
ಕೋಲ್ಹಾಪುರದಲ್ಲಿ ನಡೆದ ಕಾಮ್ರೇಡ್ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಯಾವುದೇ ಬಲವಾದ ಪುರಾವೆ ಇಲ್ಲದಿದ್ದರೂ ಮತ್ತು ಯಾವುದೇ ಅಪರಾಧ ಹಿನ್ನೆಲೆ ಇಲ್ಲದಿದ್ದರೂ ನಿರಪರಾಧಿ ಹಿಂದೂತ್ವನಿಷ್ಠರನ್ನು ಬಂಧಿಸಿ ಹಿಂದೂಗಳನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಈ ಪ್ರಕರಣ ನಡೆದು ೧೦ ವರ್ಷಗಳಾದರೂ, ಕೋಲ್ಹಾಪುರದ ಪ್ರಗತಿಪರ ಗುಂಪುಗಳಿಂದ ಒತ್ತಡ ಹೇರಿ ಪ್ರಕರಣವನ್ನು ವಿಳಂಬಗೊಳಿಸುವ ಮತ್ತು ಈ ಯುವಕರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡುವ ಷಡ್ಯಂತ್ರ ನಡೆಯುತ್ತಿತ್ತು; ಆದರೆ ಮುಂಬಯಿ ಉಚ್ಚ ನ್ಯಾಯಾಲಯದ ಕೋಲ್ಹಾಪುರದ ‘ಸರ್ಕ್ಯೂಟ್ ಬೆಂಚ್’ ಇಂದು ಈ ಪ್ರಕರಣದ ಕೊನೆಯ ೩ ಶಂಕಿತರಿಗೆ ಜಾಮೀನು ಮಂಜೂರು ಮಾಡಿದೆ. ಇದರಿಂದ ಅವರ ಷಡ್ಯಂತ್ರ ವಿಫಲವಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಈ ಪತ್ರಿಕಾ ಪ್ರಕಟಣೆಯಲ್ಲಿ ಶ್ರೀ. ರಮೇಶ ಶಿಂದೆ ಅವರು, ಈ ಶಂಕಿತರಲ್ಲಿ ಈ ಹಿಂದೆ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ನಿರ್ವಹಿಸುತ್ತಿದ್ದ ಮತ್ತು ಕಿವಿ-ಮೂಗು-ಗಂಟಲು ತಜ್ಞರಾದ ಡಾ. ವೀರೇಂದ್ರಸಿಂಹ ತಾವಡೆ ಅವರೂ ಸೇರಿದ್ದಾರೆ. ಅವರೊಂದಿಗೆ ಶ್ರೀ. ಅಮೋಲ ಕಾಳೆ ಮತ್ತು ಶರದ್ ಕಳಸ್ಕರ್ ಎಂಬ ಹಿಂದೂತ್ವನಿಷ್ಠರಿಗೂ ಜಾಮೀನು ಮಂಜೂರಾಗಿದೆ. ‘ಜಾಮೀನು ಒಂದು ನಿಯಮ; ಜೈಲಿನಲ್ಲಿ ಒಂದು ಅಪವಾದ’ ಎಂಬಂತಹ ವಾಕ್ಯವನ್ನು ನ್ಯಾಯಾಧೀಶರು ಅನೇಕ ತೀರ್ಪುಗಳಲ್ಲಿ ಬಳಸಿದ್ದಾರೆ; ಆದರೆ ಈ ಮೊಕದ್ದಮೆಯಲ್ಲಿ ಪುರಾವೆ ಇಲ್ಲದಿದ್ದರೂ, ಈ ಹಿಂದೂತ್ವನಿಷ್ಠರನ್ನು ಮಾತ್ರ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಯಿತು. ಇದರ ವಿರುದ್ಧ ಹೋರಾಡಿದ ಅನೇಕ ಗಣ್ಯ ನ್ಯಾಯವಾದಿಗಳು ದಣಿವರಿಯದ ಪ್ರಯತ್ನ ಮಾಡಿ, ಅವರ ಸರಿಯಾದ ಪಕ್ಷವನ್ನು ಮಂಡಿಸಿ, ಅವರ ಮೇಲಾದ ಅನ್ಯಾಯವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಆ ಎಲ್ಲಾ ನ್ಯಾಯವಾದಿಗಳಿಗೂ ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ದೀಪಾವಳಿಯ ಹಬ್ಬದ ಮೊದಲು ಬಂದ ಈ ಸುದ್ದಿ ಸಮಸ್ತ ಹಿಂದೂತ್ವನಿಷ್ಠರಿಗೇ ಸಂತೋಷದ ಸುದ್ದಿಯಾಗಿದೆ, ಎಂದು ಹೇಳಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!