ಆಗ್ರಾ (ಉತ್ತರಪ್ರದೇಶ) ದಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳ ಮತಾಂತರದ ಷಡ್ಯಂತ್ರ ಬಹಿರಂಗ! Hindu Conversion Racket Busted

  • 8 ಜನರ ಬಂಧನ

  • ರೋಗ ಮತ್ತು ಬಡತನ ನಿವಾರಣೆಯ ಆಮಿಷ

  • ಹಿಂದೂಗಳ ಕೈ ಮೇಲಿರುವ ಪವಿತ್ರ ದಾರ ಮತ್ತು ತಿಲಕವನ್ನು ಅಳಿಸಿದರು

  • ಮನೆಯಲ್ಲಿರುವ ದೇವರ ಮೂರ್ತಿಗಳನ್ನು ತೆಗೆಯಲು ಒತ್ತಾಯ

ಆಗ್ರಾ (ಉತ್ತರ ಪ್ರದೇಶ) – ಇಲ್ಲಿನ ಶಾಹಗಂಜ್ ಪ್ರದೇಶದಲ್ಲಿ ಪ್ರಾರ್ಥನಾ ಸಭೆಯ ಹೆಸರಿನಲ್ಲಿ ಹಿಂದೂಗಳ ಮತಾಂತರದ ಷಡ್ಯಂತ್ರ ಬಯಲಾಗಿದೆ. ಈ ಪ್ರಕರಣದಲ್ಲಿ ಮತಾಂತರ ತಂಡದ ಮುಖ್ಯ ಆರೋಪಿ ರಾಜಕುಮಾರ್ ಲಾಲ್ವಾನಿ ಮತ್ತು 3 ಮಹಿಳೆಯರು ಸೇರಿದಂತೆ 8 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೆಲವು ನೆಪಗಳ ಮೂಲಕ ಜನರನ್ನು ಪ್ರಾರ್ಥನಾ ಸಭೆಗೆ ಕರೆಸುತ್ತಿದ್ದರು. ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೆ ಅವರ ಕಾಯಿಲೆಗಳು ಮತ್ತು ಬಡತನ ದೂರವಾಗುತ್ತದೆ ಎಂದು ಆಮಿಷ ಒಡ್ಡುತ್ತಿದ್ದರು. ಅವರು ಹಿಂದೂಗಳ ಕೈಯಲ್ಲಿದ್ದ ಪವಿತ್ರ ದಾರವನ್ನು ಕತ್ತರಿಸಿ, ಹಣೆಯ ಮೇಲಿನ ತಿಲಕವನ್ನು ಒರೆಸುತ್ತಿದ್ದರು. ಹಾಗೆಯೇ ಮನೆಯಲ್ಲಿರುವ ದೇವರ ಮೂರ್ತಿಗಳನ್ನು ತೆಗೆಯುವಂತೆ ಒತ್ತಾಯಿಸುತ್ತಿದ್ದರು.

ಪೊಲೀಸ್ ಉಪ ಆಯುಕ್ತ ಸೋನಂ ಕುಮಾರ್ ಅವರು, ಈ ಪ್ರಕರಣದಲ್ಲಿ ಕೇದಾರನಗರದ ನಿವಾಸಿಯಾಗಿರುವ ಘನಶ್ಯಾಮ್ ಹೇಮ್ಲಾನಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ. ರಾಜಕುಮಾರ್ ಎಂಬ ವ್ಯಕ್ತಿ ತಮ್ಮನ್ನು 2-3 ಬಾರಿ ತಮ್ಮ ಮನೆಗೆ ಕರೆದಿದ್ದರು ಎಂದು ಹೇಮ್ಲಾನಿ ತಿಳಿಸಿದ್ದಾರೆ. ಈ ವೇಳೆ, ರಾಜಕುಮಾರ್ ಹೇಮ್ಲಾನಿ ಅವರ ಕೈಯಲ್ಲಿದ್ದ ಪವಿತ್ರ ದಾರವನ್ನು ತುಂಡು ಮಾಡಿ ಹಣೆಯ ಮೇಲಿನ ತಿಲಕವನ್ನು ಅಳಿಸಿದ್ದಾರೆ. ರಾಜಕುಮಾರ್ ಅವರು ತಮ್ಮ ಮನೆಯಿಂದ ದೇವರ ಮೂರ್ತಿಗಳನ್ನು ತೆಗೆದುಹಾಕುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಹೇಮ್ಲಾನಿ ಪೊಲೀಸರಿಗೆ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ಪೊಲೀಸರು ರಾಜಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಪೊಲೀಸರು ಎಲ್ಲಾ ಆರೋಪಿಗಳಿಂದ 15 ಬೈಬಲ್, 3 ಕ್ರೈಸ್ತ ಹಾಡುಗಳ ಪುಸ್ತಕಗಳು, 4 ಡೈರಿಗಳು, 8 ರಿಜಿಸ್ಟರ್‌ಗಳು, 6 ಮೊಬೈಲ್ ಫೋನ್‌ಗಳು, 2 ಆಧುನಿಕ ಕಾರುಗಳು ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ 4 ವರ್ಷಗಳ ಹಿಂದೆಯೇ ಮತಾಂತರವಾಗಿದ್ದನು!

ಬಂಧಿತ ಆರೋಪಿ ರಾಜಕುಮಾರ್ ಲಾಲ್ವಾನಿ 4 ವರ್ಷಗಳ ಹಿಂದೆ ಮಹಾರಾಷ್ಟ್ರದ ಉಲ್ಹಾಸನಗರಕ್ಕೆ ಹೋಗಿ ಅಲ್ಲಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದನು. ಮನೆಗೆ ಮರಳಿದ ನಂತರ, ಅವನು ಜನರ ಮತಾಂತರ ಮಾಡಲು ಪ್ರಾರಂಭಿಸಿದನು. ಜನರ ನಂಬಿಕೆಯನ್ನು ಗಳಿಸಿ, ರೋಗಗಳನ್ನು ಗುಣಪಡಿಸುವ ನೆಪದಲ್ಲಿ ಯೇಸುವನ್ನು ನೆನಪಿಸಿಕೊಳ್ಳುವಂತೆ ಹೇಳುತ್ತಿದ್ದನು. ನಂತರ ಬೈಬಲ್ ಓದಲು ಹೇಳುತ್ತಿದ್ದನು. ಇದರ ಹೆಸರಿನಲ್ಲಿ ಹಣವನ್ನು ತೆಗೆದುಕೊಳ್ಳುತ್ತಿದ್ದನು. ಭಾನುವಾರದ ಪ್ರಾರ್ಥನಾ ಸಭೆಗೆ ಬರುವ ಹಿಂದೂಗಳಿಗೆ, ‘ಹಿಂದೂ ಧರ್ಮವನ್ನು ನಂಬಬೇಡಿ’ ಎಂದು ಹೇಳುತ್ತಿದ್ದನು. ಹಿಂದೂಗಳಿಗೆ ಊಟದಲ್ಲಿ ಮಾಂಸವನ್ನು ಸಹ ಬಡಿಸುತ್ತಿದ್ದನು. ‘ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೆ ಇಡೀ ಕುಟುಂಬದ ರೋಗಗಳು ಮತ್ತು ದುಃಖಗಳು ಗುಣವಾಗುತ್ತವೆ’ ಎಂದು ಅವನು ಹೇಳಿಕೊಳ್ಳುತ್ತಿದ್ದನು. ತನ್ನ ಸಹಚರ ಮಹಿಳೆಯರ ಸಹಾಯದಿಂದ, ಅವನು ಭೂತೋಚ್ಚಾಟನೆಯ ನಾಟಕವನ್ನು ಆಡುತ್ತಿದ್ದನು. ಅನೇಕ ಬಾರಿ ರೋಗಗಳನ್ನು ಗುಣಪಡಿಸಲು ಜನರಿಂದ 5 ರಿಂದ 10 ಸಾವಿರ ರೂಪಾಯಿಗಳನ್ನು ಪಡೆದಿದ್ದನು. ಮಕ್ಕಳ ಉತ್ತಮ ಶಿಕ್ಷಣ ಮತ್ತು ಕ್ರೈಸ್ತ ಮಿಷನರಿಗಳು ನಡೆಸುವ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಬಗ್ಗೆಯೂ ಮಾತನಾಡುತ್ತಿದ್ದನು. ಇದರಿಂದ ಜನರು ಮೋಸ ಹೋಗುತ್ತಿದ್ದರು. ಅವನ ಸಂಪರ್ಕದಲ್ಲಿ ಇನ್ನೂ ಅನೇಕ ಜನರಿದ್ದಾರೆ. ಪೊಲೀಸರು ಅವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸಂಪಾದಕೀಯ ನಿಲುವು

  • ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥರ ಹಿಂದುತ್ವನಿಷ್ಠ ಸರಕಾರವಿದ್ದರೂ, ಮತಾಂಧ  ಕ್ರೈಸ್ತರಿಗೆ ಇಂತಹ ಧೈರ್ಯ ಹೇಗೆ ಬರುತ್ತದೆ? ಸರಕಾರ ಕೂಡಲೇ ಇಂತಹವರ ಮನೆಗಳ ಮೇಲೆ ಬುಲ್ಡೋಜರ್ ಚಲಾಯಿಸಬೇಕು, ಆಗ ಮಾತ್ರ ಇವರು ಸರಿಯಾದ ದಾರಿಗೆ ಬರುತ್ತಾರೆ!
  • ಹಿಂದೂಗಳು ಧರ್ಮಶಿಕ್ಷಣದ ಕೊರತೆಯಿಂದಾಗಿ ಮತಾಂತರವಾಗುತ್ತಾರೆ! ಹಾಗಾಗಿ ಹಿಂದೂಗಳ ಧಾರ್ಮಿಕ ಸಂಘಟನೆಗಳು ಎಲ್ಲಾ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡಲು ಮುಂದಾಗಬೇಕು!