟಿ ಬಿಟ್‌ಕಾಯಿನ್‌ಗಳಿಗಿಂತ ಹೆಚ್ಚು ಮೊತ್ತವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ: ಒಂದು ಕಿಲೋ ಈರುಳ್ಳಿ ಇದೆ ಮತ್ತು ಅದನ್ನು ಖರೀದಿಸಲು ಎಲ್ಲರ ಬಳಿಯೂ ೧೦ ಸಾವಿರ ರೂಪಾಯಿಗಳಿವೆ ಎಂದಿಟ್ಟುಕೊಳ್ಳಿ. ಆಗ, ಆ ಈರುಳ್ಳಿ ಹೆಚ್ಚು ಹಣ ಹೊಂದಿರುವ ವ್ಯಕ್ತಿಗೆ ಸಿಗುತ್ತದೆ, ಅಂದರೆ ಈರುಳ್ಳಿಯ ಮೌಲ್ಯವು ತಾನಾಗಿಯೇ ಹೆಚ್ಚಾಯಿತು. ಅದೇ ರೀತಿ, ಬಿಟ್‌ಕಾಯಿನ್ ನಿರಂತರವಾಗಿ ಸೃಷ್ಟಿಯಾಗುತ್ತಿದ್ದರೆ, ಅದರ ಮೌಲ್ಯ ಕಡಿಮೆಯಾಗಿ ಹಣದುಬ್ಬರ ಹೆಚ್ಚಾಗುತ್ತದೆ. ಆದುದರಿಂದಲೇ ಅದರ ಉತ್ಪಾದನೆಯನ್ನು ಸೀಮಿತಗೊಳಿಸಲಾಗಿದೆ.

೩. ‘ಬಿಟ್‌ಕಾಯಿನ್ ಮೈನಿಂಗ್ ಎಂದರೆ ಏನು ?

ಜನರು ತಮ್ಮದೇ ಕಂಪ್ಯೂಟರ್‌ಗಳಲ್ಲಿ ಬಿಟ್‌ಕಾಯಿನ್‌ನ ‘ಅಲ್ಗಾರಿದಮ್ (ಗಣನವಿಧಿ) ಅನ್ನು ನಡೆಸುತ್ತಾರೆ. ಯಾರು ಒಂದು ವ್ಯವಹಾರವನ್ನು ಯಶಸ್ವಿಯಾಗಿ ಪರಿಶೀಲಿಸುವಲ್ಲಿ ಯಶಸ್ವಿಯಾಗುತ್ತಾರೋ, ಅವರಿಗೆ ಬಿಟ್‌ಕಾಯಿನ್ ಬಹುಮಾನವಾಗಿ ಸಿಗುತ್ತದೆ. ಈ ಪ್ರಕ್ರಿಯೆಯು ವಿಕೇಂದ್ರೀಕೃತವಾಗಿದೆ. ಆದ್ದರಿಂದ, ಯಾವುದೇ ಒಂದು ಸಂಸ್ಥೆಯ ಬಳಿ ನಿಯಂತ್ರಣವಿರುವುದಿಲ್ಲ. ಇದರಿಂದ ‘ಹ್ಯಾಕಿಂಗ್ ಅಥವಾ ಭ್ರಷ್ಟಾಚಾರದ ಅಪಾಯ ಕಡಿಮೆಯಾಗುತ್ತದೆ.

ನಮ್ಮಲ್ಲಿರುವ ಹಣದಿಂದ ಬಿಟ್‌ಕಾಯಿನ್ ಖರೀದಿಸಿದಾಗ, ನಮಗೆ ನಮ್ಮದೇ ಆದ ಒಂದು ‘ವಾಲೆಟ್ (ಡಿಜಿಟಲ್ ಪಾಕೇಟ್) ಸಿದ್ಧವಾಗುತ್ತದೆ, ಇದರಲ್ಲಿ ನೀವು ಈ ಚಲಾವಣೆಯನ್ನು ಸಂಗ್ರಹಿಸಬಹುದು. ಇಂತಹ ಪ್ರತಿ ಖರೀದಿಯಾದಾಗ ಒಂದು ಹೊಸ ಬ್ಲಾಕ್ ಸೃಷ್ಟಿಯಾಗುತ್ತದೆ ಮತ್ತು ಈ ಪ್ರಕ್ರಿಯೆಯನ್ನು ‘ಮೈನಿಂಗ್ ಎಂದು ಕರೆಯಲಾಗುತ್ತದೆ. ಒಂದು ಬ್ಲಾಕ್‌ಚೈನ್‌ನಲ್ಲಿ ಎಷ್ಟು ಹೆಚ್ಚು ಆರ್ಥಿಕ ವ್ಯವಹಾರಗಳು ನಡೆಯುತ್ತವೆಯೋ, ಅಷ್ಟು ಹೆಚ್ಚು ಬ್ಲಾಕ್‌ಗಳು ನಿರ್ಮಾಣವಾಗುತ್ತವೆ ಮತ್ತು ಅಷ್ಟು ಹೆಚ್ಚು ‘ಮೈನಿಂಗ್ ನಡೆಯುತ್ತದೆ.

೪. ಬಿಟ್‌ಕಾಯಿನ್‌ಗೆ ಸಂಬಂಧಿಸಿದ ಸೌಲಭ್ಯ ಹೊಂದಿರುವ ವ್ಯಕ್ತಿಗಳ ನಡುವೆಯೇ ವ್ಯವಹಾರಗಳು ನಡೆಯುವುದು

ಬಹುತೇಕ ಎಲ್ಲ ‘ಷೇರು ಮಾರುಕಟ್ಟೆಗಳು (ಸಮಭಾಗ ಮಾರಾಟ) ನಿಯಂತ್ರಕ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ, ಅಂದರೆ ವ್ಯವಹಾರಗಳ ಮೇಲೆ ನಿಯಂತ್ರಣ ಮಂಡಳಿಯ ಗಮನವಿರುತ್ತದೆ; ಆದರೆ ಇಲ್ಲಿ ಹಾಗಲ್ಲ. ಬಿಟ್‌ಕಾಯಿನ್ ವ್ಯವಹಾರಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ ಮತ್ತು ಈ ವ್ಯವಹಾರಗಳು ‘ಬ್ಲಾಕ್‌ಚೈನ್ ನೆಟ್‌ವರ್ಕ್ನಲ್ಲಿರುವ ಕೇವಲ ಇಬ್ಬರು ವ್ಯಕ್ತಿಗಳ ನಡುವೆ ಮಾತ್ರ ನಡೆಯುತ್ತವೆ ಮತ್ತು ಇದರ ಮೇಲೆ ಬೇರೆ ಯಾರಿಗೂ ನಿಯಂತ್ರಣವಿರುವುದಿಲ್ಲ. ಯಾವುದೇ ಮಧ್ಯವರ್ತಿ ಇರುವುದಿಲ್ಲ.

ಬಿಟ್‌ಕಾಯಿನ್‌ನ ವ್ಯವಹಾರಗಳನ್ನು ಕಡಿಮೆ ಸಮಯದಲ್ಲಿ ಮತ್ತು ವರ್ಷದ ೩೬೫ ದಿನಗಳು, ಹಾಗೆಯೇ ೨೪ ಗಂಟೆಗಳ ಕಾಲ ನಾವು ಮಾಡಬಹುದು. ಬ್ಯಾಂಕ್ ರಜೆಗಳು ಇತ್ಯಾದಿಗಳ ಪರಿಣಾಮ ಈ ವ್ಯವಹಾರಗಳ ಮೇಲೆ ಆಗುವುದಿಲ್ಲ. ಆನ್‌ಲೈನ್ ನಲ್ಲಿ ಹಣದ ವಿನಿಮಯ ನಡೆಯಬಹುದು. ವ್ಯಕ್ತಿಯ ಮಾಹಿತಿಯನ್ನು ಅತ್ಯಂತ ಗುಪ್ತವಾಗಿ ಇಡಲಾಗುತ್ತದೆ. ಅಷ್ಟೇ ಅಲ್ಲದೇ, ಈ ಮಾಹಿತಿ ಮತ್ತು ನಿಮ್ಮ ಬಿಟ್‌ಕಾಯಿನ್ ಹಣವು ಎನ್‌ಕ್ರಿಪ್ಟ್ ಸ್ವರೂಪದಲ್ಲಿ, ಅಂದರೆ ಕಂಪ್ಯೂಟರ್‌ನ ಸಾಂಕೇತಿಕ ಭಾಷೆಯಲ್ಲಿ (ಕಂಪ್ಯೂಟರ್ ಕೋಡೆಡ್) ಇರುತ್ತದೆ. ಬಿಟ್‌ಕಾಯಿನ್ ವ್ಯವಸ್ಥೆಯನ್ನು ನಡೆಸುವವರಿಗೂ ಅದು ತಿಳಿದಿರುವುದಿಲ್ಲ.

೫. ಸುರಕ್ಷಿತ ಮತ್ತು ‘ಹ್ಯಾಕ್ ಮಾಡುವುದು ಅಸಾಧ್ಯ !

‘ಕ್ರಿಪ್ಟೋಕರೆನ್ಸಿಗಾಗಿ ‘ಬ್ಲಾಕ್‌ಚೈನ್ ಎಂಬ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದು ‘ದಾಖಲೆಗಳ (ರೆಕಾರ್ಡ್ಸ್‌ನ) ಒಂದು ಪಟ್ಟಿಯಾಗಿದ್ದು, ಇದರಲ್ಲಿ ವಿವಿಧ ಸ್ವರೂಪದ ಮಾಹಿತಿಯನ್ನು ದೊಡ್ಡ ಪ್ರಮಾಣದಲ್ಲಿ ‘ರಿಯಲ್ ಟೈಮ್ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಪ್ರತಿ ಸರಪಳಿಯೂ ತನ್ನ ಹಿಂದಿನ ಸರಪಳಿಯ ಮಾಹಿತಿಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಈ ಮಾಹಿತಿಯನ್ನು ಒಮ್ಮೆ ದಾಖಲಿಸಿದ ನಂತರ ಬದಲಾಯಿಸಲು ಬರುವುದಿಲ್ಲ. ಇದು ಒಂದು ಬೀಗ ಹಾಕಿದ ಪೆಟ್ಟಿಗೆಯಲ್ಲಿ ಮಾಹಿತಿಯನ್ನಿಟ್ಟು, ಅಂತಹ ಅನೇಕ ಪೆಟ್ಟಿಗೆಗಳನ್ನು ಒಂದರೊಳಗೊಂದು ಇರಿಸಿದಂತೆ ಇರುತ್ತದೆ. ಇದರಿಂದ ಅದರೊಂದಿಗೆ ಯಾವುದೇ ಅಕ್ರಮ ಮಾಡುವುದು ತುಂಬಾ ಕಷ್ಟವಾಗುತ್ತದೆ. ಪರಿಣಾಮವಾಗಿ, ಈ ವ್ಯವಹಾರಗಳು ಅತ್ಯಂತ ಸುರಕ್ಷಿತವಾಗಿರುತ್ತವೆ ಮತ್ತು ಈ ವ್ಯವಸ್ಥೆ ಯನ್ನು ‘ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ, ಇದರಲ್ಲಿ ಗೌಪ್ಯತೆ ಇದ್ದು, ವ್ಯವಹಾರವು ಕೇವಲ ಇಬ್ಬರು ವ್ಯಕ್ತಿಗಳು ಅಥವಾ ಕಂಪ್ಯೂಟರ್‌ಗಳ ನಡುವೆ ನಡೆಯುತ್ತದೆ. ಆದ್ದರಿಂದ ಅದರ ಮೇಲೆ ಬೇರೆ ಯಾರಿಗೂ ನಿಯಂತ್ರಣವಿರುವುದಿಲ್ಲ.

೬. ಬಿಟ್‌ಕಾಯಿನ್‌ನ ಅನಾನುಕೂಲಗಳು

ಬಿಟ್‌ಕಾಯಿನ್‌ಗೆ ಎಲ್ಲ ಕಡೆ ಮಾನ್ಯತೆ ಇಲ್ಲ. ನೀವು ನಿಮ್ಮ ಎಲ್ಲ ವಸ್ತುಗಳನ್ನು ಇದರ ಮೂಲಕ ಖರೀದಿಸಲು ಸಾಧ್ಯವಿಲ್ಲ. ಇದರಲ್ಲಿ ಸರಕಾರದ ಭಾಗವು ಇರುವುದಿಲ್ಲ. ಆದ್ದರಿಂದ ಇದನ್ನು ಕೆಲವು ಕಾನೂನುಬಾಹಿರ ವ್ಯವಹಾರಗಳಿಗೆ ಬಳಸಲಾಗುತ್ತದೆ. ಇದರ ಮೌಲ್ಯವು ತುಂಬಾ ಬದಲಾಗುತ್ತದೆ, ಅಂದರೆ ಕೆಲವೇ ಸೆಕೆಂಡುಗಳಲ್ಲಿ ದರ ಹೆಚ್ಚಾಗುತ್ತದೆ ಅಥವಾ ಕಡಿಮೆಯಾಗುತ್ತದೆ. ಇದರಲ್ಲಿ ‘ಮರುಪಾವತಿ ವ್ಯವಸ್ಥೆ (ರಿಫಂಡ್ ವ್ಯವಸ್ಥೆ) ಇರುವುದಿಲ್ಲ, ಅಂದರೆ ತಪ್ಪಾಗಿ ಕಳುಹಿಸಿದ ಬಿಟ್‌ಕಾಯಿನ್ ಹಿಂತಿರುಗಿ ಸಿಗುವುದಿಲ್ಲ.

೭. ಬಿಟ್‌ಕಾಯಿನ್ ಹೊಸ ದಾಖಲೆಯನ್ನು ಮಾಡುವುದು

ಜಗತ್ತಿನ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಆದ ಬಿಟ್‌ಕಾಯಿನ್ ಕಳೆದ ತಿಂಗಳಿನಲ್ಲಿ ಹೊಸ ದಾಖಲೆ ಸ್ಥಾಪಿಸಿತು. ಅದರ ಮೌಲ್ಯ, ಅಂದರೆ ಒಂದು ಬಿಟ್‌ಕಾಯಿನ್‌ನ ಮೌಲ್ಯ ೧ ಲಕ್ಷ ೨೫ ಸಾವಿರ ಡಾಲರ್‌ಗಳ (ಸುಮಾರು ೧ ಕೋಟಿ ೧೦ ಲಕ್ಷ ರೂಪಾಯಿ) ಗಡಿಯನ್ನು ದಾಟಿತು. ಪ್ರಸ್ತುತ, ಇದನ್ನು ಜನರ ನಡುವೆ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತಿದೆ, ಪರಿಣಾಮವಾಗಿ ಅದರ ಬೇಡಿಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದೆ. ಬಿಟ್‌ಕಾಯಿನ್ ಹೂಡಿಕೆದಾರರಿಗೆ ಭಾರಿ ಲಾಭವನ್ನು ನೀಡಿದೆ. ಅಮೆರಿಕದಲ್ಲಿ ಸರಕಾರಿ ಕಚೇರಿಗಳ ಕೆಲಸ ನಿಲ್ಲುವ ಬಗ್ಗೆ ಹೂಡಿಕೆದಾರರಿಗೆ ಆತಂಕವಿತ್ತು. ಇದೇ ಕಾರಣದಿಂದ ಬಿಟ್‌ಕಾಯಿನ್‌ನ ಬೆಲೆಯಲ್ಲಿ ಏರಿಕೆಯಾಯಿತು. ಅಮೆರಿಕನ್ ಷೇರು ಮಾರುಕಟ್ಟೆಯಲ್ಲಿನ ಏರಿಕೆ ಮತ್ತು ಬಿಟ್‌ಕಾಯಿನ್‌ಗೆ ಸಂಬಂಧಿಸಿದ ಹೊಸ ಹೂಡಿಕೆಗಳೂ ಬೆಲೆ ಏರಿಕೆಗೆ ಕಾರಣವಾದವು. ಬಿಟ್‌ಕಾಯಿನ್‌ನ ಈ ಏರಿಕೆಯ ಹಿಂದೆ, ಸಂಸ್ಥೆಗಳು ಅದನ್ನು ಸ್ವೀಕರಿಸುತ್ತಿರುವುದು ಒಂದು ದೊಡ್ಡ ಕಾರಣವಾಗಿದೆ. ಅನೇಕ ಸಾರ್ವಜನಿಕ ಸಂಸ್ಥೆಗಳು ಬಿಟ್‌ಕಾಯಿನ್‌ಅನ್ನು ಸಂಗ್ರಹಿಸಿ ಇಡುತ್ತಿವೆ.

೮. ಅಕ್ಟೋಬರ್ ಎಂದರೆ ‘ಅಪ್ಟೂಬರ್ !

ಅಕ್ಟೋಬರ್ ತಿಂಗಳು ಬಿಟ್‌ಕಾಯಿನ್‌ಗೆ ಯಾವಾಗಲೂ ಒಳ್ಳೆಯದಾಗಿರುತ್ತದೆ. ಇದನ್ನು ಅನೇಕ ಬಾರಿ ‘ಅಪ್ಟೋಬರ್ (Uptober) ಎಂದು ಕರೆಯಲಾಗುತ್ತದೆ. ಕಳೆದ ೧೦ ವರ್ಷಗಳಲ್ಲಿ ೯ ವರ್ಷಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬಿಟ್‌ಕಾಯಿನ್‌ನ ಮೌಲ್ಯ ಹೆಚ್ಚಾಗಿದೆ. ಈ ವರ್ಷದ ಏರಿಕೆಯಿಂದಾಗಿ ಬಿಟ್‌ಕಾಯಿನ್‌ನ ಮೌಲ್ಯದಲ್ಲಿ ಶೇ. ೩೦ ಕ್ಕೂ ಹೆಚ್ಚು ಹೆಚ್ಚಳವಾಗಿದೆ.

೯. ಹಣದ ಪಯಣ – ಧಾನ್ಯದಿಂದ ಬಿಟ್‌ಕಾಯಿನ್ ವರೆಗೆ !

ಆರಂಭದಲ್ಲಿ ‘ಬಾರ್ಟರ್ (ವಸ್ತುಗಳ ವಿನಿಮಯ) ಪದ್ಧತಿ ಇತ್ತು, ಇದರಲ್ಲಿ ಜನರು ತಮ್ಮಲ್ಲಿರುವ ಧಾನ್ಯಗಳಾದ ಅಕ್ಕಿ, ಗೋಧಿ ಇತ್ಯಾದಿಗಳನ್ನು ನೀಡಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ನಂತರ ಜನರು ಬಾಳಿಕೆ ಬರುವ ಮತ್ತು ಮೌಲ್ಯಯುತ ವಸ್ತುಗಳ ಕಡೆಗೆ ತಿರುಗಿದರು, ಉದಾಹರಣೆಗೆ, ಚಿನ್ನ-ಬೆಳ್ಳಿಯ ನಾಣ್ಯಗಳು, ಇತರ ಲೋಹಗಳ ನಾಣ್ಯಗಳು; ಆದರೆ ಚಿನ್ನವನ್ನು ಸಾಗಿಸುವುದು ಕಷ್ಟವಾದ್ದರಿಂದ, ಸರಕಾರ ಒಂದು ಆಯ್ಕೆಯನ್ನು ನೀಡಿತು; ಚಿನ್ನವನ್ನು ಸರಕಾರದ ಬಳಿ ಜಮಾ ಮಾಡಿರಿ ಮತ್ತು ಅದರ ಬದಲಾಗಿ ರಶೀದಿಯನ್ನು ತೆಗೆದುಕೊಳ್ಳಿ. ಈ ವ್ಯವಹಾರವೇ ನಂತರ ಕಾಗದದ ನೋಟುಗಳಾಗಿ ರೂಪಾಂತರಗೊಂಡಿತು. ನೋಟಿನ ಮೇಲೆ ‘ಮೈ ಧಾರಕ ಕೋ …. ರೂಪಿಯಾ ಅದಾ ಕರನೆಕಾ ವಚನ್ ದೇತಾ ಹೂ ಎಂದು ಬರೆದಿರುತ್ತದೆ, ಅಂದರೆ ನಿಮ್ಮ ಹಣದ ಮೌಲ್ಯವನ್ನು ಸರಕಾರ ನೀಡುತ್ತದೆ ಎಂಬ ಖಚಿತತೆಯನ್ನು ನೀಡುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಸರಕಾರ ಹೆಚ್ಚು ನೋಟುಗಳನ್ನು ಮುದ್ರಿಸಿ ಜನರಿಗೆ ಹಂಚಲು ಸಾಧ್ಯವೇ ? ಹಾಗೆ ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಎಲ್ಲರ ಬಳಿಯೂ ಸಾಕಷ್ಟು ನೋಟುಗಳಿರುತ್ತವೆ ಮತ್ತು ಖರೀದಿಸಲು ಇರುವ ವಸ್ತುಗಳು ಮಾತ್ರ ಸೀಮಿತವಾಗಿರುತ್ತವೆ, ಅಂದರೆ ಹಣದುಬ್ಬರವು ಬಹಳಷ್ಟು ಹೆಚ್ಚಾಗಿ ಎಲ್ಲವೂ ಕುಸಿದು ಬೀಳುತ್ತದೆ.

ಕಾಲಕ್ಕೆ ಅನುಗುಣವಾಗಿ ಹಣದ ರೂಪ ಬದಲಾಗುತ್ತಾ ಹೋಗಿದೆ; ಧಾನ್ಯ, ಚಿನ್ನ, ಕಾಗದ, ಬಿಟ್‌ಕಾಯಿನ್. ಬಿಟ್‌ಕಾಯಿನ್ ಎಂದರೆ ಜನರು ಸೃಷ್ಟಿಸಿದ; ಆದರೆ ಯಾರ ನಿಯಂತ್ರಣದಲ್ಲಿಯೂ ಇಲ್ಲದ ಚಲಾವಣೆ. ಭವಿಷ್ಯದಲ್ಲಿ ಹಣದ ರೂಪ ಇದೇ ಆಗಿರಬಹುದು.

ಶ್ರೀ ಗುರುಚರಣಾರ್ಪಣಮಸ್ತು |

– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ. (೮.೧೦.೨೦೨೫)

ಬಿಟ್‌ಕಾಯಿನ್ ಎಂಬುದು ಕ್ರಿಪ್ಟೋಕರೆನ್ಸಿಯ (ಭಾಸಮಾನ ಚಲಾವಣೆ) ಒಂದು ವಿಧವಾಗಿದೆ. ಈ ಚಲಾವಣೆಯು ಸರಕಾರ ಅಥವಾ ಬ್ಯಾಂಕಿನ ನಿಯಂತ್ರಣವಿಲ್ಲದೆ ನಡೆಯುತ್ತದೆ ಮತ್ತು ಇದರ ಮೌಲ್ಯವು ನಿರಂತರವಾಗಿ ಬದಲಾಗುತ್ತಿರುತ್ತದೆ. ಬಿಟ್‌ಕಾಯಿನ್ ಎಂದರೆ ಕೇವಲ ಇಂಟರ್‌ನೆಟ್‌ನಲ್ಲಿ ಅಸ್ತಿತ್ವದಲ್ಲಿರುವ ಹಣ. ಇದರ ನಾಣ್ಯ ಅಥವಾ ನೋಟುಗಳು ಇರುವುದಿಲ್ಲ; ಇದು ಸಂಪೂರ್ಣವಾಗಿ ಡಿಜಿಟಲ್ ಚಲಾವಣೆಯಾಗಿದೆ. ಇದರ ಮೂಲಕ ನಾವು ಯಾರಿಗೆ ಬೇಕಾದರೂ ಮತ್ತು ಎಲ್ಲಿಗೆ ಬೇಕಾದರೂ ಬ್ಯಾಂಕ್ ಅಥವಾ ಸರಕಾರದ ಮಧ್ಯಸ್ಥಿಕೆಯಿಲ್ಲದೆ ಹಣವನ್ನು ಕಳುಹಿಸಬಹುದು. ಈ ಕಾರಣದಿಂದಾಗಿ, ಪ್ರತಿ ವರ್ಷವೂ ‘ಬಿಟ್‌ಕಾಯಿನ್ ಎಂಬ ಪದವು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಡುವ ಪದಗಳ ಪಟ್ಟಿಯಲ್ಲಿರುತ್ತದೆ.

ಶ್ರೀ. ಯಜ್ಞೇಶ ಸಾವಂತ

ನಾವು ಯಾವ ರೀತಿ ಪೇಟಿಎಮ್ ಅಥವಾ ಗೂಗಲ್ ಪೇಗಳಲ್ಲಿ ವ್ಯವಹಾರಗಳನ್ನು ಮಾಡುತ್ತೇವೆಯೋ, ಅದೇ ರೀತಿ ಇಲ್ಲಿಯೂ ವ್ಯವಹಾರಗಳು ನಡೆಯುತ್ತವೆ. ವ್ಯತ್ಯಾಸ ಇಷ್ಟೇ; ಪೇಟಿಎಮ್‌ನಲ್ಲಿ ಬ್ಯಾಂಕ್ ವ್ಯವಹಾರಗಳನ್ನು ದಾಖಲಿಸುತ್ತದೆ; ಆದರೆ ಬಿಟ್‌ಕಾಯಿನ್‌ನಲ್ಲಿ ಜಗತ್ತಿನಾದ್ಯಂತದ ಸಾವಿರಾರು ಕಂಪ್ಯೂಟರ್‌ಗಳು ಒಗ್ಗೂಡಿ ವ್ಯವಹಾರಗಳನ್ನು ದಾಖಲಿಸುತ್ತವೆ. ಈ ವ್ಯವಸ್ಥೆಯನ್ನು ‘ಬ್ಲಾಕ್‌ಚೈನ್ ಎಂದು ಕರೆಯಲಾಗುತ್ತದೆ. ಬಿಟ್‌ಕಾಯಿನ್ ಕೂಡ ರೂಪಾಯಿ, ಡಾಲರ್ ಅಥವಾ ಇನ್ಯಾವುದೇ ಚಲಾವಣೆಯಂತೆ ಒಂದು ಕರೆನ್ಸಿಯಾಗಿದ್ದು, ಕಂಪ್ಯೂಟರ್‌ನ ಕೋಡ್ ಮೂಲಕ ಎನ್‌ಕ್ರಿಪ್ಟ್ (ಅಂದರೆ ಸಾಂಕೇತಿಕ ಭಾಷೆಯಲ್ಲಿ ಗುಪ್ತವಾಗಿ ಇಡಲಾಗುತ್ತದೆ) ಮಾಡಲಾಗಿರುತ್ತದೆ. ಬ್ಯಾಂಕ್‌ಗಳಿಂದ ನಮಗೆ ನೋಟುಗಳು ಸಿಗುವಂತೆ, ಈ ಚಲಾವಣೆಯನ್ನು ನಿಮ್ಮಲ್ಲಿರುವ ಹಣದಿಂದ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಖರೀದಿಸಬಹುದು. ಇಂದಿನ ಲೇಖನದಲ್ಲಿ ಬಿಟ್‌ಕಾಯಿನ್ ಚಲಾವಣೆಯ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ.

ಭಾರತದಲ್ಲಿ ಬಿಟ್‌ಕಾಯಿನ್ ಕಾನೂನುಬದ್ಧವೇ ?

ಬಿಟ್‌ಕಾಯಿನ್ ಭಾರತದಲ್ಲಿ ಕಾನೂನುಬದ್ಧವಾಗಿದೆ; ಆದರೆ ಸರಕಾರದಿಂದ ಮಾನ್ಯತೆ ಸಿಕ್ಕಿಲ್ಲ. ಇದರರ್ಥ ನೀವು ಮಾಡುವ ವ್ಯವಹಾರಗಳು ಅಥವಾ ಹೂಡಿಕೆಗಳು ಸಂಪೂರ್ಣವಾಗಿ ನಿಮ್ಮ ಅಪಾಯದ ಮೇಲೆ ಇರುತ್ತವೆ. ೨೦೧೮ ರಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗಳಿಗೆ, ‘ಕ್ರಿಪ್ಟೋಕರೆನ್ಸಿ ವ್ಯವಹಾರ ಮಾಡುವ ಸಂಸ್ಥೆಗಳಿಗೆ ಸೇವೆಗಳನ್ನು ನೀಡಬೇಡಿ ಎಂದು ಆದೇಶಿಸಿತ್ತು; ಆದರೆ ಈ ಆದೇಶವನ್ನು ‘ಕ್ರಿಪ್ಟೋ ಎಕ್ಸ್‌ಚೇಂಜ್‌ಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದವು ಮತ್ತು ೨೦೨೦ ರಲ್ಲಿ ಅವರು ಈ ಮೊಕದ್ದಮೆಯನ್ನು ಗೆದ್ದರು. ‘ವರ್ಚುವಲ್ ಕರೆನ್ಸಿಗಳ ಮೂಲಕ ಕ್ರಿಪ್ಟೋಕರೆನ್ಸಿಯಲ್ಲಿ ವ್ಯವಹಾರ ಮಾಡಲು ಸರ್ವೋಚ್ಚ ನ್ಯಾಯಾಲಯ ಮಾರ್ಚ್ ೨೦೨೦ ರಲ್ಲಿ ಅನುಮತಿ ನೀಡಿದೆ.