ಚುನಾವಣೆಗಳಲ್ಲಿ ನಿರತವಾಗಿದ್ದ ಆಪ್ ಸರಕಾರ ಹವಾಮಾನ ಇಲಾಖೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪ

ಚಂಡಿಗಡ – ಪಂಜಾಬಿನಲ್ಲಿ ಸದ್ಯ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ರಾಜ್ಯದ ಆಮ್ ಆದ್ಮಿ ಪಕ್ಷದ (ಆಪ್) ಸರಕಾರವೇ ಸಂಪೂರ್ಣ ಹೊಣೆಯಾಗಿದೆ ಎಂದು ಮಾಜಿ ಸಚಿವರು ಆರೋಪಿಸಿದ್ದಾರೆ. ಪ್ರವಾಹದಿಂದ ರಾಜ್ಯದ 23 ಜಿಲ್ಲೆಗಳು ತೀವ್ರವಾಗಿ ಬಾಧಿತವಾಗಿವೆ. ಕಳೆದ 37 ವರ್ಷಗಳಲ್ಲಿ ಇದು ಅತ್ಯಂತ ಗಂಭೀರ ಪ್ರವಾಹ ಪರಿಸ್ಥಿತಿ ಎಂದು ಹೇಳಲಾಗಿದೆ. ಈವರೆಗೆ 37 ಜನರು ಮೃತಪಟ್ಟಿದ್ದು, 3 ಲಕ್ಷ 50 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. 1,650ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡಿದ್ದು, ಸುಮಾರು 1 ಲಕ್ಷ 75 ಸಾವಿರ ಹೆಕ್ಟೇರ್‌ಗಳಷ್ಟು ಕೃಷಿ ಭೂಮಿ ನಾಶವಾಗಿದೆ. ರಾಜ್ಯ ಸರಕಾರ ಮುಂಜಾಗರೂಕತೆಯ ಕ್ರಮಗಳನ್ನು ಕೈಕೊಳ್ಳುವಲ್ಲಿ ವಿಫಲವಾಗಿದೆ ಮತ್ತು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದ ಕಾರಣ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಿದೆ ಎಂದು ಆರೋಪಿಸಲಾಗಿದೆ.
1. ಮಾಜಿ ನೀರಾವರಿ ಸಚಿವ ಮತ್ತು ಶಿರೋಮಣಿ ಅಕಾಲಿ ದಳದ ನಾಯಕ ಜನಮೇಜಾ ಸಿಂಗ್ ಸೇಖೋನ್ ಹಾಗೂ ಕಾಂಗ್ರೆಸ್ಸಿನ ಮಾಜಿ ಜಲಸಂಪನ್ಮೂಲ ಸಚಿವ ಸುಖಬಿಂದರ್ ಸಿಂಗ್ ಸರಕಾರಿಯಾ ಅವರು, ಮುಖ್ಯಮಂತ್ರಿ ಭಗವಂತ್ ಮಾನ್ ಸರಕಾರವು ಪ್ರವಾಹ ನಿಯಂತ್ರಣಕ್ಕೆ ಅಗತ್ಯವಿರುವ ಸಭೆಗಳನ್ನು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ನಡೆಸಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ. ಏಕೆಂದರೆ ಆ ಸಮಯದಲ್ಲಿ ‘ಆಪ್’ ಪಕ್ಷವು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ನಿರತವಾಗಿತ್ತು. ಆ ತಿಂಗಳಿನಲ್ಲಿಯೇ ಹವಾಮಾನ ಇಲಾಖೆಯು ರಾಜ್ಯದಲ್ಲಿ ಮುಂಬರುವ ತಿಂಗಳುಗಳಲ್ಲಿ ಭಾರೀ ಮಳೆ ಬೀಳುವ ಎಚ್ಚರಿಕೆ ನೀಡಿತ್ತು, ಆದರೂ ಆಪ್ ಸರಕಾರ ಅದನ್ನು ನಿರ್ಲಕ್ಷಿಸಿತು.
2. ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, ಪ್ರವಾಹ ನಿಯಂತ್ರಣದ ಕುರಿತು ಸರಕಾರ ನಡೆಸಿದ ಮೊದಲ ಸಭೆ ಜೂನ್ 5 ರಂದು, ಅಂದರೆ ಮುಂಗಾರು ಆರಂಭವಾಗುವುದಕ್ಕೆ ಕೇವಲ 17 ದಿನಗಳ ಮೊದಲು ನಡೆದಿತ್ತು. ಇದರಿಂದಾಗಿ ಸರಕಾರಕ್ಕೆ ಪ್ರತ್ಯಕ್ಷ ಕಾರ್ಯನಿರ್ವಹಿಸಲು ಸಮಯವೇ ಸಿಗಲಿಲ್ಲ. ಸರಕಾರವು ಒಡ್ಡುಗಳ ದುರಸ್ತಿ ಮತ್ತು ಕಾಲುವೆಗಳ ಸ್ವಚ್ಛತೆಗಾಗಿ 117 ಕೋಟಿ ರೂಪಾಯಿಗಳ ನಿಧಿಯನ್ನು ಅನುಮೋದಿಸಿತು. ಆದರೆ, ಕೆಲಸ ಪೂರ್ಣಗೊಳಿಸಲು ನಿಗದಿಪಡಿಸಿದ ಕಾಲಮಿತಿ ಅಸಮರ್ಪಕವಾಗಿತ್ತು ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರವು ಇಂಜಿನಿಯರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಕೂಡ ಮಾಜಿ ಇಂಜಿನಿಯರ್‌ಗಳು ಟೀಕಿಸಿದ್ದಾರೆ.
ಪಂಜಾಬಿಗೆ ವಿಶೇಷ ಸಹಾಯವಾಗಿ 60 ಸಾವಿರ ಕೋಟಿ ರೂಪಾಯಿ ನೀಡಿ! – ಮುಖ್ಯಮಂತ್ರಿ ಭಗವಂತ್ ಮಾನ್
ಈಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೇಂದ್ರ ಸರಕಾರದಿಂದ 60 ಸಾವಿರ ಕೋಟಿ ರೂಪಾಯಿಗಳ ವಿಶೇಷ ನೆರವು ಮತ್ತು ಬೆಳೆ ಹಾನಿಗಾಗಿ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರವಾಗಿ ರೈತರಿಗೆ ನೆರವು ನೀಡುವಂತೆ ಕೋರಿದ್ದಾರೆ. ಆದಾಗ್ಯೂ, ಮಾಜಿ ಸಚಿವರು ಮತ್ತು ವಿರೋಧ ಪಕ್ಷಗಳು, ಸರಕಾರವು ಸಮಯಕ್ಕೆ ಸರಿಯಾಗಿ ಸಿದ್ಧತೆಗಳನ್ನು ಮಾಡಿದ್ದರೆ ಪರಿಸ್ಥಿತಿ ಇಷ್ಟು ಗಂಭೀರವಾಗುತ್ತಿರಲಿಲ್ಲ ಎಂದು ದೃಢವಾಗಿ ಆರೋಪಿಸಿವೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ