ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ಮೋದಿಯವರ ಭಾಷಣದಲ್ಲಿ ಘೋಷಣೆ
(‘ಜಿಎಸ್‌ಟಿ’ ಎಂದರೆ ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ – ಸರಕು ಮತ್ತು ಸೇವಾ ತೆರಿಗೆ)

ನವದೆಹಲಿ – ನಾಳೆಯಿಂದ ಪರಿಷ್ಕೃತ ‘ಜಿಎಸ್‌ಟಿ’ (ಸರಕು ಮತ್ತು ಸೇವಾ ತೆರಿಗೆ) ಜಾರಿಗೆ ಬರಲಿದೆ. ನವರಾತ್ರಿಯ ಮೊದಲ ದಿನದಿಂದ ದೇಶವು ‘ಆತ್ಮನಿರ್ಭರ ಭಾರತ’ ಅಭಿಯಾನದತ್ತ ಒಂದು ದೊಡ್ಡ ಹೆಜ್ಜೆ ಇಡುತ್ತಿದೆ. ಒಂದು ರೀತಿಯಲ್ಲಿ ನಾಳೆಯಿಂದ ದೇಶಾದ್ಯಂತ ‘ಜಿಎಸ್‌ಟಿ ಉಳಿತಾಯ ಮಹೋತ್ಸವ’ ಆರಂಭವಾಗಲಿದೆ. ಈ ಜಿಎಸ್‌ಟಿ ಮಹೋತ್ಸವವು ನಾಗರಿಕರ ಉಳಿತಾಯವನ್ನು ಹೆಚ್ಚಿಸುತ್ತದೆ ಮತ್ತು ಅವರಿಗೆ ಬೇಕಾದ ವಸ್ತುಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 21 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದರು. ಸೆಪ್ಟೆಂಬರ್ 22 ರಿಂದ ದೇಶದಲ್ಲಿ ಜಿಎಸ್‌ಟಿ ದರದಲ್ಲಿ ಕಡಿತ ಮಾಡಲಾಗುವುದು. ಇದರಿಂದಾಗಿ ಹಲವು ವಸ್ತುಗಳ ಬೆಲೆ ಕಡಿಮೆಯಾಗಲಿದೆ.
ಭಾರತದ ಅಭಿವೃದ್ಧಿಗೆ ವೇಗ ಸಿಗಲಿದೆ!
ಪ್ರಧಾನಿ ಮೋದಿ ಅವರು ಮಾತು ಮುಂದುವರೆಸಿ, ದೇಶದ ಬಡವರು, ಮಧ್ಯಮ ವರ್ಗದವರು, ಯುವಕರು, ರೈತರು, ಮಹಿಳೆಯರು ಮತ್ತು ವ್ಯಾಪಾರ ಮಾಲೀಕರು ಈ ಉಳಿತಾಯ ಮಹೋತ್ಸವದ ಲಾಭವನ್ನು ಪಡೆಯಲಿದ್ದಾರೆ. ಈ ಹಬ್ಬದ ಋತುವಿನಲ್ಲಿ ಪ್ರತಿಯೊಬ್ಬರ ಬಾಯಿ ಸಿಹಿಯಾಗಲಿದೆ. ಈ ಸುಧಾರಣೆಗಳು ಭಾರತದ ಅಭಿವೃದ್ಧಿಯ ಕಥೆಗೆ ವೇಗವನ್ನು ನೀಡಲಿವೆ. ಅವು ವ್ಯಾಪಾರವನ್ನು ಸುಲಭಗೊಳಿಸುತ್ತವೆ ಮತ್ತು ಹೂಡಿಕೆಯನ್ನು ಆಕರ್ಷಿಸುತ್ತವೆ. ಅವು ಅಭಿವೃದ್ಧಿಯ ಸ್ಪರ್ಧೆಯಲ್ಲಿ ಪ್ರತಿಯೊಂದು ರಾಜ್ಯವನ್ನು ಸಮಾನ ಪಾಲುದಾರರನ್ನಾಗಿ ಮಾಡುತ್ತವೆ. ಇನ್ನು ಮುಂದೆ ಕೇವಲ 5 ಮತ್ತು 18 ಪ್ರತಿಶತದಷ್ಟು ಜಿಎಸ್‌ಟಿ ಮಾತ್ರ ಅನ್ವಯವಾಗುತ್ತದೆ. ಇದರಿಂದಾಗಿ ದೈನಂದಿನ ಬಳಕೆಯ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಅಗ್ಗವಾಗಲಿವೆ. 12 ಪ್ರತಿಶತ ದರದಲ್ಲಿ ತೆರಿಗೆ ವಿಧಿಸಲಾಗುತ್ತಿದ್ದ 99 ಪ್ರತಿಶತ ವಸ್ತುಗಳ ಮೇಲೆ ಈಗ 5 ಪ್ರತಿಶತ ತೆರಿಗೆ ವಿಧಿಸಲಾಗುತ್ತದೆ. ಜಿಎಸ್‌ಟಿ ಕಡಿಮೆಯಾಗುವುದರಿಂದ ಮನೆ, ಟಿವಿ, ರೆಫ್ರಿಜರೇಟರ್, ಮೋಟಾರ್‌ಸೈಕಲ್, ದ್ವಿಚಕ್ರ ವಾಹನ ಇತ್ಯಾದಿಗಳನ್ನು ಖರೀದಿಸಲು ಕಡಿಮೆ ಖರ್ಚು ಮಾಡಬೇಕಾಗುತ್ತದೆ. ಪ್ರಯಾಣವೂ ಅಗ್ಗವಾಗಲಿದೆ.
ಯಾವುದು ಅಗ್ಗವಾಗಲಿದೆ?
-
ಟೂತ್‌ಪೇಸ್ಟ್, ಸಾಬೂನು ಮತ್ತು ಶಾಂಪೂ
-
ಬಿಸ್ಕೆಟ್, ಸ್ನ್ಯಾಕ್ಸ್ ಮತ್ತು ಜ್ಯೂಸ್‌ನಂತಹ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು
-
ತುಪ್ಪ, ಬೆಣ್ಣೆ ಮತ್ತು ಸಕ್ಕರೆ ರಹಿತ ಹಾಲಿನಂತಹ ಡೈರಿ ಉತ್ಪನ್ನಗಳು
-
ಸೈಕಲ್ ಮತ್ತು ಸ್ಟೇಷನರಿ ಸಾಮಗ್ರಿಗಳು
-
ಕೈಗೆಟುಕುವ ಬಟ್ಟೆ ಮತ್ತು ಪಾದರಕ್ಷೆಗಳು
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ