
೧. ಒಂದೇ ಸಮಯದಲ್ಲಿ ಅನೇಕ ಸ್ತರಗಳಲ್ಲಿ ಕಾರ್ಯವನ್ನು ಮಾಡುವ ಮತ್ತು ಕಾರ್ಯವನ್ನು ಮಾಡಲು ಸಮಯದ ಮಿತಿ ಇಲ್ಲದಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕಾರ್ಯ ಈಗ ಬಹಳ ಹೆಚ್ಚಾಗಿದೆ. ಅವರಿಗೆ ಕಾರ್ಯವನ್ನು ಮಾಡಲು ಈಗ ಕಾಲದ ಮಿತಿಯೂ ಇಲ್ಲ. ‘ಮಹರ್ಷಿಗಳು ಅವರನ್ನು ಅವತಾರ ಎಂದು ಏಕೆ ಕರೆಯುತ್ತಾರೆ ?’, ಎಂಬುದು ಅವರ ಅಪಾರ ಸಮಷ್ಟಿ ಕಾರ್ಯ ಮಾಡುವ ವಿಧಾನದಿಂದ ಗಮನಕ್ಕೆ ಬರುತ್ತದೆ. ಅವರು ಒಂದೇ ಸಮಯದಲ್ಲಿ ಬಹಳಷ್ಟು ಜನರ ಸಮಸ್ಯೆಗಳನ್ನು ಒಂದೇ ಕ್ಷಣದಲ್ಲಿ ನಿವಾರಿಸುತ್ತಾರೆ.

೨. ಸಾಧಕರಿಗೆ ಸಾಧನೆಯಲ್ಲಿ ಯೋಗ್ಯ ಮಾರ್ಗದರ್ಶನ ಮಾಡಿ ಅವರ ಫಲನಿಷ್ಪತ್ತಿಯನ್ನು ಹೆಚ್ಚಿಸುವ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ !
ಹಿಂದೆ, ಅವರು ಕೇವಲ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿನ ಸಾಧಕರಿಗೆ ಮಾತ್ರ ಸಾಧನೆಯ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದರು. ಅನಂತರ, ಸಾಧನೆಯಿಂದ ನಿಧಾನವಾಗಿ ಅವರಲ್ಲಿನ ಕಾರ್ಯಕ್ಷಮತೆ ಹೆಚ್ಚಾಯಿತು. ಅವರು ಆಶ್ರಮದ ಜೊತೆಗೆ ಪ್ರಚಾರದಲ್ಲಿರುವ ಸಾಧಕರಿಗೂ ಮಾರ್ಗದರ್ಶನ ಮಾಡತೊಡಗಿದರು. ಅವರು ಸಾಧಕರ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಪರಿಹರಿಸಲು ಪ್ರಾರಂಭಿಸಿದರು. ಅವರಿಗೆ ಸಾಧನೆಯಲ್ಲಿ ಯೋಗ್ಯ ಮಾರ್ಗದರ್ಶನವನ್ನೂ ಮಾಡತೊಡಗಿದರು. ಸನಾತನ ಸಂಸ್ಥೆಯ ಅನೇಕ ಕಾರ್ಯಗಳಿಗೆ ಸಂಬಂಧಿಸಿದ ಸೇವೆಗಳಿವೆ. ಸೇವೆ ಮಾಡುವ ಸಾಧಕರ ಸತ್ಸಂಗಗಳನ್ನು ನಡೆಸಿ, ಅವರ ಸಾಧನೆಯನ್ನು ಉತ್ತಮ ಮತ್ತು ಪರಿಪೂರ್ಣ ರೀತಿಯಲ್ಲಿ ಸುವ್ಯವಸ್ಥಿತಗೊಳಿಸಿ ಅವರ ಫಲನಿಷ್ಪತ್ತಿಯನ್ನು ಹೆಚ್ಚಿಸುವುದೂ ಅವರಿಗೆ ಸಾಧ್ಯವಾಗತೊಡಗಿತು. ಪರಾತ್ಪರ ಗುರು ಡಾ. ಆಠವಲೆಯವರೂ (ಗುರುದೇವರೂ) ಅವರನ್ನು ಪ್ರಶಂಸಿಸತೊಡಗಿದರು.
೩. ವಿವಿಧ ಅನೇಕ ಸೇವೆಗಳಿಗೆ ಸಂಬಂಧಿಸಿದ ಸೇವೆಗಳನ್ನು ಮಾಡುವ ಸಾಧಕರ ಪರೋಕ್ಷ ಜವಾಬ್ದಾರಿಯನ್ನು ಸುಲಭವಾಗಿ ವಹಿಸಿ ಸದ್ಗುರುಪದವನ್ನು ಪಡೆದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಆಶ್ರಮದಲ್ಲಿ ವಿವಿಧ ರಾಜ್ಯಗಳಿಂದ ಬರುವ ಸಾಧಕರ ಶಿಬಿರಗಳು ನಡೆಯುತ್ತವೆ. ಆ ಸಾಧಕರು ಆಶ್ರಮಕ್ಕೆ ಬಂದಾಗ ಅವರಿಗೆ ಮಾತೃಪ್ರೇಮ ನೀಡುವುದು, ಇದು ಸಹ ಅವರ ಕಾರ್ಯದ ಒಂದು ಭಾಗವಾಗಿದೆ. ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಿಸಿದ ಸೇವೆ ಮಾಡುವವವರು, ಕಲೆ, ಕಟ್ಟಡ ಕಾಮಗಾರಿ ಮತ್ತು ಪ್ರಸಾರ, ಹಾಗೆಯೇ ಇತರ ಅನೇಕ ವಿವಿಧ ಸೇವೆಗಳಿಗೆ ಸಂಬಂಧಿಸಿದ ಸೇವೆಯನ್ನು ಮಾಡುವ ಸಾಧಕರ ಸಾಧನೆಯ ಪರೋಕ್ಷ ಜವಾಬ್ದಾರಿಯನ್ನು ಅವರು ಸುಲಭವಾಗಿ ವಹಿಸಿಕೊಂಡರು. ಅವರ ಸಾಧನೆಯ ವೇಗ ಎಷ್ಟು ಅಗಾಧವಾಗಿತ್ತು ಎಂದರೆ ನೋಡನೋಡುತ್ತಾ ಅವರು ಯಾವಾಗ ಸದ್ಗುರುಪದವಿಯನ್ನು ತಲುಪಿದರು ಎಂಬುದು ಯಾರಿಗೂ ಗಮನಕ್ಕೆ ಬರಲಿಲ್ಲ.
೪ ಅನೇಕ ಬಾರಿ ಸಾಧಕರಿಗೆ ಮಾರ್ಗದರ್ಶನ ನೀಡಿ ಚೈತನ್ಯದ ಸ್ತರದಲ್ಲಿ ಕಾರ್ಯವನ್ನು ನಿರ್ವಹಿಸುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !
ಮುಂದೆ ಮಹರ್ಷಿಗಳು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಅವತಾರಿ ಕಾರ್ಯದ ಬಗ್ಗೆ ಮೇಲಿಂದ ಮೇಲೆ ನಾಡಿವಾಚನದ ಮೂಲಕ ಉಲ್ಲೇಖಿಸತೊಡಗಿದರು. ಅವರನ್ನು ‘ಶ್ರೀ ಮಹಾಲಕ್ಷ್ಮೀಯ ಅವತಾರ’ವೆಂದು ಸಂಬೋಧಿಸತೊಡಗಿದರು. ನಾನು ಅವರ ಈ ಪ್ರವಾಸವನ್ನು ತೀರಾ ಹತ್ತಿರದಿಂದ ನೋಡಿದ್ದೇನೆ. ಪ್ರಸ್ತುತ ಅವರ ಕಾರ್ಯವು ಚೈತನ್ಯದ ಸ್ತರದಲ್ಲಿಯೇ ನಡೆಯುತ್ತಿದೆ. ಸೂಕ್ಷ್ಮ ಕಾರ್ಯದ ಬಗ್ಗೆಯೂ ಅವರು ನನಗೆ ಅನೇಕ ಬಾರಿ, ”ಬಹಳ ಬಾರಿ ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಅವರಿಗೆ ನಿರ್ದಿಷ್ಟವಾಗಿ ಏನು ಬೇಕಾಗಿದೆ, ಎಂದು ನನಗೆ ಮೊದಲೇ ತಿಳಿಯುತ್ತದೆ ಅಥವಾ ಅನೇಕ ಬಾರಿ ಮುಂದೆ ಘಟಿಸುವ ಪ್ರಸಂಗಗಳ ಸೂಚನೆಗಳೂ ಸಿಗುತ್ತವೆ’’, ಎಂದು ಹೇಳುತ್ತಾರೆ. ನಮ್ಮ ನಡುವೆ ಸಂಭಾಷಣೆಯೂ ನಡೆಯುತ್ತದೆ. ಅವರ ಸಂಭಾಷಣೆಯಿಂದ ನನಗೂ ಶಕ್ತಿ ಸಿಗುತ್ತದೆ. ಅವರ ಮಾತುಗಳಿಂದ ಸಮಷ್ಟಿ ಕಾರ್ಯ ಮಾಡುವ ಅನೇಕ ದೃಷ್ಟಿಕೋನಗಳು ಮತ್ತು ಆಯಾಮಗಳನ್ನು ನಾನೂ ಕಲಿಯುತ್ತೇನೆ. ಅವರ ಸಂಚಾರವಾಣಿ ಕರೆ ಬರುವುದು, ಎಂದರೆ ಚೈತನ್ಯದ ಸ್ತರದ ಒಂದು ಶಾಲೆಯೇ ಆಗಿರುತ್ತದೆ.
೫. ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಅವಿರತ ಪ್ರಯತ್ನಗಳಿಂದ ಭೂಮಿಯ ಮೇಲೆ ಶ್ರೀರಾಮರಾಜ್ಯವು ಅವತರಿಸಲಿದೆ’, ಇದರಲ್ಲಿ ಸಂದೇಹವೇ ಇಲ್ಲ !
ಒಂದೇ ಸಮಯದಲ್ಲಿ ಅನೇಕ ಸಾಧಕರ ಸಾಧನೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸುವಾಗ ಅವರಿಗೆ ಆ ಬಗ್ಗೆ ಒತ್ತಡ ಬಂದಿರುವುದನ್ನು ನಾನು ಯಾವತ್ತೂ ನೋಡಿಲ್ಲ, ಇದರಿಂದಲೇ ಅವರ ದೇವತ್ವವು ಗಮನಕ್ಕೆ ಬರುತ್ತದೆ. ಪ್ರಸ್ತುತ ಅವರ ಕಾರ್ಯ ಹಗಲು-ರಾತ್ರಿ ನಡೆದಿದೆ. ‘ಜಗತ್ತಿನ ಬಗ್ಗೆ ಚಿಂತೆ ಮಾಡುತ್ತಾರೆ’, ಈ ವಚನದಂತೆ ಹಗಲು-ರಾತ್ರಿ ಅವರು ಸಾಧಕರು, ಸಮಾಜ ಮತ್ತು ರಾಷ್ಟ್ರಕ್ಕಾಗಿ ಶ್ರಮಿಸುತ್ತಿದ್ದಾರೆ. ‘ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರವರ ಅವಿರತ ಪ್ರಯತ್ನಗಳಿಂದಾಗಿ ಭೂಮಿಯ ಮೇಲೆ ಶ್ರೀರಾಮರಾಜ್ಯವು ಅವತರಿಸಲಿದೆ’, ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ.
೬. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳರ ಕರೆಗೆ ಓಗೊಟ್ಟು ಶ್ರೀವಿಷ್ಣುವು ಸಾಧಕರ ರಕ್ಷಣೆಗಾಗಿ ಧಾವಿಸಿ ಬರುತ್ತಾನೆ, ಇದರಲ್ಲಿ ಯಾವುದೇ ಸಂದೇಹವಿಲ್ಲ.
ಒಬ್ಬ ಭಕ್ತ ಪ್ರಹ್ಲಾದನ ಪ್ರಯತ್ನದ ಫಲವಾಗಿ ಶ್ರೀವಿಷ್ಣುವು ಹೇಗೆ ನರಸಿಂಹನ ಅವತಾರವನ್ನು ತಾಳಬೇಕಾಯಿತೋ, ಹಾಗೆಯೇ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ಕರೆಗೆ ಓಗೊಟ್ಟು ಶ್ರೀವಿಷ್ಣುವು ಸಾಧಕರ ರಕ್ಷಣೆಗಾಗಿ ಬರುವನು, ಇದರಲ್ಲಿ ಯಾವುದೇ ಸಂದೇಹ ಬೇಡ. ಅವರ ಕಾರ್ಯದ ವೇಗ ಮತ್ತು ಅವರ ಕಾರ್ಯ ಮಾಡುವ ಸರ್ವತೋಮುಖತೆಯನ್ನು (ಅಷ್ಟಾವಧಾನತೆಯನ್ನು) ಗುರುತಿಸುವುದು ನಮ್ಮ ಸಾಮರ್ಥ್ಯಕ್ಕೂ ಮೀರಿದೆ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ, ನಾವು ತಮ್ಮ ಚರಣಗಳಲ್ಲಿ ಕೇವಲ ನತಮಸ್ತಕರಾಗಲು ಸಾಧ್ಯ.
‘ಇಂದಿನ ತಮ್ಮ ಹುಟ್ಟುಹಬ್ಬದ ನಿಮಿತ್ತ ತಮ್ಮ ಚೈತನ್ಯದ ವರದಹಸ್ತ ನಮ್ಮೆಲ್ಲ ಅಜ್ಞಾನಿ ಮಕ್ಕಳ ಮೇಲೆ ಅಖಂಡವಾಗಿರಲಿ ಮತ್ತು ತಮ್ಮ ಕೃಪೆಯ ಅಮೃತದ ಸುರಿ ಮಳೆ ನಮ್ಮ ಮೇಲೆ ಸತತವಾಗಿ ಸುರಿಯಲಿ’, ಇದೇ ಆ ಶ್ರೀಮನ್ನಾರಾಯಣನ ಚರಣಗಳಲ್ಲಿ ಪ್ರಾರ್ಥನೆ.’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಶ್ರೀ ರಾಜಮಾತಂಗಿ ಮಹಾಯಜ್ಞ !