ಬಲಾತ್ಕಾರಿಗೆ ಜಾಮೀನು ನಿರಾಕರಣೆ

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ಬಲಾತ್ಕಾರದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಈ ನಿರ್ಣಯವನ್ನು ನೀಡುವಾಗ, ಉಚ್ಚ ನ್ಯಾಯಾಲಯವು ಮನುಸ್ಮೃತಿ ಮತ್ತು ಮಹಾತ್ಮಾ ಗಾಂಧಿಯವರ ಉಲ್ಲೇಖ ಮಾಡುತ್ತಾ, ಸ್ತ್ರೀಯರ ಗೌರವವನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದೆ. ಈ ಪ್ರಕರಣವು ಬಿಹಾರದ ಬಾಂಕಾ ಮೂಲದ 19 ವರ್ಷದ ಆದಿವಾಸಿ ಯುವತಿಯ ಬಲಾತ್ಕಾರಕ್ಕೆ ಸಂಬಂಧಿಸಿದೆ. ಈ ಸಂದರ್ಭದಲ್ಲಿ ನ್ಯಾಯಪೀಠವು ಮನುಸ್ಮೃತಿಯ ಈ ಶ್ಲೋಕವನ್ನು ನೆನಪಿಸಿದೆ:
ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾಃ ಕ್ರಿಯಾಃ
ಮನುಸ್ಮೃತಿ(ಅಧ್ಯಾಯ 3, ಶ್ಲೋಕ 56)
(ಅರ್ಥ: ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ವಾಸಿಸುತ್ತಾರೆ ಮತ್ತು ಎಲ್ಲಿ ಅವರಿಗೆ ಅಪಮಾನವಾಗುತ್ತದೆಯೋ, ಅಲ್ಲಿ ಎಲ್ಲ ಕರ್ಮಗಳ ಮಹತ್ವ ಕಡಿಮೆಯಾಗುತ್ತದೆ.)
ನ್ಯಾಯಮೂರ್ತಿ ರಚೈಯ್ಯ ಅವರು ಮಹಾತ್ಮಾ ಗಾಂಧಿಯವರ, ‘ಯಾವ ದಿನ ಸ್ತ್ರೀಯರು ರಾತ್ರಿ ರಸ್ತೆಯಲ್ಲಿ ಸುರಕ್ಷಿತವಾಗಿ ತಿರುಗಾಡಲು ಸಾಧ್ಯವಾಗುತ್ತದೆಯೋ, ಆ ದಿನ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದು ನಾವು ಹೇಳಬಹುದು.’ ಎಂಬ ಹೇಳಿಕೆಯನ್ನೂ ಉಲ್ಲೇಖಿಸಿದರು.
ಯಾವ ಪ್ರಕರಣ?
ಸಂತ್ರಸ್ತ ಯುವತಿಯ ಕುಟುಂಬ ಕೇರಳದಲ್ಲಿ ಕೆಲಸ ಮಾಡುತ್ತದೆ. ಸಂತ್ರಸ್ತ ಯುವತಿಯು ಏಪ್ರಿಲ್ 2 ರಂದು ತನ್ನ ಸೋದರ ಸಂಬಂಧಿಯೊಂದಿಗೆ ಕೇರಳದಿಂದ ಬೆಂಗಳೂರಿನ ಕೆ.ಆರ್. ಪುರಂ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಳು. ಇಬ್ಬರೂ ಸಹೋದರ-ಸಹೋದರಿ ಮಹದೇವಪುರ ಪ್ರದೇಶದಲ್ಲಿ ಊಟಕ್ಕಾಗಿ ಹೋಗುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಅವರನ್ನು ಹಿಡಿದಿದ್ದಾರೆ. ಒಬ್ಬ ಆರೋಪಿಯು ಸಂತ್ರಸ್ತೆಯ ಸಹೋದರನನ್ನು ಹಿಡಿದು ನಿಂತರೆ, ಇನ್ನೊಬ್ಬನು ಸಂತ್ರಸ್ತ ಯುವತಿಯ ಮೇಲೆ ಬಲಾತ್ಕಾರ ಎಸಗಿದ್ದಾನೆ. ಸಂತ್ರಸ್ತೆಯ ಕೂಗಾಟ ಕೇಳಿ ಸುತ್ತಮುತ್ತಲಿನ ಜನರು ಸಹಾಯಕ್ಕೆ ಧಾವಿಸಿ, ಇಬ್ಬರೂ ಆರೋಪಿಗಳನ್ನು ಹಿಡಿದಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಿವಿಧ ಕಲಂಗಳ ಅಡಿಯಲ್ಲಿ ಅಪರಾಧ ದಾಖಲಿಸಲಾಗಿದೆ.
ಸಂಪಾದಕೀಯ ನಿಲುವುಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಮನುಸ್ಮೃತಿಯ ಬೋಧನೆಗಳೇ ಕಾರಣ ಎಂದು ಸುಳ್ಳು ಆರೋಪ ಮಾಡುವ ಸಾಮ್ಯವಾದಿ, ಕಾಂಗ್ರೆಸ್ಸಿಗ, ನಾಸ್ತಿಕವಾದಿ, ಪ್ರಗತಿಪರರಿಗೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಪರಾಕಿ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !