ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬೇಡಿಕೆ

ನವದೆಹಲಿ – ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಕುರಿತು ಭಾರತದ ನಿಲುವು ಬಹಳ ನಿರಾಶಾದಾಯಕವಾಗಿದೆ. ಸರಕಾರದ ದಿಗ್ಭ್ರಮೆಗೊಳಿಸುವ ಮೌನವು ಮಾನವೀಯತೆ ಮತ್ತು ನೈತಿಕತೆಯ ದ್ರೋಹವಾಗಿದೆ. ಇದು ಭಾರತದ ದೀರ್ಘಕಾಲದ ವಿದೇಶಾಂಗ ನೀತಿಯಿಂದ ದೂರ ಹೋಗುತ್ತಿರುವ ಸಂಕೇತವೂ ಆಗಿದೆ. ಭಾರತದ ನಿಲುವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ನಡುವಿನ ವೈಯಕ್ತಿಕ ಸ್ನೇಹದಿಂದ ಪ್ರಭಾವಿತವಾಗಿರುವಂತೆ ಕಾಣುತ್ತಿದೆ. ವಿದೇಶಾಂಗ ನೀತಿಯನ್ನು ವೈಯಕ್ತಿಕ ಸಂಬಂಧಗಳ ಆಧಾರದ ಮೇಲೆ ನಿರ್ಧರಿಸಬಾರದು. ಪ್ಯಾಲೆಸ್ಟೈನ್ ಸಮಸ್ಯೆಯನ್ನು ಪರಿಹರಿಸಲು ಭಾರತವು ಮುಂದಾಗಬೇಕು ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರಕಾರದ ಮೇಲೆ ಟೀಕೆ ಮಾಡಿದರು.
ಸೋನಿಯಾ ಗಾಂಧಿ ಮಾತು ಮುಂದುವರೆಸುತ್ತಾ, ಫ್ರಾನ್ಸ್, ಬ್ರಿಟನ್, ಕೆನಡಾ, ಪೋರ್ಚುಗಲ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ 193 ದೇಶಗಳಲ್ಲಿ 150 ಕ್ಕೂ ಹೆಚ್ಚು ದೇಶಗಳು ಪ್ಯಾಲೆಸ್ಟೈನ್ ಅನ್ನು ‘ಸ್ವತಂತ್ರ ರಾಜ್ಯ’ ಎಂದು ಗುರುತಿಸುತ್ತಿವೆ. ಈ ಹೆಜ್ಜೆಯು ಇಷ್ಟು ದಿನಗಳಿಂದ ಕಷ್ಟ ಅನುಭವಿಸುತ್ತಿರುವ ಪ್ಯಾಲೆಸ್ಟೀನಿಯನ್ ಜನರ ಕನಸುಗಳಿಗೆ ಒಂದು ಐತಿಹಾಸಿಕ ಆರಂಭವಾಗಿದೆ. ಜಗತ್ತು ಪ್ಯಾಲೆಸ್ಟೈನ್ ಗೆ ಬೆಂಬಲ ನೀಡುತ್ತಿರುವಾಗ, ಭಾರತವು ಇತ್ತೀಚೆಗೆ ಇಸ್ರೇಲ್‌ನೊಂದಿಗೆ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ ಮತ್ತು ಅವರ ಬಲಪಂಥೀಯ ಸಚಿವರನ್ನು ಸ್ವಾಗತಿಸಿದೆ. ಇದರ ಬಗ್ಗೆ ಪ್ರಪಂಚದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿವೆ. ಪ್ಯಾಲೆಸ್ಟೈನ್ ವಿಷಯವು ಭಾರತಕ್ಕೆ ಕೇವಲ ವಿದೇಶಾಂಗ ನೀತಿಯ ವಿಷಯವಲ್ಲ, ಬದಲಾಗಿ ಒಂದು ನೈತಿಕ ಮತ್ತು ನಾಗರಿಕ ಜವಾಬ್ದಾರಿಯೂ ಆಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಸೋನಿಯಾ ಗಾಂಧಿ ಎಂದಿಗೂ ‘ಕಾಶ್ಮೀರದಲ್ಲಿನ ನಿರಾಶ್ರಿತ ಹಿಂದೂಗಳ ಸಮಸ್ಯೆಯನ್ನು ಪರಿಹರಿಸಲು ಸರಕಾರ ಮುಂದಾಗಬೇಕು’ ಎಂದು ಹೇಳಲಿಲ್ಲ; ಆದರೆ ಪ್ಯಾಲೆಸ್ಟೈನ್ ನಲ್ಲಿರುವ ಉಗ್ರಗಾಮಿ ‘ಹಮಾಸ್’ ಅನ್ನು ಬೆಂಬಲಿಸುವ ಮುಸಲ್ಮಾನರ ಬಗ್ಗೆ ಅವರಿಗೆ ಬಹಳ ಕಾಳಜಿ ಇದೆ, ಎಂಬುದನ್ನು ಗಮನಿಸಬೇಕು! |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!