‘ಯಾರಿಗೆ ಕಣ್ಣುಗಳಿಲ್ಲವೋ, ಅವರ ಪಾಪಗಳು ಎಷ್ಟಿರಬಹುದು’ – ಆಝಾದ್ ಸಮಾಜ ಪಕ್ಷದ ಸಂಸದ ಚಂದ್ರಶೇಖರ ಆಜಾದ Samajwadi Party Leader Insults Hindu Saints

ಆಝಾದ ಸಮಾಜ ಪಕ್ಷದ ಸಂಸದ ಚಂದ್ರಶೇಖರ ಆಜಾದ ಅವರಿಂದ ಜಗದ್ಗುರು ರಾಮಭದ್ರಾಚಾರ್ಯರ ಮೇಲೆ ಅತ್ಯಂತ ಕೀಳುಮಟ್ಟದ ಟೀಕೆ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಆಝಾದ ಸಮಾಜ ಪಕ್ಷದ ಮುಖ್ಯಸ್ಥ ಹಾಗೂ ನಗೀನಾ ಕ್ಷೇತ್ರದ ಸಂಸದ ಚಂದ್ರಶೇಖರ ಆಜಾದ ಅವರು ಜಗದ್ಗುರು ರಾಮಭದ್ರಾಚಾರ್ಯರ ಹೆಸರು ಹೇಳದೆ, ‘ಯಾರಿಗೆ ಕಣ್ಣುಗಳಿಲ್ಲವೋ, ಅವರ ಪಾಪಗಳು ಎಷ್ಟಿರಬಹುದು’ ಎಂದು ಅತ್ಯಂತ ಕೀಳು ಮಟ್ಟದಲ್ಲಿ ಟೀಕಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಬರೇಲಿಯಲ್ಲಿ ನಡೆದ ಸಭೆಯಲ್ಲಿ ಚಂದ್ರಶೇಖರ ಮಾತನಾಡುತ್ತಿದ್ದರು. ಜಗದ್ಗುರು ರಾಮಭದ್ರಾಚಾರ್ಯರ ಹೆಸರು ಹೇಳದೆ, ಸಂತರಿಗೆ ಯಾವುದೇ ಜಾತಿ ಅಥವಾ ಧರ್ಮ ಇರುವುದಿಲ್ಲ. ಸಂತರು ಎಲ್ಲರಿಗೂ ಸೇರಿದವರು. ಮೇರಠ ನಗರದ ಸಂಬಂಧ 1857 ರ ಸ್ವಾತಂತ್ರ್ಯ ಹೋರಾಟದೊಂದಿಗೆ ಸೇರಿದೆ. ಆದ್ದರಿಂದ ಆ ಭೂಮಿಯನ್ನು ತಪ್ಪಾದ ರೀತಿಯಲ್ಲಿ ಉಲ್ಲೇಖಿಸುವುದು ಸರಿಯಲ್ಲ. ಅವರಿಗೆ ಬಾಲ್ಯದಿಂದಲೇ ಕಣ್ಣು ಕಾಣಿಸುವುದಿಲ್ಲ ಎಂದು ನಾನು ಕೇಳಿದ್ದೇನೆ. ಮನುಷ್ಯನು ಹಿಂದಿನ ಜನ್ಮದ ಕರ್ಮಗಳ ಫಲವನ್ನು ಪಡೆಯುತ್ತಾನೆ ಎಂದು ನಾವು ಕೇಳಿದ್ದೇವೆ; ಹಾಗಾದರೆ ಅವರು ಹಿಂದಿನ ಜನ್ಮದಲ್ಲಿ ಎಷ್ಟು ಕೆಟ್ಟ ಕೃತ್ಯಗಳನ್ನು ಮಾಡಿರಬೇಕು, ಪ್ರಕೃತಿಯೇ ಅವರಿಗೆ ಕಣ್ಣುಗಳನ್ನು ನೀಡಿಲ್ಲ. ಅವರ ಪಾಪದ ಫಲ ಎಷ್ಟಿರಬಹುದು? ಮತ್ತು ಜನರು ಇಂತಹ ಅಪರಾಧಿಯಿಂದ ಜ್ಞಾನ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಯಾವ ಪ್ರಕರಣ?

ಕೆಲವು ದಿನಗಳ ಹಿಂದೆ ಮೇರಠನಲ್ಲಿ ಆಯೋಜಿಸಿದ್ದ ರಾಮಕಥಾ ಸಂದರ್ಭದಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಪಶ್ಚಿಮ ಉತ್ತರ ಪ್ರದೇಶವನ್ನು ‘ಛೋಟಾ ಪಾಕಿಸ್ತಾನ್’ ಎಂದು ಕರೆದಿದ್ದರು. ‘ಇಂದು ಹಿಂದೂಗಳ ಮೇಲೆ ದೊಡ್ಡ ಸಂಕಷ್ಟ ಎದುರಾಗಿದೆ. ಇಲ್ಲಿಗೆ ಬಂದಾಗ ಸಣ್ಣ ಪಾಕಿಸ್ತಾನಕ್ಕೆ ಬಂದಂತೆ ಅನಿಸುತ್ತದೆ’ ಎಂದೂ ಅವರು ಹೇಳಿದ್ದರು.

ಸಂಪಾದಕೀಯ ನಿಲುವು

ಇದು ಆಝಾದ ಸಮಾಜ ಪಕ್ಷದ ಹಿಂದೂದ್ವೇಷಿ ಮನಸ್ಥಿತಿ ಕಂಡು ಬರುತ್ತದೆ. ಹಿಂದೂಗಳ ದೇವತೆಗಳು, ಧರ್ಮಗ್ರಂಥಗಳು ಮತ್ತು ಸಂತರು-ಮಹಂತರ ಮೇಲೆ ಇಷ್ಟು ಕೀಳುಮಟ್ಟದ ಟೀಕೆ ಮಾಡುವವರಿಂದ ತುಂಬಿರುವ ಆಝಾದ ಸಮಾಜ ಪಕ್ಷದ ರಾಜಕೀಯ ಅಸ್ತಿತ್ವವನ್ನು ಹಿಂದೂಗಳು ಖಂಡಿತಾ ಕೊನೆಗೊಳಿಸುತ್ತಾರೆ!