|

ಸಾಂಗ್ಲಿ, ಸೆಪ್ಟೆಂಬರ್ 19 (ವಾರ್ತೆ) – ವಿಟಾದಲ್ಲಿನ (ಸಾಂಗ್ಲಿ ಜಿಲ್ಲೆ) ಐ.ಟಿ.ಐ ಕಾಲೇಜು ಆವರಣದ ‘ಏಕತಾ ಗಣೇಶೋತ್ಸವ ಮಂಡಳಿ’ಯ 3 ಕಾರ್ಯಕರ್ತರ ಮೇಲೆ ಮತಾಂಧರು ಹಲ್ಲೆ ನಡೆಸಿದ್ದಾರೆ. ಅನಂತ ಚತುರ್ದಶಿಯಂದು ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ನಂತರ, ಮತಾಂಧ ಮುಸಲ್ಮಾನರು ‘ಏಕತಾ ಗಣೇಶೋತ್ಸವ ಮಂಡಳಿ’ಯ ಪದಾಧಿಕಾರಿ ಶ್ರೀ. ಧನರಾಜ್ ಕಾತಾರಿ ಮತ್ತು ಇತರ 2 ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ಗಣೇಶೋತ್ಸವದ ಪ್ರಾರಂಭದಿಂದಲೂ ಮತಾಂಧರು ಈ ಗಣೇಶೋತ್ಸವವನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಮತಾಂಧರ ಈ ಬೆದರಿಕೆಯಿಂದಾಗಿ, ಈ ಪ್ರದೇಶದ ಹಿಂದೂಗಳು ಸ್ಥಳಾಂತರಗೊಳ್ಳಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನ ನಡೆದಿದೆ ಎಂದು ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ. ಮಾರಣಾಂತಿಕ ಹಲ್ಲೆ ನಡೆಸಿದ ಮತಾಂಧರಿಗೆ ಒಂದೇ ದಿನದಲ್ಲಿ ಜಾಮೀನು ಕೂಡ ಸಿಕ್ಕಿದೆ.

ಗಣೇಶೋತ್ಸವ ಆಚರಿಸಬಾರದೆಂದು ಒತ್ತಡ ಹೇರಿ ಮುಸಲ್ಮಾನರು ನನ್ನ ಮೇಲೆ ದಾಳಿ ಮಾಡಿದರು! – ಧನರಾಜ್ ಕಾತಾರಿ
ಈ ಕುರಿತು ಏಕತಾ ಗಣೇಶೋತ್ಸವ ಮಂಡಳಿಯ ಪದಾಧಿಕಾರಿ ಶ್ರೀ. ಧನರಾಜ್ ಕಾತಾರಿ ಇವರು,
1. ಪ್ರತಿ ವರ್ಷದಂತೆ ‘ಏಕತಾ ಯುವ ಮಿತ್ರ ಗಣೇಶೋತ್ಸವ ಮಂಡಳಿ’ಯ ವತಿಯಿಂದ ಗಣೇಶೋತ್ಸವವನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ, ಆ ಪ್ರದೇಶದ ಮತಾಂಧ ಮುಸಲ್ಮಾನರು ಗಣೇಶೋತ್ಸವಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿ, ‘ಕಾರ್ಯಕರ್ತರು ಇಲ್ಲಿ ಗಣೇಶೋತ್ಸವದ ಪೆಂಡಾಲ್ ಹಾಕಬಾರದು ಮತ್ತು ಪೆಂಡಾಲ್ ಹಾಕಿದರೂ, ಮಸೀದಿಯ ನಮಾಜ್ ಸಮಯದಲ್ಲಿ ಭಕ್ತಿಗೀತೆಗಳನ್ನು ಮತ್ತು ಆರತಿಯನ್ನು ಹಾಕಬಾರದು, ಆರತಿ ಇತ್ಯಾದಿಗಳನ್ನು ಧ್ವನಿವರ್ಧಕದಲ್ಲಿ ಹಾಕಬಾರದು’ ಎಂದು ಬೆದರಿಕೆ ಹಾಕಿದರು.
2. ಸೆಪ್ಟೆಂಬರ್ 8 ರಂದು ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ನಂತರ, ಅದೇ ದಿನ ರಾತ್ರಿ 8.15 ಕ್ಕೆ ಮತಾಂಧ ಮುಸಲ್ಮಾನರು ನನ್ನ ಮೇಲೆ ಖಡ್ಗ, ಕತ್ತಿ ಮತ್ತು ದೊಣ್ಣೆಗಳಿಂದ ಮಾರಣಾಂತಿಕ ದಾಳಿ ಮಾಡಿದರು. ಆ ಸಮಯದಲ್ಲಿ ನನ್ನ ಸಹೋದರ ಶ್ರೀ. ರಾಜ ಅಮರ ಕಾತಾರಿ ಮತ್ತು ಸ್ನೇಹಿತ ಶ್ರೀ. ಗಣೇಶ ಕಾಂಬ್ಳೆ ಅವರು ಕೂಗಾಡಿ ನನ್ನನ್ನು ರಕ್ಷಿಸಿದರು.

3. ಈ ದಾಳಿಯಲ್ಲಿ ನನ್ನ ತಲೆಗೆ ಗಂಭೀರವಾದ ಪೆಟ್ಟಾಗಿದೆ. ತಲೆಗೆ 38 ಹೊಲಿಗೆ ಹಾಕಲಾಗಿದೆ. ಕೈ ಮೂಳೆ ಮುರಿದಿದೆ.
4. ನನ್ನ ಸ್ನೇಹಿತ ಮತ್ತು ಸಹೋದ್ಯೋಗಿ ಶ್ರೀ. ಹರ್ಷದ ಘಾಡಗೆ ಮತ್ತು ಇನ್ನೊಬ್ಬ ಕಾರ್ಯಕರ್ತನ ಮೇಲೆ ಮತಾಂಧರು ದಾಳಿ ಮಾಡಿದರು.
5. ಈ ದಾಳಿಯ ನಂತರ, ಗುಂಪು ಸೇರಿ ನಮ್ಮ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ.
6. ಇಷ್ಟು ದೊಡ್ಡ ದಾಳಿ ನಡೆದರೂ ಆರೋಪಿಗಳಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ. ಪೊಲೀಸರು ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಜಾಮೀನು ಸಿಕ್ಕ ನಂತರ, ಮತಾಂಧರು ವಿಟಾ ನಗರದಲ್ಲಿ ಮೆರವಣಿಗೆ ಮಾಡಿ ಪಟಾಕಿ ಸಿಡಿಸಿದ್ದಾರೆ.
ಮಾರಣಾಂತಿಕ ಹಲ್ಲೆ ನಡೆಸಿದರೂ, ಪೊಲೀಸರು ಪ್ರಕರಣ ದಾಖಲಿಸುವಾಗ ಸೆಕ್ಷನ್ 307 ಅನ್ನು ಸೇರಿಸಲಿಲ್ಲ!
ವಿಟಾ ಪೊಲೀಸರು ಹಲ್ಲೆ ನಡೆಸಿದ ಮತಾಂಧ ಮುಸಲ್ಮಾನರ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ; ಆದರೆ ‘ಮಾಬ್ ಲಿಂಚಿಂಗ್’ (ಗುಂಪು ಹಲ್ಲೆ) ಮತ್ತು ಕೊಲೆ ಯತ್ನಕ್ಕೆ ಸಂಬಂಧಿಸಿದ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ. ಅಷ್ಟೇ ಅಲ್ಲ, ಈ ಘಟನೆಯಲ್ಲಿ ಒಟ್ಟು 20 ಮತಾಂಧರು ಹಲ್ಲೆ ನಡೆಸಿದ್ದರೂ, ಪೊಲೀಸರು ಕೇವಲ 8 ಮತಾಂಧರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಪೊಲೀಸರು ಹಲ್ಲೆ ನಡೆಸಿದ ಮತಾಂಧ ಮುಸಲ್ಮಾನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ.
ಮತಾಂಧ ಆರೋಪಿಗಳ ಹೆಸರುಗಳುಟಿಪ್ಪು ಸುಲ್ತಾನ್ ಗ್ಯಾಂಗ್‌ನ ರಹೀಂ ರಾಜ್ ಕಾದ್ರಿ, ಜಮೀರ್ ಮುಜಾವರ್, ರಹೀಂ ಮುಜಾವರ್, ಕೈಫ್ ಮುಲ್ಲಾ, ಹುಸೇನ್ ಮುಲ್ಲಾ, ಸೋಹೇಲ್ ಪಟೇಲ್, ಯಾಸೀನ್ ಮುಜಾವರ್, ನವಾಜ್ ಮುಜಾವರ್ ಸೇರಿದಂತೆ 30 ರಿಂದ 40 ಜನ |
ಹಿಂದೂಗಳಲ್ಲಿ ಭಯ ಹುಟ್ಟಿಸಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನಾಗಿ ಮಾಡುವ ಸಂಚು! – ಸ್ಥಳೀಯ ಹಿಂದೂಗಳ ಅಭಿಪ್ರಾಯ
‘ಐ.ಟಿ.ಐ ಕಾಲೇಜು ಆವರಣದಲ್ಲಿ ವಾಸಿಸುವ ಹಿಂದೂಗಳಲ್ಲಿ ಭಯ ಹುಟ್ಟಿಸಿ ಅವರನ್ನು ಅಲ್ಲಿಂದ ಸ್ಥಳಾಂತರಗೊಳ್ಳಲು ಒತ್ತಾಯಿಸುವುದು ಮತ್ತು ಈ ಪ್ರದೇಶವನ್ನು ಮುಸ್ಲಿಂ ಬಹುಸಂಖ್ಯಾತ ಪ್ರದೇಶವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ’, ಎಂದು ಸ್ಥಳೀಯ ಹಿಂದೂಗಳ ಅಭಿಪ್ರಾಯವಾಗಿದೆ. ಗಣೇಶೋತ್ಸವ ಮಂಡಳಿಯ ಕಾರ್ಯಕರ್ತರ ಮೇಲೆ ಮತಾಂಧರಿಂದ ಹಲ್ಲೆಯಾದ ನಂತರ, ಏಕತಾ ಗಣೇಶೋತ್ಸವ ಮಂಡಳಿಯ ಕಾರ್ಯಕರ್ತರು ಸ್ಥಳೀಯ ಪೊಲೀಸರಿಗೆ ದೂರು ನೀಡಿದರು; ಆದರೆ ಪೊಲೀಸರು ದೂರು ದಾಖಲಿಸಲು ವಿಳಂಬ ಮಾಡಿದರು ಮತ್ತು ಪರಸ್ಪರ ವಿರುದ್ಧ ದೂರುಗಳನ್ನು ದಾಖಲಿಸಿದ್ದಾರೆ. (ಪೊಲೀಸರು ಏಕೆ ವಿಳಂಬ ಮಾಡುತ್ತಾರೆ? ಅವರು ಮತಾಂಧರಿಗೆ ಹೆದರುತ್ತಾರೆಯೇ? – ಸಂಪಾದಕರು)
ಸಂಪಾದಕೀಯ ನಿಲುವು
|
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !