
ಬಡೌತ್ (ಉತ್ತರ ಪ್ರದೇಶ) – ನವರಾತ್ರಿಯ ಉತ್ಸವದಲ್ಲಿ ಮುಸಲ್ಮಾನ ಯುವಕರು ಗರಬಾ ಕಾರ್ಯಕ್ರಮಗಳಲ್ಲಿ ಹಿಂದೂ ಯುವತಿಯರನ್ನು ಚುಡಾಯಿಸುತ್ತಾರೆ. ಈ ಯುವಕರನ್ನು ತಡೆಯುವುದಕ್ಕಾಗಿ ಗರಬಾ ಮತ್ತು ರಾಮಲೀಲಾದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿದ ನಂತರವೇ ಯುವಕರಿಗೆ ಪ್ರವೇಶ ನೀಡಬೇಕು. ಹಿಂದೂ ಉತ್ಸವಗಳ ನಡುವೆ ನುಸುಳುವುದು ಮುಸ್ಲಿಮರ ಹಳೆಯ ನೀತಿ, ಎಂದು ಸಾಧ್ವಿ ಪ್ರಾಚಿ ಮಾತನಾಡುತ್ತಾ ಹೇಳಿದರು. ಅವರು ಉತ್ತರ ಪ್ರದೇಶದ ಬಡೌತ್‌ನಲ್ಲಿರುವ ಪಂಚಮುಖಿ ದೇವಾಲಯದಲ್ಲಿ ನಡೆಯುತ್ತಿರುವ ರಾಮಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವರಾತ್ರಿಯ ಸಮಯದಲ್ಲಿ ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಬೇಕು, ಎಂದು ಅವರು ಹೇಳಿದರು. ಗರಬಾ ಆಡುವುದು ಪವಿತ್ರವಾಗಿದ್ದರೆ, ಮುಸ್ಲಿಂ ಕುಟುಂಬಗಳು ತಮ್ಮಹೆಣ್ಣುಮಕ್ಕಳನ್ನು ಗರಬಾ ಆಡುವುದಕ್ಕಾಗಿ ಏಕೆ ಕಳುಹಿಸುವುದಿಲ್ಲ? ಎಂದು ಅವರು ಪ್ರಶ್ನಿಸಿದರು.
ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಮತದಾನದ ಹಕ್ಕು ಇರಬಾರದು ಎಂದು ಅವರು ಹೇಳಿದರು. ಡೆನ್ಮಾರ್ಕ್‌ನಲ್ಲಿ, ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಮರ ಮತದಾನದ ಹಕ್ಕುಗಳನ್ನು ತೆಗೆದು ಹಾಕಲಾಗಿದೆ. ಭಾರತದಲ್ಲಿಯೂ ಹೀಗೇ ಆಗಬೇಕು ಎಂದು ಅವರು ಹೇಳಿದರು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!