ಕೇರಳ ಉಚ್ಚ ನ್ಯಾಯಾಲಯದಿಂದ ಕೇರಳ ವಕ್ಫ್ ಮಂಡಳಿಗೆ ಛೀಮಾರಿ!

ತಿರುವನಂತಪುರಂ (ಕೇರಳ) – ಮುನಂಬಮ್‌ನ ಭೂಮಿಯನ್ನು ವಕ್ಫ್ (ಇಸ್ಲಾಮಿಕ್ ಧಾರ್ಮಿಕ ನಿಧಿ ಭೂಮಿ) ಎಂದು ಅಧಿಸೂಚಿಸುವ ಕೇರಳ ವಕ್ಫ್ ಮಂಡಳಿಯ ನಿರ್ಧಾರವನ್ನು ಕೇರಳ ಉಚ್ಚ ನ್ಯಾಯಾಲಯ ತೀವ್ರವಾಗಿ ಟೀಕಿಸಿದೆ. ನ್ಯಾಯಾಲಯವು ಈ ನಿರ್ಧಾರವು ‘ವಕ್ಫ್ ಕಾಯ್ದೆ 1954 ಮತ್ತು 1995’ ರ ನಿಬಂಧನೆಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದು, ಇದನ್ನು ‘ಈ ನಿರ್ಧಾರವು ಭೂ ಕಬಳಿಕೆಯ ಪ್ರಯತ್ನವಾಗಿದೆ’ ಎಂಬ ಕಠಿಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ. ಸರಕಾರ ರಚಿಸಿದ ವಿಚಾರಣಾ ಆಯೋಗವನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ಈ ವಿವಾದದ ಎಲ್ಲಾ ಅಂಶಗಳನ್ನು ಪರಿಶೀಲಿಸುವುದು ಈ ಆಯೋಗದ ಉದ್ದೇಶವಾಗಿದೆ.
ವಕ್ಫ್ ಮಂಡಳಿಯು ಈ ಆಸ್ತಿಯನ್ನು ‘ವಕ್ಫ್’ ಎಂದು ಘೋಷಿಸಲು ಅಗತ್ಯವಾದ ಪ್ರಕ್ರಿಯೆಯನ್ನು ಅನುಸರಿಸದೆ ಏಕಪಕ್ಷೀಯ ನಿರ್ಧಾರವನ್ನು ತೆಗೆದುಕೊಂಡಿದೆ, ಆದರೆ ಈ ಆಸ್ತಿಯನ್ನು ಈ ಹಿಂದೆ ಆ ಪ್ರದೇಶದ ಅನೇಕ ಖರೀದಿದಾರರು ಬಳಸುತ್ತಿದ್ದರು ಮತ್ತು ಅದರಲ್ಲಿ ವಾಸಿಸುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ. ಈ ನಿರ್ಧಾರದಿಂದ ಆ ಭೂಮಿಯನ್ನು ಖರೀದಿಸಿದ ನಿಜವಾದ ಮಾಲೀಕರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗಿದೆ. ಈ ರೀತಿಯ ಅನಿಯಂತ್ರಿತ ಘೋಷಣೆಗಳಿಗೆ ಮಾನ್ಯತೆ ನೀಡಿದರೆ, ನಾಳೆ ಯಾವುದೇ ಐತಿಹಾಸಿಕ ಅಥವಾ ಸಾರ್ವಜನಿಕ ಕಟ್ಟಡಗಳನ್ನು, ಉದಾಹರಣೆಗೆ ತಾಜ್ ಮಹಲ್, ಕೆಂಪು ಕೋಟೆ, ವಿಧಾನಸಭೆಯ ಕಟ್ಟಡ ಇಂತಹ ಯಾವುದೇ ಸ್ಥಳವನ್ನು ವಕ್ಫ್ ಎಂದು ಘೋಷಿಸಬಹುದು.
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!