ವಿಶ್ವಸಂಸ್ಥೆಯಲ್ಲಿ ಪರೋಕ್ಷವಾಗಿ ಪಾಕಿಸ್ತಾನವನ್ನು ತರಾಟೆ ತೆಗೆದುಕೊಂಡ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ !

ನ್ಯೂಯಾರ್ಕ್ (ಅಮೇರಿಕಾ) – ಸ್ವಾತಂತ್ರ್ಯದಿಂದಲೂ ಭಾರತವು ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ನೆರೆಯ ದೇಶವನ್ನು (ಪಾಕಿಸ್ತಾನ) ಎದುರಿಸಬೇಕಾಗಿದೆ. ಅನೇಕ ದಶಕಗಳಿಂದ ದೊಡ್ಡ ಅಂತರರಾಷ್ಟ್ರೀಯ ಭಯೋತ್ಪಾದಕ ದಾಳಿಗಳು ಅದೇ ದೇಶದಲ್ಲಿ ನಡೆಯುತ್ತಿವೆ. ಅಲ್ಲಿನ ನಾಗರಿಕರು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ. ಪಹಲ್ಗಾಮ್‌ನಲ್ಲಿ ಕ್ರೂರ ಭಯೋತ್ಪಾದಕ ದಾಳಿಯಾದ ನಂತರ, ಭಾರತವು ಭಯೋತ್ಪಾದಕರ ನೆಲೆಗಳ ಮೇಲೆ ಕ್ರಮ ಕೈಗೊಂಡಿತ್ತು. ಭಯೋತ್ಪಾದಕರ ನೆಲೆಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿ ಭಯೋತ್ಪಾದಕರನ್ನು ಬಹಿರಂಗವಾಗಿ ವೈಭವೀಕರಿಸಲಾಗುತ್ತದೆ. ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದನ್ನು ನಿಲ್ಲಿಸಬೇಕು, ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನದ ಹೆಸರು ಹೇಳದೆ ಅದನ್ನು ಬಯಲಿಗೆಳೆದರು.
ಜೈಶಂಕರ್ ಅವರು ಮಾತು ಮುಂದುವರೆಸಿ, ಭಾರತದ ಸೈನಿಕರು ಶಾಂತಿಯನ್ನು ಕಾಪಾಡುತ್ತಾರೆ. ನೌಕಾಪಡೆಯು ದೊಡ್ಡ ಹಡಗುಗಳನ್ನು ರಕ್ಷಿಸುತ್ತದೆ, ಭದ್ರತಾ ಪಡೆಗಳು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತವೆ, ವೈದ್ಯರು ಮತ್ತು ಶಿಕ್ಷಕರು ಜಗತ್ತಿನಾದ್ಯಂತ ಮಾನವ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ, ಭಾರತೀಯ ಕೈಗಾರಿಕೆಗಳು ಕೈಗೆಟುಕುವ ಉತ್ಪನ್ನಗಳನ್ನು ತಯಾರಿಸುತ್ತವೆ, ತಂತ್ರಜ್ಞರು ‘ಡಿಜಿಟಲೀಕರಣ’ವನ್ನು ಉತ್ತೇಜಿಸುತ್ತಾರೆ ಮತ್ತು ತರಬೇತಿ ಕೇಂದ್ರಗಳನ್ನು ಜಗತ್ತಿಗೆ ಮುಕ್ತವಾಗಿರಿಸಲಾಗಿದೆ. ಇದೆಲ್ಲವೂ ಭಾರತದ ವಿದೇಶಾಂಗ ನೀತಿಯ ಕೇಂದ್ರದಲ್ಲಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ಭಯೋತ್ಪಾದಕ ಕೇಂದ್ರವನ್ನು ಭಾರತ ಬಹಿಷ್ಕರಿಸಬೇಕು ಮತ್ತು ಜಗತ್ತಿಗೂ ಬಹಿಷ್ಕರಿಸುವಂತೆ ಕರೆ ನೀಡಬೇಕು. ಆಗ ಮಾತ್ರ ಪಾಕಿಸ್ತಾನದ ಮೇಲೆ ಪರಿಣಾಮ ಬೀರಲು ಸಾಧ್ಯ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim