ಮಹಿಳೆಯರ ಸಬಲೀಕರಣಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯಿಂದ ಮಹಾರಾಷ್ಟ್ರದಲ್ಲಿ ‘ಶಸ್ತ್ರಪೂಜೆ’ ಮತ್ತು ‘ಶೌರ್ಯ ಜಾಗೃತಿ’ ಅಭಿಯಾನ!

ಶಸ್ತ್ರಪೂಜೆ ಮಾಡುತ್ತಿರುವ ರಣರಾಗಿಣಿ ಶಾಖೆಯ ಮಹಿಳೆಯರು

ರಣರಾಗಿಣಿ ಶಾಖೆಯ ವತಿಯಿಂದ ನಡೆದ ಶಸ್ತ್ರಪೂಜೆ

ಲವ್ ಜಿಹಾದ್ ವಿರೋಧಿ ಕಾನೂನು ಜಾರಿಗೆ ತರುವಂತೆ ಯುವತಿಯರಿಂದ ಜನಪ್ರತಿನಿಧಿಗಳಿಗೆ ಬೇಡಿಕೆ!

ಮುಂಬಯಿ – ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅವರಲ್ಲಿ ಆತ್ಮಬಲ ಮತ್ತು ಶೌರ್ಯದ ಭಾವನೆಯನ್ನು ಜಾಗೃತಗೊಳಿಸುವ ಉದ್ದೇಶದಿಂದ, ಹಿಂದೂ ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯು ವಿಜಯದಶಮಿಯ ಸಂದರ್ಭದಲ್ಲಿ ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ‘ಶಸ್ತ್ರಪೂಜೆ’ ಮತ್ತು ‘ಸ್ವಸಂ ರಕ್ಷಣಾ ತರಬೇತಿ’ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಿತು. ಈ ಉಪಕ್ರಮಗಳ ಮೂಲಕ ಮಹಿಳೆಯರನ್ನು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಸಬಲೀಕರಣಗೊಳಿಸುವುದು, ಅವರಲ್ಲಿ ಸಂಘಟನಾ ಶಕ್ತಿಯನ್ನು ಹೆಚ್ಚಿಸುವುದು ಮತ್ತು ಅನ್ಯಾಯದ ವಿರುದ್ಧ ಹೋರಾಡಲು ಅವರ ಮನೋಬಲವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಜಲಗಾಂವ್‌ನಲ್ಲಿ ಭಾಝಪ ಶಾಸಕ ಸುರೇಶ್‌ಮಾಮಾ ಭೋಳೆ ಅವರಿಗೆ ಯುವತಿಯರು ‘ಮಹಾರಾಷ್ಟ್ರದಲ್ಲಿ ಶೀಘ್ರವಾಗಿ ಲವ್ ಜಿಹಾದ್ ವಿರೋಧಿ ಕಾನೂನನ್ನು ತರಬೇಕು’ ಎಂಬ ಮನವಿಯನ್ನು ಸಲ್ಲಿಸಿದರು. ಇದೇ ರೀತಿ ರಾಜ್ಯದ ವಿವಿಧ ಜನಪ್ರತಿನಿಧಿಗಳಿಗೆ ಮನವಿಗಳನ್ನು ನೀಡಲಾಗುತ್ತಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ ಸುನೀಲ ಘನವಟ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯದಾದ್ಯಂತ ಮಹಿಳೆಯರು ಮತ್ತು ಯುವತಿಯರಿಂದ ಈ ಉಪಕ್ರಮಗಳಿಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಮಹಿಳೆಯರು ಸ್ವಸಂ ರಕ್ಷಣಾ ತರಬೇತಿ ಕಲಿಯಲು ನಿರ್ಧರಿಸಿದ್ದಾರೆ.

ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವ ಅಂಶಗಳು,

೧. ರಣರಾಗಿಣಿ ಶಾಖೆಯು ರಾಜ್ಯಾದ್ಯಂತ ಆಯೋಜಿಸಿದ ಕಾರ್ಯಕ್ರಮಗಳಲ್ಲಿ ಕತ್ತಿ, ದಂಡಪಟ್ಟಿ, ಈಟಿಗಳು, ಕಠಾರಿಗಳಂತಹ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳನ್ನು ಪೂಜಿಸಲಾಯಿತು.
೨. ‘ನಾನು ದುರ್ಗೆಯಾಗಿದ್ದೇನೆ’ ಎಂಬ ಕಲ್ಪನೆಯ ಆಧಾರದ ಮೇಲೆ ಆಯೋಜಿಸಲಾದ ಈ ಕಾರ್ಯಕ್ರಮಗಳು, ಮಹಿಳೆಯರಿಗೆ ಅವರೊಳಗಿನ ಸುಪ್ತ ಶಕ್ತಿಯ ಬಗ್ಗೆ ಅರಿವು ಮೂಡಿಸಿದವು. ಈ ಸಂದರ್ಭದಲ್ಲಿ ರಣರಾಗಿಣಿ ಶಾಖೆಯ ಕಾರ್ಯಕರ್ತರು ಸ್ವಸಂ ರಕ್ಷಣಾ ತರಬೇತಿಯ ಪ್ರಾತ್ಯಕ್ಷಿಕೆಗಳನ್ನು ಪ್ರಸ್ತುತಪಡಿಸಿದರು. ಇದರಲ್ಲಿ ಕರಾಟೆ, ಲಾಠಿ ಮತ್ತು ಜೂಡೋ ಮುಂತಾದ ತರಬೇತಿ ಪ್ರಕಾರಗಳು ಸೇರಿದ್ದವು.

ಮಹಿಳೆಯರನ್ನು ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಶಕ್ತಗೊಳಿಸುವುದು ರಣರಾಗಿಣಿ ಶಾಖೆಯ ಉದ್ದೇಶ! – ಕು. ಪ್ರತೀಕ್ಷಾ ಕೋರಗಾಂವ್ಕರ್, ರಣರಾಗಿಣಿ ಶಾಖೆ

ರಣರಾಗಿಣಿ ಶಾಖೆಯ ಕು. ಪ್ರತೀಕ್ಷಾ ಕೋರಗಾಂವ್ಕರ್ ಅವರು, “ಇಂದಿನ ಸ್ತ್ರೀ ಅಬಲೆ ಅಲ್ಲ, ಆಕೆ ದುರ್ಗೆಯ ಸ್ವರೂಪ. ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ಮತ್ತು ದೌರ್ಜನ್ಯಗಳನ್ನು ತಡೆಯಲು ಕೇವಲ ಕಾನೂನಿನ ಮೇಲೆ ಅವಲಂಬಿತರಾಗದೆ, ಪ್ರತಿಯೊಬ್ಬ ಮಹಿಳೆಯೂ ತನ್ನ ರಕ್ಷಣೆಗಾಗಿ ಸಶಕ್ತಳಾಗುವುದು ಇಂದಿನ ಅಗತ್ಯವಾಗಿದೆ. ರಣರಾಗಿಣಿ ಶಾಖೆಯು ಸ್ವಯಂ ರಕ್ಷಣಾ ತರಬೇತಿಯ ಮೂಲಕ ಇದೇ ಶೌರ್ಯ ಮತ್ತು ಧೈರ್ಯವನ್ನು ಮಹಿಳೆಯರಲ್ಲಿ ಜಾಗೃತಗೊಳಿಸುತ್ತಿದೆ. ನಮ್ಮ ಉದ್ದೇಶ ಮಹಿಳೆಯರನ್ನು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಬಲೀಕರಣಗೊಳಿಸಿ ಒಂದು ನಿರ್ಭೀತ ಸಮಾಜವನ್ನು ನಿರ್ಮಿಸುವುದಾಗಿದೆ,” ಎಂದು ಹೇಳಿದರು.