ಅಮೆರಿಕದಲ್ಲಿ ಹಿಂದೂಗಳ ತೀವ್ರ ವಿರೋಧ!

ನ್ಯೂಯಾರ್ಕ್ (ಅಮೆರಿಕ) – ಅಮೆರಿಕದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವ ‘ಡಬ್ಲ್ಯೂ ಕೆ ಕೆಲ್ಲಾಗ್ಸ್’ ಸಂಸ್ಥೆಯು ತನ್ನ ಆಹಾರ ಪದಾರ್ಥಗಳಲ್ಲಿ ಗೋಮಾಂಸದ ಇರುವಿಕೆಯನ್ನು ಸ್ಪಷ್ಟವಾಗಿ ನಮೂದಿಸಿರಲಿಲ್ಲ. ಈ ವಿಷಯ ತಿಳಿದುಬರುತ್ತಿದ್ದಂತೆ ಅಮೆರಿಕದಲ್ಲಿನ ಹಿಂದೂಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ರೋಶಿತ ಹಿಂದೂಗಳು, ಸಂಸ್ಥೆಯು ಹಿಂದೂಗಳ ಕಣ್ಣಿಗೆ ಮಣ್ಣೆರಚಿದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಮೆರಿಕದಲ್ಲಿನ ಹಿಂದುತ್ವನಿಷ್ಠರು,
೧. ದಶಕಗಳಿಂದ ಸೇವಿಸುತ್ತಿರುವ ಕೆಲ್ಲಾಗ್ಸ್‌ನ ಜನಪ್ರಿಯ ಆಹಾರ ಪದಾರ್ಥ ‘ಕೆಲ್ಲಾಗ್ಸ್ ಫ್ರಾಸ್ಟೆಡ್ ಮಿನಿ-ವೀಟ್ಸ್’ ನಲ್ಲಿ ಗೋಮಾಂಸವಿದೆ ಎಂದು ತಿಳಿದು ನಮ್ಮ ಸಮಾಜವು ತೀವ್ರ ಆಘಾತಕ್ಕೆ ಒಳಗಾಗಿದೆ. ಉತ್ಪನ್ನದ ಪ್ಯಾಕೇಜಿಂಗ್ ಮೇಲೆ ಇರುವ ಪದಾರ್ಥಗಳ ಪಟ್ಟಿಯಲ್ಲಿ ಗೋಮಾಂಸದ ಉಲ್ಲೇಖವಿಲ್ಲ. ಇದರ ಜೊತೆಗೆ, ಕೇವಲ ‘ಜೆಲಾಟಿನ್’ ಎಂಬುದನ್ನು ಉಲ್ಲೇಖಿಸಲಾಗಿದ್ದು, ಅದರ ಮೂಲವಾದ ಗೋಮಾಂಸದ ಉಲ್ಲೇಖವನ್ನು ಅನುಕೂಲಕರವಾಗಿ ತಪ್ಪಿಸಲಾಗಿದೆ.
೨. ಹಿಂದುತ್ವನಿಷ್ಠರು ಸಂಪರ್ಕಿಸಿದಾಗ, ‘ಕೆಲ್ಲಾಗ್ಸ್’ ನ ಲೈಸೆಲ್ ಎ. ಎಂಬ ಅಧಿಕಾರಿಯೊಬ್ಬರು, ಈ ಉತ್ಪನ್ನದಲ್ಲಿ ಗೋಮಾಂಸವನ್ನು ಬಳಸಿ ತಯಾರಿಸಿದ ಜೆಲಾಟಿನ್ ಇದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
೩. ಪಾರದರ್ಶಕತೆ, ಗುಣಮಟ್ಟ ಮತ್ತು ಸುರಕ್ಷತೆಯಂತಹ ಬದ್ಧತೆಗಳನ್ನು ಹೇಳಿಕೊಳ್ಳುವ ಈ ಪ್ರಮುಖ ಸಂಸ್ಥೆಯಿಂದ ಇಂತಹ ಕೃತ್ಯ ಮಾಡುವುದು ಅತ್ಯಂತ ಖಂಡನೀಯ.
೪. ‘ಕೆಲ್ಲಾಗ್ಸ್’ ಜೆಲಾಟಿನ್‌ನ ಮೂಲವನ್ನು ಸ್ಪಷ್ಟವಾಗಿ ನಮೂದಿಸದ ಎಲ್ಲಾ ಉತ್ಪನ್ನಗಳನ್ನು ತಕ್ಷಣವೇ ಹಿಂದಕ್ಕೆ ಪಡೆಯಬೇಕು, ಹಾಗೆಯೇ ಹೊಸ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಅದರ ಮೇಲೆ ಜೆಲಾಟಿನ್‌ನ ಮೂಲವನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಬೇಕು.
ಸಂಪಾದಕೀಯ ನಿಲುವು‘ಡಬ್ಲ್ಯೂ ಕೆ ಕೆಲ್ಲಾಗ್ಸ್’ ಸಂಸ್ಥೆಯ ಆಹಾರ ಪದಾರ್ಥಗಳು ಭಾರತದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆದ್ದರಿಂದ ಈಗ ಭಾರತದ ಹಿಂದೂಗಳು ಕೂಡ ಸಂಸ್ಥೆಗೆ ತೀವ್ರ ವಿರೋಧ ವ್ಯಕ್ತಪಡಿಸಬೇಕು, ಹಾಗೆಯೇ ಭಾರತ ಸರಕಾರವು ಈ ಕುರಿತು ಅಮೆರಿಕವನ್ನು ಪ್ರಶ್ನಿಸುವುದು ಅವಶ್ಯಕವಾಗಿದೆ ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!