ಶ್ರೀರಾಮ ಮಂದಿರದ ೭೦ ಎಕರೆ ಆವರಣವು ಒಂದೂವರೆ ಲಕ್ಷ ದೀಪಗಳಿಂದ ಪ್ರಕಾಶಿಸಲಿವೆ!

  • ಅಯೋಧ್ಯೆ: ಈ ವರ್ಷ ವಿಶೇಷ ದೀಪೋತ್ಸವ!

  • ಅಯೋಧ್ಯೆಗೆ ಬಂದಿಳಿದ ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್’ ತಂಡ!

ಅಯೋಧ್ಯೆ (ಉತ್ತರ ಪ್ರದೇಶ) – ಈ ವರ್ಷದ ದೀಪೋತ್ಸವವು ಹಲವು ದೃಷ್ಟಿಗಳಿಂದ ವಿಶೇಷವಾಗಿರಲಿದೆ. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ಈ ವರ್ಷ ದೀಪೋತ್ಸವವನ್ನು ಹಿಂದಿಗಿಂತಲೂ ಹೆಚ್ಚು ಭವ್ಯ ಮತ್ತು ವಿಸ್ತೃತ ರೂಪದಲ್ಲಿ ಆಚರಿಸಲು ನಿರ್ಧರಿಸಿದೆ. ಈ ವರ್ಷ ಮೊಟ್ಟ ಮೊದಲ ಬಾರಿಗೆ, ಶ್ರೀರಾಮ ಮಂದಿರದ ಸಂಪೂರ್ಣ ೭೦ ಎಕರೆ ಭವ್ಯ ಆವರಣವು ಪ್ರಕಾಶಮಾನವಾಗಲಿದೆ. ಅಕ್ಟೋಬರ್ ೧೯ ರಂದು ಮಧ್ಯಾಹ್ನ ೫.೩೦ ಕ್ಕೆ, ಮಂದಿರದ ಸುತ್ತಲೂ ನಾಲ್ಕು ದಿಕ್ಕುಗಳಲ್ಲಿ ಹರಡಿರುವ ಸುಮಾರು ೪ ಕಿಲೋಮೀಟರ್ ಪ್ರದೇಶದಲ್ಲಿ ಒಂದೂವರೆ ಲಕ್ಷ ದೀಪಗಳ ಪ್ರಕಾಶವು ಕಾಣಿಸಲಿದೆ. ಮಂದಿರ ನಿರ್ಮಾಣದ ಮೊದಲ ಹಂತವು ಬಹುತೇಕ ಪೂರ್ಣಗೊಂಡಿದೆ. ಅನೇಕ ಹೊಸ ಯೋಜನೆಗಳ ಕೆಲಸವೂ ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ದೀಪೋತ್ಸವವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಶ್ರೀರಾಮ ಮಂದಿರದ ಟ್ರಸ್ಟಿಗಳಾದ ಡಾ. ಅನಿಲ್ ಮಿಶ್ರಾ ಅವರು ಇತ್ತೀಚೆಗೆ ಸಭೆ ನಡೆಸಿ, ಕಾರ್ಯಕರ್ತರಿಗೆ ವಿವಿಧ ಸೇವೆಗಳನ್ನು ಹಂಚಿದ್ದಾರೆ.

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ತಂಡ ಅಯೋಧ್ಯೆಯಲ್ಲಿ! ‘ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನ ೩೦ ಜನರ ತಂಡವು ಇತ್ತೀಚೆಗೆ ಅಯೋಧ್ಯೆಗೆ ಆಗಮಿಸಿದೆ. ಈ ತಂಡದ ಸಲಹೆಗಾರರಾದ ನಿಶ್ಚಲ್ ಬರೋಟ್ ಅವರು, ಈ ವರ್ಷ ಎರಡು ವಿಶ್ವ ದಾಖಲೆಗಳು ಸ್ಥಾಪನೆಯಾಗಲಿವೆ ಎಂದು ತಿಳಿಸಿದ್ದಾರೆ. ಹೊಸ ಸ್ವಯಂಸೇವಕರಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರಿಗೂ ಬೇರೆ ಬೇರೆ ಘಾಟ್‌ಗಳ ಜವಾಬ್ದಾರಿಯನ್ನು ನೀಡಲಾಗಿದೆ.

೧,೧೦೦ ಸ್ವದೇಶಿ ಡ್ರೋನ್‌ಗಳಿಂದ ಆಕಾಶದಲ್ಲಿ ರಾಮಕಥೆ! ರಾಮ್ ಕಿ ಪೌಡಿ ಸೇರಿದಂತೆ ೫೬ ಘಾಟ್‌ಗಳಲ್ಲಿ ಬೆಳಗಲಿರುವ ಸುಮಾರು ೨೬ ಲಕ್ಷ ದೀಪಗಳ ಬೆಳಕು ಭಕ್ತಿ ಭಾವ ಮತ್ತು ಆನಂದದ ಸಂಕೇತವಾಗಲಿದೆ. ಸಂಗೀತ ಸಂಯೋಜಿತ ‘ಡ್ರೋನ್ ಶೋ’ ಮತ್ತು ತ್ರಿ-ಪರಿಮಾಣದ ಲೇಸರ್-ಸಂಗೀತ ಪ್ರಸ್ತುತಪಡಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯು ಈ ಡ್ರೋನ್ ಮತ್ತು ಲೇಸರ್ ಶೋ ಅನ್ನು ಅಕ್ಟೋಬರ್ ೧೮ ಮತ್ತು ೧೯ ಈ ಎರಡು ದಿನಗಳಂದು ಸಾರ್ವಜನಿಕರಿಗಾಗಿ ತೆರೆದಿಡಲು ನಿರ್ಧರಿಸಿದೆ. ೧,೧೦೦ ಸ್ವದೇಶಿ ಡ್ರೋನ್‌ಗಳ ಮೂಲಕ ಆಕಾಶದಲ್ಲಿ ರಾಮಾಯಣದ ವಿವಿಧ ದೃಶ್ಯಗಳನ್ನು ಪ್ರದರ್ಶಿಸಲಾಗುವುದು.