ಕೇರಳ: ಕಾನ್ವೆಂಟ್ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಬಂದ ಪ್ರಕರಣ
(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರು ತಲೆ ಮತ್ತು ಕುತ್ತಿಗೆಯನ್ನು ಮುಚ್ಚಲು ಬಳಸುವ ವಸ್ತ್ರ)

ತಿರುವನಂತಪುರಂ (ಕೇರಳ) – ಎರ್ನಾಕುಳಂ ಜಿಲ್ಲೆಯ ಪಳರ್ರುತಿ (Paluruthy)ಯಲ್ಲಿರುವ ಸೇಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ಕುರಿತು ಉಂಟಾದ ವಿವಾದವು ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಯ ನಡುವೆ ಇತ್ಯರ್ಥವಾಗಿತ್ತು. ಆದರೂ, ಕೇರಳದ ಕಮ್ಯುನಿಸ್ಟ್ ಒಕ್ಕೂಟದ ಸರಕಾರವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ಶಾಲೆಗೆ ಆದೇಶಿಸಿತು. ಅಲ್ಲದೆ, ಶಾಲೆಯ ಸಮವಸ್ತ್ರದಲ್ಲಿ ಮುಸ್ಲಿಂ ಹುಡುಗಿಯರ ತಲೆ ಮುಚ್ಚುವ ವಸ್ತ್ರವನ್ನು ಸಹ ಸೇರಿಸುವಂತೆ ಸೂಚಿಸಿದೆ. ಈ ಶಾಲೆಯ ಒಬ್ಬ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಬರಲು ಪ್ರಾರಂಭಿಸಿದಾಗ, ಶಾಲೆಯು ಪ್ರವೇಶದ್ವಾರದಲ್ಲಿ ಆಕೆಯನ್ನು ತಡೆದ ಕಾರಣ ವಿವಾದ ಉಂಟಾಗಿತ್ತು.
‘ಸರಕಾರದ ನಿರ್ದೇಶನಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು!’ – ಶಿಕ್ಷಣ ಸಚಿವರು
ಕೇರಳದ ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಶಾಲಾ ಆಡಳಿತ ಮಂಡಳಿ ಕೈಗೊಂಡ ಕ್ರಮ ಸಂವಿಧಾನ ವಿರೋಧಿಯಾಗಿದೆ ಎಂದು ಹೇಳಿದರು. ಎರ್ನಾಕುಳಂನ ಉಪನಿರ್ದೇಶಕರಿಗೆ ಈ ಘಟನೆಯ ತನಿಖೆ ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಅವರ ವರದಿಯ ಪ್ರಕಾರ, ಶಾಲಾ ಆಡಳಿತ ಮಂಡಳಿಯು ಗಂಭೀರ ತಪ್ಪು ಮಾಡಿದೆ. ಅದೇ ವರದಿಯ ಆಧಾರದ ಮೇಲೆ ಸರಕಾರವು ಈ ನಿರ್ದೇಶನಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ. ಶಾಲೆಯ ಆಡಳಿತ ಮಂಡಳಿಯು ಸಮವಸ್ತ್ರಕ್ಕೆ ಹೊಂದಿಕೆಯಾಗುವ ಸೂಕ್ತವಾದ ‘ಹೆಡ್ ಸ್ಕಾರ್ಫ್’ (ತಲೆ ಮುಚ್ಚಲು ಬಳಸುವ ಬಟ್ಟೆ) ಅನ್ನು ಸಿದ್ಧಪಡಿಸಬೇಕು. ಈ ನಿರ್ದೇಶನಗಳನ್ನು ಪಾಲಿಸದಿದ್ದರೆ, ಸರಕಾರವು ಕಠಿಣ ಕ್ರಮ ಕೈಗೊಳ್ಳುತ್ತದೆ. ಇದು ಕೇರಳ ರಾಜ್ಯವಾಗಿದೆ ಎಂದು ಖಡಕ್ ಎಚ್ಚರಿಕೆ ನೀಡಿರು.
ಶಾಲೆ ಮತ್ತು ಪೋಷಕರ ನಡುವೆ ರಾಜಿ
ಈ ಶಾಲೆಯು ‘ಸಿಬಿಎಸ್‌ಇ’ಗೆ (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ) ಸಂಯೋಜಿತವಾಗಿದ್ದು, ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್‌ನಿಂದ ನಡೆಸಲ್ಪಡುತ್ತಿದೆ. ಶಾಲಾ ಆಡಳಿತ ಮಂಡಳಿಯು ಸಮವಸ್ತ್ರ ನಿಯಮಗಳನ್ನು ಉಲ್ಲೇಖಿಸಿ, ವಿದ್ಯಾರ್ಥಿನಿಯ ಹಿಜಾಬ್ ಧರಿಸುವ ಬೇಡಿಕೆಯನ್ನು ತಿರಸ್ಕರಿಸಿತ್ತು. ಆದರೆ, ಎರ್ನಾಕುಳಂ ಸಂಸದ ಹಿಬಿ ಈಡನ್ ಮತ್ತು ಕೆಲವು ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಯ ತಂದೆ ಮತ್ತು ಶಾಲಾ ಆಡಳಿತ ಮಂಡಳಿಯ ನಡುವೆ ನಡೆದ ಸಭೆಯಲ್ಲಿ ಸಮಸ್ಯೆ ಇತ್ಯರ್ಥವಾಗುವ ಲಕ್ಷಣ ಕಾಣುತ್ತಿದ್ದಾಗಲೇ, ಶಿಕ್ಷಣ ಸಚಿವರ ಆದೇಶಗಳು ಬಂದವು.
ವಿದ್ಯಾರ್ಥಿನಿಯ ತಂದೆ, ‘ನನ್ನ ಮಗಳು ಅದೇ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಾಳೆ ಮತ್ತು ಸಮವಸ್ತ್ರವನ್ನು ಪಾಲಿಸುತ್ತಾಳೆ. ಈ ಪ್ರಕರಣದ ದುರುಪಯೋಗವನ್ನು ಯಾರೂ ಪಡೆಯಬಾರದು ಎಂದು ನಾನು ಬಯಸುತ್ತೇನೆ’ ಎಂದು ಹೇಳಿದರು.
ವೈಯಕ್ತಿಕ ಹಕ್ಕುಗಳು ಸಂಸ್ಥೆಯ ಶಿಸ್ತಿಗಿಂತ ಹೆಚ್ಚಾಗಿರಲು ಸಾಧ್ಯವಿಲ್ಲ! – ಕೇರಳ ಉಚ್ಚ ನ್ಯಾಯಾಲಯ
ಹಿಜಾಬ್ ಪ್ರಕರಣವು ಕೇರಳ ಉಚ್ಚ ನ್ಯಾಯಾಲಯದವರೆಗೆ ಕೂಡ ತಲುಪಿತು. ಶಾಲಾ ಆಡಳಿತ ಮಂಡಳಿಗೆ ರಕ್ಷಣೆ ನೀಡುವಂತೆ ನ್ಯಾಯಾಲಯವು ಆದೇಶಿಸಿತು. ಶಾಲಾ ಆಡಳಿತ ಮಂಡಳಿಯು ಸ್ಥಳೀಯ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ಆರೋಪಿಸಿ, ಹೈಕೋರ್ಟ್‌ನಿಂದ ತಕ್ಷಣದ ರಕ್ಷಣೆ ಕೋರಿತ್ತು. ವಿದ್ಯಾರ್ಥಿನಿಯ ಪೋಷಕರು ಇತರ ಮುಸ್ಲಿಂ ಪೋಷಕರನ್ನು ಆಂದೋಲನದಲ್ಲಿ ಭಾಗವಹಿಸಲು ಪ್ರೇರೇಪಿಸಿದರು ಎಂದು ಆಡಳಿತ ಮಂಡಳಿ ಆರೋಪಿಸಿತು. ನ್ಯಾಯಾಲಯವು, ‘ಈ ಶಾಲೆಯು 1998 ರಿಂದ ಜಾತ್ಯತೀತ ಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ ಮತ್ತು ಎಲ್ಲಾ ಪೋಷಕರು ಸಮವಸ್ತ್ರ ನೀತಿಯನ್ನು ಪಾಲಿಸುವುದಾಗಿ ಲಿಖಿತ ಭರವಸೆ ನೀಡಿದ್ದಾರೆ. ವೈಯಕ್ತಿಕ ಹಕ್ಕುಗಳು ಸಂಸ್ಥೆಯ ಶಿಸ್ತಿಗಿಂತ ಹೆಚ್ಚಾಗಿರಲು ಸಾಧ್ಯವಿಲ್ಲ’ ಎಂದು ಹೇಳಿತು.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”