‘ತಂತೈ ಪೆರಿಯಾರ್ ದ್ರಾವಿಡರ್ ಕಳಗಂ’ ಎಂಬ ಪೆರಿಯಾರ್ವಾದಿ ಸಂಘಟನೆಯ ಕೃತ್ಯ

ಈ ಚಿತ್ರವನ್ನು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸಲು ಹಾಕಲಾಗಿದೆ, ಯಾರಿಗೂ ನೋವುಂಟು ಮಾಡಲು ಅಲ್ಲ.
(‘ತಂತೈ ಪೆರಿಯಾರ್ ದ್ರಾವಿಡರ್ ಕಳಗಂ’ ಎಂದರೆ ಪೆರಿಯಾರ್ ಅವರನ್ನು ಹಿರಿಯರೆಂದು ಪರಿಗಣಿಸುವ ದ್ರಾವಿಡರ ಪಕ್ಷದ ಸಂಘಟನೆ)
ಚೆನ್ನೈ (ತಮಿಳುನಾಡು) – ವಿಜಯದಶಮಿಯ ದಿನ, ಅಂದರೆ ಅಕ್ಟೋಬರ್ ೨ ರಂದು ದೇಶಾದ್ಯಂತ ರಾವಣ ದಹನ ನಡೆಯುತ್ತಿದ್ದಾಗ, ಇಲ್ಲಿ ಪ್ರಭು ಶ್ರೀರಾಮನ ಪ್ರತಿಮೆಯನ್ನು ಸುಡಲಾಯಿತು. ‘ತಂತೈ ಪೆರಿಯಾರ್ ದ್ರಾವಿಡರ್ ಕಳಗಂ’ (ಟಿಡಿಪಿಕೆ) ಎಂಬ ಪೆರಿಯಾರ್ವಾದಿ ಸಂಘಟನೆಯು ಮೈಲಾಪುರದಲ್ಲಿರುವ ಸಂಸ್ಕೃತ ಕಾಲೇಜಿನ ಹೊರಗೆ ಶ್ರೀರಾಮ, ಸೀತಾ ಮತ್ತು ಲಕ್ಷ್ಮಣರ ಪ್ರತಿಮೆಗಳನ್ನು ದಹಿಸಿದೆ. ಅವರು ಇದನ್ನು ‘ರಾವಣನ್ ಲೀಲಾ’ ಎಂದು ಹೆಸರಿಸಿದ್ದು, ಉತ್ತರ ಭಾರತದ ರಾಮಲೀಲೆಗೆ ವಿರೋಧವಾಗಿ ಇದನ್ನು ಪ್ರದರ್ಶಿಸಲಾಯಿತು. ಪೊಲೀಸರ ಭದ್ರತೆ ಇದ್ದರೂ, ಸುಮಾರು ೪೦ ಕಾರ್ಯಕರ್ತರು ಅಡೆತಡೆಗಳನ್ನು ಮೀರಿ ಪ್ರತಿಮೆಗಳನ್ನು ದಹಿಸಿದರು. ನಂತರ, ೧೧ ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
Shri Ram effigy burned in Chennai on Vijayadashami
Periyarist group TDPK set fire to effigies of Shri Ram, Mata Sita, and Lakshman outside a Sanskrit college in Mylapore, calling it “Ravanan Leela”
📌For decades, Periyarist groups in Tamil Nadu have opposed Hindu Dharma and… pic.twitter.com/fwwXJSoWxM
— Sanatan Prabhat (@SanatanPrabhat) October 3, 2025
ರಾಮಾಯಣದಲ್ಲಿ ದ್ರಾವಿಡರನ್ನು ರಾಕ್ಷಸರೆಂದು ತೋರಿಸಿರುವುದಕ್ಕೆ ವಿರೋಧ! – ‘ಟಿಡಿಪಿಕೆ’ ನಾಯಕ ಎಸ್. ಕುಮರನ್
‘ಟಿಡಿಪಿಕೆ’ ನಾಯಕ ಎಸ್. ಕುಮರನ್ ಮಾತನಾಡಿ, “ನಮ್ಮ ಕಾರ್ಯಕ್ರಮದ ಪ್ರಕಾರ ನಾವು ಪೊಲೀಸರ ತಡೆಯನ್ನು ಮುರಿದು ಪ್ರತಿಮೆ ದಹನ ಮಾಡಿದ್ದೇವೆ. ಈ ಪ್ರತಿಭಟನೆಯು ರಾಮಾಯಣದಲ್ಲಿ ದ್ರಾವಿಡರನ್ನು ರಾಕ್ಷಸರೆಂದು ತೋರಿಸಿದ್ದಕ್ಕೆ ಮತ್ತು ‘ಹಿಂದೂ ಸಂಸ್ಕೃತಿಯ ಪ್ರಾಬಲ್ಯವಿದೆ’ ಎಂದು ನಮ್ಮ ಮೇಲೆ ಹೇರುತ್ತಿರುವುದಕ್ಕೆ ವಿರುದ್ಧವಾಗಿದೆ. ನಮ್ಮ ಪೂರ್ವಜ ಎಂದು ಪರಿಗಣಿಸಲಾದ ರಾವಣನಿಗೆ ಅಪಮಾನವಾದಾಗ, ನಾವು ಸಹ ಪ್ರತಿಕ್ರಿಯೆಯಾಗಿ ‘ರಾವಣನ್ ಲೀಲಾ’ ಮಾಡುತ್ತೇವೆ,” ಎಂದರು.
ಇದಕ್ಕೂ ಮೊದಲು ಶ್ರೀರಾಮನ ಪ್ರತಿಮೆ ದಹನ ನಡೆದಿತ್ತು!
ಇತಿಹಾಸಕಾರರ ಪ್ರಕಾರ, ಈ ರೀತಿಯ ಘಟನೆ ಹೊಸದಲ್ಲ. ೧೯೭೦ ರ ದಶಕದಲ್ಲಿಯೂ ಇಂತಹ ‘ರಾವಣನ್ ಲೀಲಾ’ಗಳನ್ನು ಆಯೋಜಿಸಲಾಗಿತ್ತು. ೧೯೭೪ ರಲ್ಲಿ, ಪೆರಿಯಾರ್ ಅವರ ಪತ್ನಿ ಮಣಿಯಮ್ಮೈ ಅವರು ಚೆನ್ನೈನ ಪೆರಿಯಾರ್ ಥಿಡಲ್‌ನಲ್ಲಿ ಶ್ರೀರಾಮನ ಪ್ರತಿಮೆಯನ್ನು ಸುಟ್ಟಿದ್ದರು; ಆದರೆ ಆ ನಂತರ ಇಂತಹ ಘಟನೆಗಳು ನಿಂತಿದ್ದವು. ಈಗ ಈ ಕಾರ್ಯಕ್ರಮದಿಂದ ಮತ್ತೆ ರಾಮಾಯಣ, ದ್ರಾವಿಡ ರಾಜಕೀಯ ಮತ್ತು ಸಾಂಸ್ಕೃತಿಕ ಗುರುತಿನ ಕುರಿತು ವಿವಾದ ಸೃಷ್ಟಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ