2023 ರಲ್ಲಿ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಹೆಚ್ಚಳ!

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಅಂಕಿಅಂಶಗಳು!

ನವದೆಹಲಿ – ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ 2023 ರಲ್ಲಿ ಒಟ್ಟು 27 ಸಾವಿರದ 721 ಕೊಲೆ ಪ್ರಕರಣಗಳು ದಾಖಲಾಗಿವೆ, ಇದು 2022 ಕ್ಕೆ ಹೋಲಿಸಿದರೆ 2.8% ಇಳಿಕೆಯಾಗಿದೆ; ಆದರೆ ಇದೇ ಅವಧಿಯಲ್ಲಿ ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳು 28 ಪ್ರತಿಶತ ಗಮನಾರ್ಹ ಹೆಚ್ಚಾಗಿದೆ. ಸೈಬರ್ ಅಪರಾಧಗಳಲ್ಲಿ 31.2% ಹೆಚ್ಚಳ ಕಂಡುಬಂದಿದೆ. 2022 ರಲ್ಲಿ 65 ಸಾವಿರದ 893 ಪ್ರಕರಣಗಳು ದಾಖಲಾಗಿದ್ದರೆ, 2023 ರಲ್ಲಿ ಅವು 86 ಸಾವಿರದ 420 ಪ್ರಕರಣಗಳು ದಾಖಲಾಗಿತ್ತು. ಅದೇ ವೇಳೆ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು 0.4% ರಷ್ಟು ಹೆಚ್ಚಳವಾಗಿದೆ. ಸಂಖ್ಯೆಗಳ ವಿಚಾರ ಮಾಡುವಾಗ, 2022 ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಸಂಖ್ಯೆ 4 ಲಕ್ಷದ 45 ಸಾವಿರ ಆಗಿತ್ತು. 2023 ರಲ್ಲಿ ಅದು ಹೆಚ್ಚಾಗಿ 4 ಲಕ್ಷ 48 ಸಾವಿರದ 211 ಕ್ಕೆ ತಲುಪಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು ಸ್ಪಷ್ಟಪಡಿಸಿದ ಪ್ರಕಾರ, 2022 ರಲ್ಲಿ ದೇಶದಲ್ಲಿ 28 ಸಾವಿರದ 522 ಹತ್ಯೆಯ ಪ್ರಕರಣಗಳು ದಾಖಲಾಗಿದ್ದು. 2023ರಲ್ಲಿ 27 ಸಾವಿರದ 721 ಆಗಿದ್ದು ಶೇಕಡಾ 2.8 ಇಳಿಕೆ ಕಂಡಿದೆ.

ಕೊಲೆಗಳಿಗೆ ಪ್ರಮುಖ ಕಾರಣಗಳು!

ವರದಿಯ ಪ್ರಕಾರ, 2023 ರಲ್ಲಿ ಅತಿ ಹೆಚ್ಚು ಕೊಲೆಗಳು ವೈಯಕ್ತಿಕ ವಿವಾದಗಳಿಂದ, 9 ಸಾವಿರದ 209 ಘಟನೆಗಳು ದಾಖಲಾಗಿವೆ. ಆ ನಂತರ ವೈಯಕ್ತಿಕ ದ್ವೇಷದಿಂದ 3 ಸಾವಿರದ 458 ಹತ್ಯೆ ಪ್ರಕರಣಗಳು ಮತ್ತು ಲಾಭಕ್ಕಾಗಿ 1 ಸಾವಿರದ 890 ಹತ್ಯೆ ಪ್ರಕರಣಗಳು ನಡೆದಿವೆ. ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳು ಶೇಕಡಾ 28.8 ರಷ್ಟು ಹೆಚ್ಚಾಗಿದೆ. 2022 ರಲ್ಲಿ 10 ಸಾವಿರದ 22 ಪ್ರಕರಣಗಳು ದಾಖಲಾಗಿದ್ದು ಅದು 2023 ರಲ್ಲಿ 12 ಸಾವಿರದ 960 ಕ್ಕೆ ಏರಿದೆ. ಈ ವರ್ಗದ ಅಪರಾಧ ಪ್ರಮಾಣವು 2022 ರಲ್ಲಿ ಶೇಕಡಾ 9.6 ಇದ್ದು 2023 ರಲ್ಲಿ ಶೇಕಡಾ 12.4 ಆಗಿದೆ.

ಸಂಪಾದಕೀಯ ನಿಲುವು

ರಾಜಧಾನಿ ದೆಹಲಿ ಮಹಿಳೆಯರಿಗಾಗಿ ಯಾವಾಗಲೂ ಅಸುರಕ್ಷಿತವಾಗಿರುವುದು ನಾಚಿಕೆಗೇಡು. ಇದರ ಬಗ್ಗೆ ಇಷ್ಟು ವರ್ಷಗಳಾದರೂ ಸೂಕ್ತ ಕ್ರಮ ಕೈಗೊಳ್ಳದಿರುವುದು ಮತ್ತು ಅದನ್ನು ನಿಯಂತ್ರಿಸದಿರುವುದು, ಎಲ್ಲಾ ಪಕ್ಷದ ಸರಕಾರಗಳಿಗೆ ಲಜ್ಜ್ಯಾಸ್ಪದ !