|

ಜಿನೀವಾ (ಸ್ವಿಟ್ಜರ್ಲೆಂಡ್) – ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಹಾಗೂ ಪಾಕಿಸ್ತಾನದ ಖೈಬರ್ ಪಖ್ತುನ್ ಖ್ವಾ ಮತ್ತು ಸಿಂಧ್ ಈ ಪ್ರಾಂತ್ಯಗಳ ವಿವಿಧ ಮಾನವ ಹಕ್ಕುಗಳ ಸಂಘಟನೆಗಳು ಪಾಕಿಸ್ತಾನಿ ಸರಕಾರದ ವಿರುದ್ಧ ಧ್ವನಿ ಎತ್ತಿದವು. ‘ಸೆಂಟರ್ ಫಾರ್ ಹ್ಯೂಮನ್ ರೈಟ್ಸ್ ಅಂಡ್ ಪೀಸ್ ಅಡ್ವೊಕಸಿ’ (‘ಮಾನವ ಹಕ್ಕುಗಳು ಮತ್ತು ಶಾಂತಿ ವಕಾಲತ್ತು ಕೇಂದ್ರ’) ಆಯೋಜಿಸಿದ್ದ 60ನೇ ಅಧಿವೇಶನದಲ್ಲಿ ‘ಪಾಕಿಸ್ತಾನದಲ್ಲಿ ಕಾಣೆಯಾದ ಜನರಿಗಾಗಿ ಧ್ವನಿ ಎತ್ತುವುದು, ಅವರಿಗೆ ನ್ಯಾಯ ದೊರಕಿಸುವುದು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಮಕ್ಕೆ ಬೇಡಿಕೆ’ ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ, ವಕ್ತಾರರು ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರನ್ನು ಅಪಹರಿಸಲಾಗುತ್ತಿದೆ, ಯಾವುದೇ ಕಾನೂನು ಪ್ರಕ್ರಿಯೆಯಿಲ್ಲದೆ ಕೊಲ್ಲಲಾಗುತ್ತಿದೆ ಅಥವಾ ಸೆರೆಮನೆಯಲ್ಲಿ ಇರಿಸಲಾಗುತ್ತಿದೆ, ಎಂದು ತಿಳಿಸಿದರು.
ಸುಮಾರು 6 ಸಾವಿರದ 500 ಪಶ್ತೂನ್ ನಾಗರಿಕರು ಕಾಣೆ!
ಈ ಕಾರ್ಯಕ್ರಮದಲ್ಲಿ ‘ಪಶ್ತೂನ್ ತಹಫ್ಫುಜ್ ಚಳುವಳಿ’ ಸಂಘಟನೆಯ ನಾಯಕರಾದ ಫಜಲ್-ಉರ್-ರೆಹಮಾನ್ ಆಫ್ರಿದಿ ಅವರು, ಖೈಬರ್ ಪಖ್ತುನ್ ಖ್ವಾ ಪ್ರಾಂತ್ಯದಲ್ಲಿ ತಮ್ಮ ಸಂಘಟನೆಯ ಕಾರ್ಯಕರ್ತರು ಮತ್ತು ಸಾಮಾನ್ಯ ನಾಗರಿಕರು ಕಾಣೆಯಾಗುತ್ತಿದ್ದಾರೆ ಎಂದು ತಿಳಿಸಿದರು. ಅವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಮತ್ತು ಅವರ ಜೀವ ತೆಗೆಯಲಾಗುತ್ತಿದೆ. ಇತ್ತೀಚೆಗೆ ನಾವು ಪಶ್ತೂನ್ ಸಮುದಾಯದ 6 ಸಾವಿರದ 500 ಕಾಣೆಯಾದ ಪ್ರಕರಣಗಳನ್ನು ವಿಶ್ವಸಂಸ್ಥೆಯಗಳಿಗೆ ದಾಖಲಿಸಿದ್ದೇವೆ. ಇದರ ಹೊರತಾಗಿ, ಸಿಂಧಿ ಮತ್ತು ಬಲೂಚಿ ಜನರ ಸಾವಿರಾರು ದೂರುಗಳೂ ಇವೆ. ಪಾಕಿಸ್ತಾನ ಸರಕಾರ ನಮ್ಮನ್ನು ‘ಭಯೋತ್ಪಾದಕರು’ ಎಂದು ಕರೆದು ದಮನ ಮಾಡುತ್ತಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಆಂದೋಲನಕಾರರ ಮೇಲೆ ಗುಂಡಿನ ದಾಳಿ!
ಮಂಡಳಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತ ಕಾರ್ಯಕರ್ತರು ಮತ್ತು ಯುನೈಟೆಡ್ ಕಾಶ್ಮೀರ್ ಪೀಪಲ್ಸ್ ನ್ಯಾಷನಲ್ ಪಾರ್ಟಿಯ ವಕ್ತಾರರಾದ ನಾಸಿರ್ ಅಜೀಜ್ ಖಾನ್ ಅವರು, ಸೆಪ್ಟೆಂಬರ್27 ರಂದು ಅವಾಮಿ ಆಕ್ಷನ್ ಕಮಿಟಿಯ ಶಾಂತಿಯುತ ಆಂದೋಲನದ ಮೇಲೆ ಪಾಕಿಸ್ತಾನಿ ಸೈನ್ಯವು ಮನಬಂದಂತೆ ಗುಂಡು ಹಾರಿಸಿದರು, ಎಂದು ತಿಳಿಸಿದರು. ಇದರಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ. ಸೆಪ್ಟೆಂಬರ್ 29 ರಿಂದ 10 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನೂರಾರು ಜನರನ್ನು ಬಂಧಿಸಿ ಕಾರಾಗೃಹದಲ್ಲಿ ಹಿಂಸಿಸಲಾಗುತ್ತಿದೆ. ಅಲ್ಲಿನ ನಾಗರಿಕರ ಸುರಕ್ಷತೆಗಾಗಿ ವಿಶ್ವಸಂಸ್ಥೆಯಗಳು ಹಸ್ತಕ್ಷೇಪ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ, ಎಂದು ಹೇಳಿದರು.
ಸಿಂಧಿ ಜನರೂ ಧ್ವನಿ ಎತ್ತಿದರು!
ಈ ಸಭೆಯಲ್ಲಿ ‘ವಿಶ್ವ ಸಿಂಧಿ ಕಾಂಗ್ರೆಸ್’ನ ಕಾರ್ಯಕರ್ತ ಕಾಮ್ರಾನ್ ಜಟೋಯಿ ಅವರು, ಸಿಂಧ್ ನಲ್ಲಿ ಸರಕಾರದ ವಿರುದ್ಧ ಧ್ವನಿ ಎತ್ತುವವರನ್ನು ಸಹ ಬಲವಂತವಾಗಿ ಕಾರಾಗೃಹದಲ್ಲಿ ಇರಿಸಲಾಗುತ್ತದೆ. ಭಯೋತ್ಪಾದನಾ ವಿರೋಧಿ ನ್ಯಾಯಾಲಯಗಳ ದುರುಪಯೋಗವಾಗುತ್ತಿದೆ ಎಂದು ಅವರು ಆರೋಪಿಸಿದರು.
ಸಂಪಾದಕೀಯ ನಿಲುವುಕಾಶ್ಮೀರದ ಮೇಲೆ ಹಕ್ಕು ಸಾಧಿಸುವ ಪಾಕಿಸ್ತಾನಕ್ಕೆ ಮನೆಯಿಂದಲೇ ಛೀಮಾರಿ! ಅಂದರೆ, ಈಗ ಭಾರತವು ಪಾಕಿಸ್ತಾನದ ಜನರಿಗೆ ನ್ಯಾಯ ಒದಗಿಸಲು ಬಲೂಚಿಸ್ತಾನದ ಜೊತೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ, ಖೈಬರ ಪಖ್ತುನ್ ಖ್ವಾ, ಸಿಂಧ್ ಈ ಪ್ರಾಂತ್ಯಗಳನ್ನು ಪಾಕಿಸ್ತಾನದಿಂದ ಪ್ರತ್ಯೇಕಿಸಲು ಅಂತರರಾಷ್ಟ್ರೀಯ ಒತ್ತಡವನ್ನು ನಿರ್ಮಿಸುವುದು ಅವಶ್ಯಕವಾಗಿದೆ! |
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!