ಮುಸ್ಲಿಂ ಲೇಖಕಿ ಬಾನು ಮುಷ್ತಾಕ್ ವಿರುದ್ಧದ ಅರ್ಜಿ ವಜಾ ಪ್ರಕರಣ

ಬೆಂಗಳೂರು – ಮೈಸೂರು ದಸರಾ ಉತ್ಸವದ ಉದ್ಘಾಟನೆಗಾಗಿ ಮುಸ್ಲಿಂ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವುದನ್ನು ವಿರೋಧಿಸಿ ಮಾಜಿ ಭಾಜಪ ಸಂಸದ ಪ್ರತಾಪ್ ಸಿಂಹ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಒಟ್ಟು ಮೂವರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಅರ್ಜಿದಾರರ ಯಾವುದೇ ಕಾನೂನು ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, “ನಾನು ಹೈಕೋರ್ಟ್‌ಗೆ ಟೀಕೆ ಮಾಡುತ್ತಿಲ್ಲ, ಆದರೆ ಇಂದಿರಾ ಗಾಂಧಿಯವರು ತಂದ ‘ಸೆಕ್ಯುಲರ್’ ಪದದ ಆಧಾರದ ಮೇಲೆ ನಮ್ಮ ಅರ್ಜಿಯನ್ನು ವಜಾ ಮಾಡಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವ್ಯವಸ್ಥೆಯ ಬಗ್ಗೆ ಯೋಚಿಸುವಂತೆ ಮಾಡುವ ಸಿಂಹ ಅವರು ಎತ್ತಿರುವ ಅಂಶಗಳು!
೧. ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಧರ್ಮಸ್ಥಳದ ಬಗ್ಗೆ ಅವಿಶ್ವಾಸ ಮೂಡಿಸುವ ವೀಡಿಯೊವನ್ನು ಸಮೀರ್ ಎಂಬ ವ್ಯಕ್ತಿ ಮಾಡಿದ್ದ; ಆದರೆ ಸೆಷನ್ಸ್ ನ್ಯಾಯಾಲಯ ಅವನಿಗೆ ಜಾಮೀನು ನೀಡಿತು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಿದ ಮಹೇಶ್ ತಿಮರೋಡಿ ಕೂಡ ಆರಾಮವಾಗಿ ಓಡಾಡುತ್ತಿದ್ದಾನೆ.
೨. ನನಗೆ ನ್ಯಾಯ ಸಿಗಬಹುದೆಂಬ ಸ್ವಲ್ಪ ಭರವಸೆ ಇತ್ತು, ಆದ್ದರಿಂದ ನಾನು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೆ. ಹೈಕೋರ್ಟ್ ‘ಬಾನು ಮುಷ್ತಾಕ್ ಅವರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ’ ಎಂಬ ಸಣ್ಣ ಕಾರಣಕ್ಕಾಗಿ ನನ್ನ ಅರ್ಜಿಯನ್ನು ವಜಾಗೊಳಿಸಿತು.
೩. ಅಶೋಕ ಚಕ್ರದ ಕೆಳಗೆ ‘ಸತ್ಯಮೇವ ಜಯತೆ’ ಎಂದು ಬರೆಯಲಾಗಿದೆ. ನಾಳೆ ಯಾರಾದರೂ ಆ ‘ಸತ್ಯಮೇವ ಜಯತೆ’ಯನ್ನು ಅವಮಾನ ಮಾಡಿದರೆ ಅದು ಸರಿಯಾಗುತ್ತದೆಯೇ? ‘ಸತ್ಯಂ ಶಿವಂ ಸುಂದರಂ’ ಎಂಬ ಹೇಳಿಕೆಯನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ‘ಸೆಕ್ಯುಲರ್’ ಕಾರಣಕ್ಕಾಗಿ ತೆಗೆದುಹಾಕುತ್ತೀರಾ? ಭಾರತದ ಮೂಲ ಸಂಸ್ಕೃತಿಗೆ ಧಕ್ಕೆ ತರುವ ಹೇಳಿಕೆಗಳು ‘ಸೆಕ್ಯುಲರ್’ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ವ್ಯಾಪ್ತಿಗೆ ಬಂದರೆ, ನಾನು ಏನೂ ಹೇಳಲು ಸಾಧ್ಯವಿಲ್ಲ.
೪. ಇತ್ತೀಚೆಗೆ ಕಾಶ್ಮೀರದ ಹಜರತ್ ಅಲಿ ದರ್ಗಾದಲ್ಲಿ ‘ಅಶೋಕ ಚಕ್ರ’ ಇದೆ ಎಂಬ ಕಾರಣಕ್ಕೆ ಅದನ್ನು ಕಲ್ಲಿನಿಂದ ಒಡೆಯಲಾಯಿತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುತ್ತದೆಯೇ?
೫. ನಾನು ನ್ಯಾಯಾಲಯದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ನನ್ನ ಅರ್ಜಿಯನ್ನು ‘ಸೆಕ್ಯುಲರಿಸಂ’ನ ಚೌಕಟ್ಟಿನಲ್ಲಿ ವಜಾಗೊಳಿಸಲಾಯಿತು, ಅದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆ.
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ