
ಅಯೋಧ್ಯೆ (ಉತ್ತರ ಪ್ರದೇಶ) – ಅಯೋಧ್ಯೆ ನಗರದಲ್ಲಿ ಮಸೀದಿ ಇರುವುದಕ್ಕೆ ಅರ್ಥವಿಲ್ಲ. ಅಲ್ಲಿ ಯಾವುದೇ ಮಸೀದಿ ನಿರ್ಮಾಣವಾಗುವುದಿಲ್ಲ ಎಂದು ಶ್ರೀರಾಮ ಮಂದಿರ ಆಂದೋಲನದ ಪ್ರಮುಖ ಸೂತ್ರಧಾರ ಹಾಗೂ ಭಾಜಪಯ ಹಿರಿಯ ನಾಯಕ ವಿನಯ ಕಟಿಯಾರ್ ಹೇಳಿದ್ದಾರೆ. ಸರ್ವೋಚ್ಚ ನ್ಯಾಯಾಲಯ ಆದೇಶದ ನಂತರ ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಸರಕಾರವು ಜಮೀನು ನೀಡಿತ್ತು. ಮಸೀದಿಯ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ಸಲ್ಲಿಸಿದ್ದ ಮಸೀದಿಯ ನಕ್ಷೆಯನ್ನು ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ತಿರಸ್ಕರಿಸಿದೆ. ಆ ವಿಷಯದ ಕುರಿತು ಅವರು ಮಾತನಾಡುತ್ತಾ, ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಏನು ಕೆಲಸ? ಅವರು ಸರಯೂ ನದಿಯ ಆಚೆ ದಡದಲ್ಲಿರುವ ಗೊಂಡಾ ಅಥವಾ ಬಸ್ತಿಯಲ್ಲಿ ವಾಸಿಸಬೇಕು. ಅಯೋಧ್ಯೆಯು ಪ್ರಭು ಶ್ರೀರಾಮನ ನಗರವಾಗಿದೆ ಮತ್ತು ಇಲ್ಲಿ ಶ್ರೀರಾಮ ಮಂದಿರ ಮಾತ್ರ ಇರುತ್ತದೆ, ಬೇರೇನೂ ಇರುವುದಿಲ್ಲ ಎಂದು ಹೇಳಿದ್ದಾರೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!