೨೧.೯.೨೦೨೫ : ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ೫೮ ನೆಯ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಭಾವಪೂರ್ಣ ನಮಸ್ಕಾರಗಳು

ಚೈತನ್ಯದ ಸ್ತರದಲ್ಲಿ ಕಾರ್ಯನಿರ್ವಹಿಸುವ ಮತ್ತು ಸಾಧಕರಿಗೆ ಆಧಾರಸ್ತಂಭವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಚೈತನ್ಯದ ಸ್ತರದಲ್ಲಿ ಕಾರ್ಯ ಹೇಗೆ ನಡೆಯುತ್ತದೆ’ ಎಂಬುದರ ಸಾಕಾರ ಉದಾಹರಣೆಯೆಂದರೆ ‘ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ’ ಎಂದು ನಾನು ಕಳೆದ ವರ್ಷ ಅವರ ಬಗ್ಗೆ ಹೇಳಿದ್ದೆ. ಈ ವರ್ಷ ನನ್ನ ಜನ್ಮೋತ್ಸವದ ನಿಮಿತ್ತ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವನ್ನು ಆಯೋಜಿಸುವಾಗ ಎಲ್ಲ ಸಾಧಕರಿಗೂ ಇದರ ಅನುಭೂತಿ ಬಂದಿತು. ಸನಾತನದ ಇತಿಹಾಸದಲ್ಲಿ ಇಷ್ಟು ದೊಡ್ಡ ಕಾರ್ಯಕ್ರಮ ಮೊದಲ ಬಾರಿಗೆ ನಡೆಯುತ್ತಿತ್ತು. ಮಹೋತ್ಸವದ ವಿವಿಧ ಸೇವೆಗಳ ಜವಾಬ್ದಾರಿಯನ್ನು ಸಾಧಕರು ನಿಭಾಯಿಸುತ್ತಿದ್ದರೂ, ಸಾಧನೆಯ ಸ್ತರದಲ್ಲಿ ಅವರಿಗೆ ಯೋಗ್ಯ ಮಾರ್ಗದರ್ಶನ ನೀಡುವುದು ಆವಶ್ಯಕವಾಗಿತ್ತು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರು ಈ ಜವಾಬ್ದಾರಿಯನ್ನು ಸುಲಲಿತವಾಗಿ ನಿಭಾಯಿಸಿದರು. ಮಹೋತ್ಸವದ ಆಯೋಜನೆಯ ಬಗ್ಗೆ ನಡೆದ ವಿವಿಧ ಸಭೆಗಳಲ್ಲಿ ಉಪಸ್ಥಿತರಿದ್ದು, ಅವರು ಸಾಧಕರಿಂದ ಮತ್ತು ಇತರ ಸಂಘಟನೆಗಳ ಪ್ರತಿನಿಧಿಗಳಿಂದ ಅನೇಕ ವಿಷಯಗಳನ್ನು ತಿಳಿದುಕೊಂಡರು. ಇದು ಅವರಲ್ಲಿರುವ ಶಿಷ್ಯಭಾವದಲ್ಲಿದ್ದು ಇತರರಿಂದ ಕಲಿಯುವವೃತ್ತಿಯನ್ನು ತೋರಿಸುತ್ತದೆ. ಎಲ್ಲ ಸಾಧಕರಿಗೂ ಅವರಿಂದ ಆಧಾರ ಸಿಗುತ್ತಿತ್ತು ಮತ್ತು ಅವರ ಉಪಸ್ಥಿತಿಯಿಂದ ಸಾಧಕರ ಆತ್ಮವಿಶ್ವಾಸವೂ ದ್ವಿಗುಣಗೊಂಡಿತ್ತು.

 ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿನ ಬಂದ ಅನುಭೂತಿಗಳ ಕುರಿತು ದೈನಿಕ ‘ಸನಾತನ ಪ್ರಭಾತ’ದಲ್ಲಿನ ಲೇಖನಗಳನ್ನು ಓದುವಾಗ, ಸಾಧಕರ ಸಹಿತ ಸಮಾಜದ ಧರ್ಮಪ್ರೇಮಿಗಳಿಗೂ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ಬಗ್ಗೆ ಸ್ಥೂಲ ಮತ್ತು ಸೂಕ್ಷ್ಮ ಸ್ತರದಲ್ಲಿ ಅನುಭೂತಿಗಳು ಬಂದವು ಎಂಬುದು ಗಮನಕ್ಕೆ ಬರುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರ ವ್ಯಾಪಕತೆಯು ಈಗ ಹೆಚ್ಚುತ್ತಿದೆ. ಕೇವಲ ಸಾಧಕರಿಗೆ ಮಾತ್ರವಲ್ಲ, ಸಮಾಜದ ವ್ಯಕ್ತಿಗಳಿಗೂ ಅವರ ದಿವ್ಯತ್ವದ ಅನುಭವವಾಗುತ್ತಿದೆ.

ಅವರಿಂದ ಚೈತನ್ಯದ ಸ್ತರದಲ್ಲಿ ಕಾರ್ಯವು ತನ್ನಷ್ಟಕ್ಕೆ ನಡೆಯುತ್ತಿದೆ ಮತ್ತು ಭಕ್ತಿಸತ್ಸಂಗಗಳ ಮೂಲಕ ಸಾಧಕರ ಸ್ವಭಾವದೋಷಗಳನ್ನು ನಿರ್ಮೂಲನೆ ಮಾಡಲು ಹಾಗೂ ಭಕ್ತಿ ಹೆಚ್ಚಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಅವರು ಸಾಧಕರ ಸಾಧನೆಯಲ್ಲಿ ಆಧಾರಸ್ತಂಭವಾಗಿದ್ದಾರೆ. ಸಾಧಕರನ್ನು ರೂಪಿಸುವ ಮತ್ತು ಜಿಜ್ಞಾಸುಗಳನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸುವ ಪರಂಪರೆಯನ್ನು ಅವರು ಸಮರ್ಥವಾಗಿ ಮುಂದುವರೆಸುತ್ತಿದ್ದಾರೆ. ಸಾಧಕರನ್ನು ರೂಪಿಸುವ ಮತ್ತು ಜಿಜ್ಞಾಸುಗಳನ್ನು ಸನಾತನ ಸಂಸ್ಥೆಯೊಂದಿಗೆ ಜೋಡಿಸುವ ಪರಂಪರೆಯನ್ನು ಅವರು ಸಮರ್ಥವಾಗಿ ಮುಂದುವರೆಸುತ್ತಿದ್ದಾರೆ. ಸನಾತನದ ವಟವೃಕ್ಷದಂತೆ ಬೆಳೆಯುತ್ತಿರುವ ಇಂದಿನ ಕಾರ್ಯವನ್ನು ನೋಡಿದರೆ, ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ನನಗೆ ನೀಡಿದ ‘ಸನಾತನದ ಕಾರ್ಯವು ದೇಶ-ವಿದೇಶಗಳಲ್ಲಿ ತಲುಪುತ್ತದೆ’ ಎಂಬ ಆಶೀರ್ವಾದದ ಸತ್ಯತೆಯು ಅನುಭವಕ್ಕೆ ಬರುತ್ತದೆ. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮೂಲಕ ಈ ಕಾರ್ಯವು ಉತ್ತರೋತ್ತರ ಹೆಚ್ಚುತ್ತಿದೆ. ಸಾಧಕರು ಅವರ ಚೈತನ್ಯಮಯ ಸತ್ಸಂಗ ಮತ್ತು ಮಾರ್ಗದರ್ಶನದ ಲಾಭವನ್ನು ಪಡೆಯಬೇಕು !

 ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಅವರಿಗೆ ಅವರ ೫೮ ನೆಯ ಹುಟ್ಟುಹಬ್ಬದ ನಿಮಿತ್ತ ಅನೇಕ ಶುಭಾಶಯಗಳು !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೨.೯.೨೦೨೫)