ಡಿಜಿಟಲ್ ಬಸ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅತಿಯಾದ ದರ ಏರಿಕೆಗೆ ನಿಯಂತ್ರಣ ಅಗತ್ಯ !

ಬೆಂಗಳೂರು : ಸುರಾಜ್ಯ ಅಭಿಯಾನವು ಕರ್ನಾಟಕ ಸರ್ಕಾರದ ಗಮನಕ್ಕೆ ಒಂದು ತುರ್ತು ವಿಷಯವನ್ನು ತಂದಿದೆ. ಪ್ರಸ್ತುತ ರೆಡ್‌ಬಸ್, ಮೇಕ್‌ಮೈಟ್ರಿಪ್ (MakeMyTrip) ಮುಂತಾದ ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳು ಹಬ್ಬ-ಹರಿದಿನಗಳು ಹಾಗೂ ರಜಾದಿನಗಳ ಸಂದರ್ಭದಲ್ಲಿ ಅನಿಯಂತ್ರಿತ ದರ ಏರಿಕೆ (Surge Pricing) ಮಾಡುತ್ತಿವೆ.
ಪ್ರಯಾಣಿಕರು ಯಾವುದೇ ಪಾರದರ್ಶಕತೆ ಇಲ್ಲದೆ ಅತಿಯಾದ ಟಿಕೆಟ್ ದರಗಳನ್ನು ಕಟ್ಟುವಂತಾಗುತ್ತಿದೆ. ಕೇಂದ್ರ ಸರ್ಕಾರದ “ಮೋಟರ್ ವೀಹಿಕಲ್ ಅಗ್ರಿಗೇಟರ್ ಮಾರ್ಗಸೂಚಿ 2020” ಪ್ರಕಾರ ಗರಿಷ್ಠ ದರವನ್ನು ಮೂಲ ದರದ 1.5 ಪಟ್ಟು ನಿಗದಿ ಮಾಡಲಾಗಿದೆ. ಆದರೆ, ಖಾಸಗಿ ಬಸ್ ಆಪರೇಟರ್‌ಗಳು ಹಾಗೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಸ್ಪಷ್ಟ ನಿಯಮಾವಳಿ ಇಲ್ಲದ ಕಾರಣ ಗ್ರಾಹಕರು ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಸುರಾಜ್ಯ ಅಭಿಯಾನದ ವತಿಯಿಂದ ರಾಜ್ಯ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು.
ಅತಿಯಾದ ದರ ಏರಿಕೆಯ ಉದಾಹರಣೆ (ಮಂಗಳೂರು–ಬೆಂಗಳೂರು ಮಾರ್ಗ)
ದಿನಾಂಕ ಬಸ್ ಕಂಪನಿ ಬಸ್ ಪ್ರಕಾರ ದರ
- 5 ಅಕ್ಟೋಬರ್ 2025 ಸುಗಮಾ ಟೂರಿಸ್ಟ್ (Non AC Sleeper) ರೂ.1900
- 14 ಅಕ್ಟೋಬರ್ 2025 ಅದೇ ಬಸ್ ರೂ.700
- 18 ಅಕ್ಟೋಬರ್ 2025 ಅದೇ ಬಸ್ ರೂ.1450
- ಗ್ರೀನ್‌ಲೈನ್ ಟ್ರಾವೆಲ್ಸ್ (AC Sleeper) 5 ಅಕ್ಟೋಬರ್ 2025 – ರೂ.3249, 14 ಅಕ್ಟೋಬರ್ 2025 – ರೂ.999, 18 ಅಕ್ಟೋಬರ್ 2025 – ರೂ.2249
ಈ ಅಂಕಿಅಂಶಗಳು ದರಗಳಲ್ಲಿ ನಡೆಯುತ್ತಿರುವ ಅತಿಯಾದ ಬದಲಾವಣೆ ಮತ್ತು ಶೋಷಣೆಯನ್ನು ಸ್ಪಷ್ಟಪಡಿಸುತ್ತವೆ.
ಸುರಜ್ಯ ಅಭಿಯಾನದ ಆಗ್ರಹಗಳು :
1. ಹಬ್ಬ–ರಜಾದಿನಗಳಲ್ಲಿ ದರ ಏರಿಕೆಗೆ ಸ್ಪಷ್ಟ ಮಿತಿ (Cap) ನಿಗದಿಪಡಿಸುವಂತೆ ಸರ್ಕಾರವು ನಿಯಂತ್ರಣ ಮಾರ್ಗಸೂಚಿ ತರಬೇಕು.
2. ಪಾರದರ್ಶಕ ದರ ನಿಯಮಗಳನ್ನು ಜಾರಿಗೆ ತರಬೇಕು ಮತ್ತು ಗ್ರಾಹಕರಿಗೆ ದರ ಏರಿಕೆಯ ವಿಧಾನವನ್ನು ತಿಳಿಸಬೇಕು.
3. ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಈ ಪ್ಲಾಟ್‌ಫಾರ್ಮ್‌ಗಳನ್ನು ಕಾನೂನು ಬದ್ಧವಾಗಿ ಹೊಣೆಗಾರರನ್ನಾಗಿಸಬೇಕು.
4. ಕೇಂದ್ರ ಸರ್ಕಾರದ ಮಾರ್ಗಸೂಚಿಗಳಲ್ಲಿ ಖಾಸಗಿ ಬಸ್ ಪ್ಲಾಟ್‌ಫಾರ್ಮ್‌ಗಳನ್ನೂ ಸೇರಿಸುವಂತೆ ಶಿಫಾರಸು ಮಾಡಬೇಕು.
ಸಮಯೋಚಿತ ನಿಯಂತ್ರಣದಿಂದ ಗ್ರಾಹಕರನ್ನು ಶೋಷಕ ದರ ಏರಿಕೆಯಿಂದ ರಕ್ಷಿಸಿ, ಸ್ಪರ್ಧಾತ್ಮಕತೆ ಹಾಗೂ ಪಾರದರ್ಶಕತೆಗೆ ಉತ್ತೇಜನ ನೀಡಬಹುದು. ಸುರಾಜ್ಯ ಅಭಿಯಾನವು ಈ ವಿಷಯದಲ್ಲಿ ಸರ್ಕಾರದ ತ್ವರಿತ ಕ್ರಮ ಹಾಗೂ ಪ್ರಯಾಣಿಕರ ಹಕ್ಕುಗಳ ರಕ್ಷಣೆಯ ನಿರೀಕ್ಷೆಯಲ್ಲಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”