ಕಳೆದ ಕೆಲವು ದಿನಗಳಿಂದ, ಸನಾತನ ಸಂಸ್ಥೆಯಿಂದ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿ, ಉದಾ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಮತ್ತು ಗುರುಪೂರ್ಣಿಮೆಯಂತಹ ಕಾರ್ಯಕ್ರಮ ಗಳಲ್ಲಿ, ಉಪಸ್ಥಿತರಿಂದ ಶ್ರೀರಾಮನ ಸಾಮೂಹಿಕ ನಾಮಜಪವನ್ನು ಮಾಡಿಸಿಕೊಳ್ಳಲಾಗುತ್ತದೆ. ಇದರ ಹಿಂದಿನ ಕಾರ್ಯಕಾರಣಭಾವವನ್ನು ಮುಂದೆ ನೀಡಲಾಗಿದೆ.
೧. ಶ್ರೀರಾಮನ ಸಾಮೂಹಿಕ ನಾಮಜಪ ಮಾಡುವುದರ ಹಿಂದಿನ ಕಾರ್ಯಕಾರಣಭಾವವನ್ನು ಶ್ರೀರಾಮನ ಗುಣಗಳ ವರ್ಣನೆಯನ್ನು ಮಾಡುವಾಗ ಹೇಳಲಾಗುತ್ತದೆ.

೧ ಅ. ಧರ್ಮದ ಸಾಕಾರ ರೂಪವೇ ಶ್ರೀರಾಮ
‘ರಾಮೋ ವಿಗ್ರಹವಾನ್ ಧರ್ಮಸ್ಸಾಧುಸ್ಸತ್ಯಪರಾಕ್ರಮಃ |
ರಾಜಾ ಸರ್ವಸ್ಯ ಲೋಕಸ್ಯ ದೇವಾನಾಂ ಮಘವಾನಿವ || – ವಾಲ್ಮೀಕಿ ರಾಮಾಯಣ, ಅರಣ್ಯಕಾಂಡ, ಅಧ್ಯಾಯ ೩೭.೧೩
ಅರ್ಥ : ಭಗವಾನ ಶ್ರೀರಾಮನು ಧರ್ಮದ ಸಾಕಾರ ರೂಪವಾಗಿದ್ದಾನೆ ಅವನು ಸಾಧುಗಳಂತೆ ಸತ್ಯ ಮತ್ತು ಪರಾಕ್ರಮಿಯಾಗಿದ್ದಾನೆ. ಹೇಗೆ ಇಂದ್ರನು ದೇವತೆಗಳ ರಾಜನಾಗಿದ್ದಾನೆಯೋ, ಹಾಗೆ ಶ್ರೀರಾಮನು ಎಲ್ಲರ ರಾಜನಾಗಿದ್ದಾನೆ.
೧ ಆ. ದಾಶರಥಿ ರಾಮ : ಲೌಕಿಕ ಅರ್ಥದಲ್ಲಿ ‘ದಶರಥನ ಪುತ್ರ ಶ್ರೀರಾಮ’ ಎಂದಾಗಿದೆ ಮತ್ತು ಆಧ್ಯಾತ್ಮಿಕ ಅರ್ಥ ‘ಹತ್ತು ಇಂದ್ರಿಯಗಳ (೫ ಕರ್ಮೇಂದ್ರಿಯಗಳು ಮತ್ತು ೫ ಜ್ಞಾನೇಂದ್ರಿಯಗಳ (ಟಿಪ್ಪಣಿ)) ಒಡೆಯ ಶ್ರೀರಾಮ’ ಆಗಿದ್ದಾನೆ ಎಂದಾಗಿದೆ.
ಟಿಪ್ಪಣಿ – ೫ ಕರ್ಮೇಂದ್ರಿಯಗಳು : ವಾಣಿ (ಮಾತು), ಕೈ, ಕಾಲು, ಗುದದ್ವಾರ ಮತ್ತು ಜನನೇಂದ್ರಿಯ
೫ ಜ್ಞಾನೇಂದ್ರಿಯಗಳು : ಮೂಗು, ನಾಲಿಗೆ, ಕಣ್ಣು, ಚರ್ಮ ಮತ್ತು ಕಿವಿ
೧ ಇ. ಶ್ರೀರಾಮನ ಸಾಮೂಹಿಕ ನಾಮಜಪದಿಂದ ಧರ್ಮಾಚರಣೆ ಮಾಡಲು ಬೇಕಾದ ಶಕ್ತಿ ಸಮಾಜಕ್ಕೆ ಸಿಗುತ್ತದೆ : ಆಧ್ಯಾತ್ಮಿಕ ಸಿದ್ಧಾಂತದ ಪ್ರಕಾರ, ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ.’ ಶ್ರೀರಾಮನು ಧರ್ಮದ ಸಾಕಾರ ರೂಪವಾಗಿದ್ದು, ಅವನು ‘ದಾಶರಥಿ ರಾಮ’ ಅಂದರೆ ೫ ಕರ್ಮೇಂದ್ರಿಯಗಳು ಮತ್ತು ೫ ಜ್ಞಾನೇಂದ್ರಿಯಗಳ ಒಡೆಯನಾಗಿದ್ದಾನೆ. ಆದ್ದರಿಂದ, ಶ್ರೀರಾಮನ ನಾಮಜಪವನ್ನು ಸಾಮೂಹಿಕವಾಗಿ ಮಾಡಿದರೆ, ವ್ಯಕ್ತಿಗೆ ಧರ್ಮಾಚರಣೆಗೆ ಆವಶ್ಯಕ ಕರ್ಮಶಕ್ತಿ ಮತ್ತು ಜ್ಞಾನಶಕ್ತಿ ದೊರೆಯುತ್ತದೆ. ಈ ಶಕ್ತಿಯು ವ್ಯಕ್ತಿಯ ಮನಸ್ಸು, ಕರ್ಮೇಂದ್ರಿಯಗಳು ಮತ್ತು ಜ್ಞಾನೇಂದ್ರಿಯಗಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ವ್ಯಕ್ತಿಯ ಸಾತ್ತ್ವಿಕತೆ ಹೆಚ್ಚಾಗಿ, ಧರ್ಮಾಚರಣೆಯನ್ನು ಮಾಡುವ ಅವನ ಒಲವು ಹೆಚ್ಚಾಗುತ್ತದೆ. ವ್ಯಕ್ತಿಯು ಧರ್ಮಾಚರಣಿಯಾದ ನಂತರ ಮುಂದೆ ಧರ್ಮಾಧಾರಿತ ರಾಷ್ಟ್ರ, ಅಂದರೆ ಸನಾತನ ರಾಷ್ಟ್ರವು (ರಾಮರಾಜ್ಯ) ಸಾಕಾರಗೊಳ್ಳಲು ಆರಂಭವಾಗುತ್ತದೆ. ಸಂಕ್ಷಿಪ್ತವಾಗಿ, ಶ್ರೀರಾಮನ ಸಾಮೂಹಿಕ ನಾಮಜಪದಿಂದ ವ್ಯಕ್ತಿ ಮತ್ತು ಸಮಾಜ ಧರ್ಮಾಚರಣಿಯಾಗಿ ಸನಾತನ ರಾಷ್ಟ್ರದ ಸ್ಥಾಪನೆಯ ಕಾರ್ಯಕ್ಕೆ ಬಲ ಸಿಗುತ್ತದೆ.
೧ ಈ. ಶ್ರೀರಾಮನು ದೋಷನಿವಾರಣೆ ಮತ್ತು ಗುಣಗಳ ಸಾಕಾರ ರೂಪ ವಾಗಿರುವುದರಿಂದ ಸನಾತನ ರಾಷ್ಟ್ರದ ಸ್ಥಾಪನೆಗೆ ಅವನ ತತ್ತ್ವವು ಆವಶ್ಯಕವಾಗಿದೆ : ಶ್ರೀರಾಮನು ಆದರ್ಶ ಪುತ್ರ, ಆದರ್ಶ ಸಹೋದರ, ಆದರ್ಶ ಪತಿ, ಆದರ್ಶ ತಂದೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಆದರ್ಶ, ಅಂದರೆ ಗುಣಗಳ ಸಮೂಹವಾಗಿದ್ದನು. ಅದರೊಂದಿಗೆ ಅವನು ತನ್ನಿಂದ ಯಾವುದೇ ತಪ್ಪು ಆಗದಂತೆ ಜಾಗರೂಕನಾಗಿರುತ್ತಿದ್ದನು ಮತ್ತು ಇತರರ ದೋಷಗಳನ್ನು ಸಹ ನಿವಾರಣೆ ಮಾಡುತ್ತಿದ್ದನು. ರಾವಣನನ್ನು ವಧಿಸಿದನೆಂದು ಅವನು ಪ್ರಾಯಶ್ಚಿತ್ತ ತೆಗೆದುಕೊಂಡನು. ಅದೇ ರೀತಿ, ಇಂದ್ರನ ಮಗ ಜಯಂತನು ತನ್ನ ಅಹಂನಿಂದ ಶ್ರೀರಾಮನನ್ನು ಪರೀಕ್ಷಿಸಲು ಕಾಗೆಯ ರೂಪದಲ್ಲಿ ಬಂದು ಸೀತಾಮಾತೆಯ ಕಾಲಿಗೆ ಕೊಕ್ಕಿನಿಂದ ಗಾಯ ಮಾಡಿದನು. ಜಯಂತನು ಕ್ಷಮೆ ಕೇಳಿದರೂ, ಶ್ರೀರಾಮನು ಶಿಕ್ಷೆಯೆಂದು ಅವನ ಒಂದು ಕಣ್ಣನ್ನು ಕಿತ್ತುಕೊಂಡನು. ಅದರಿಂದ ಅವನ ಅಹಂ ಕಡಿಮೆಯಾಗಲು ಸಹಾಯವಾಯಿತು.
ವರ್ತಮಾನ ಕಾಲದಲ್ಲಿ ಜನಿಸಿದ ಶೇ. ೮೦ ಕ್ಕಿಂತ ಹೆಚ್ಚು ಜೀವಗಳು ಹಿಂದಿನ ಮೂರು ಯುಗಗಳಲ್ಲಿ (ಸತ್ಯ, ತ್ರೇತಾ ಮತ್ತು ದ್ವಾಪರ ಯುಗಗಳಲ್ಲಿ) ಸಾಧನೆಯನ್ನು ಮಾಡದ ಕಾರಣ, ಅವರಲ್ಲಿ ಹುಟ್ಟಿನಿಂದಲೇ ಸ್ವಭಾವದೋಷಗಳು ಹೆಚ್ಚಿರುತ್ತವೆ. ಇದರಿಂದ ಅವರಿಗೆ ಸಾಧನೆ ಮಾಡುವುದು ದೂರದ ಮಾತು; ಆದರೆ ಧರ್ಮಾಚರಣೆ ಮಾಡುವುದೂ ಸಾಧ್ಯವಾಗುವುದಿಲ್ಲ. ಅವರು ಈ ಸ್ವಭಾವದೋಷಗಳ ವಶವಾಗಿ ಜೀವನವನ್ನು ನಡೆಸುತ್ತಿರುತ್ತಾರೆ. ರಾಷ್ಟ್ರದ ಒಂದು ದೊಡ್ಡ ಸಮೂಹವು ಸ್ವಭಾವದೋಷಗಳ ವಶವಾಗಿರುವುದರಿಂದ, ರಾಷ್ಟ್ರದ ವ್ಯವಸ್ಥೆಯೂ ಧರ್ಮಯುಕ್ತ ವಾಗಿರದೇ, ದೋಷಯುಕ್ತವಾಗಿದೆ. ಇಂತಹ ಜೀವಗಳ ಉದ್ಧಾರಕ್ಕಾಗಿ ಶ್ರೀರಾಮತತ್ತ್ವವು ಉಪಯುಕ್ತವಾಗಿದೆ. ಶ್ರೀರಾಮನ ಉಪಾಸನೆಯಿಂದ ಇಂತಹ ಜೀವಗಳ ಮನಸ್ಸಿಗೆ ತಪ್ಪು ಕೃತಿಯ ಅರಿವಾಗುತ್ತದೆ ಮತ್ತು ತಪ್ಪು ಕೃತಿ ಮಾಡಿದಾಗ ಪ್ರಾಯಶ್ಚಿತ್ತ ತೆಗೆದುಕೊಂಡು ತಮ್ಮಲ್ಲಿ ಗುಣಗಳನ್ನು ಬೆಳೆಸಿಕೊಳ್ಳುವ ತಳಮಳ ಹೆಚ್ಚಾಗಲು ಸಹಾಯವಾಗುತ್ತದೆ. ಆದ್ದರಿಂದ, ವರ್ತಮಾನ ಕಲಿಯುಗದಲ್ಲಿ ಸನಾತನ ರಾಷ್ಟ್ರದ (ರಾಮರಾಜ್ಯದ) ಸ್ಥಾಪನೆಗಾಗಿ ಮತ್ತು ಸ್ಥಾಪನೆಯ ನಂತರವೂ ಶ್ರೀರಾಮನ ಉಪಾಸನೆ ಮಾಡುವುದು ಆವಶ್ಯಕವಾಗಿದೆ.
೨. ಶ್ರೀರಾಮನ ಸಾಮೂಹಿಕ ನಾಮಜಪದಿಂದ ವ್ಯಷ್ಟಿ ಮತ್ತು ಸಮಷ್ಟಿ ಸ್ತರದಲ್ಲಾಗುವ ಪರಿಣಾಮಗಳು

೨ ಅ. ಶ್ರೀರಾಮನ ಜಪದಿಂದ ವ್ಯಷ್ಟಿ ಸ್ತರದಲ್ಲಾಗುವ ಪರಿಣಾಮಗಳು
೧. ವ್ಯಕ್ತಿಯ ಮನಸ್ಸು ಮತ್ತು ಬುದ್ಧಿಯ ಮೇಲಿನ ತೊಂದರೆದಾಯಕ
ಶಕ್ತಿಯ ಆವರಣ ನಾಶವಾಗುತ್ತದೆ. ಆದ್ದರಿಂದ ಅವನಿಗೆ ವಿಷಯ ಸುಲಭವಾಗಿ ಅರ್ಥವಾಗುತ್ತದೆ ಮತ್ತು ಅವನು ಪರಿಸ್ಥಿತಿಯನ್ನು ಸುಲಭವಾಗಿ ಸ್ವೀಕರಿಸುತ್ತಾನೆ.
೨. ವ್ಯಕ್ತಿಯ ಮನಸ್ಸು ಶಾಂತವಾಗಲು ಸಹಾಯವಾಗುತ್ತದೆ. ಅದರಿಂದ ಅವನಿಗೆ ಚೈತನ್ಯ ಗ್ರಹಣವಾಗಿ, ಅವನ ಮನಸ್ಸಿನ ಮೇಲಿನ ಗುಣಗಳ ಸಂಸ್ಕಾರಗಳು ಹೆಚ್ಚಾಗಲು ಸಹಾಯವಾಗು ತ್ತದೆ. ಅಲ್ಲದೆ, ಅವನು ದೋಷಗಳ ವಶವಾಗದೆ ಅವುಗಳನ್ನು ಜಯಿಸಲು ಸಾಧ್ಯವಾಗುತ್ತದೆ.
೩. ವ್ಯಕ್ತಿಯ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಶುದ್ದಿಯಾಗಿ, ಅವನಿಗೆ ಶ್ರೀರಾಮ ತತ್ತ್ವಕ್ಕೆ ಸಂಬಂಧಿಸಿದ ಆಧ್ಯಾತ್ಮಿಕ ಶಕ್ತಿ ಸುಲಭವಾಗಿ ಗ್ರಹಣವಾಗಿ ಧರ್ಮಾಚರಣೆಗಾಗಿ ಬಲ, ಶಕ್ತಿ ಮತ್ತು ಭಕ್ತಿ ಪ್ರಾಪ್ತವಾಗುತ್ತದೆ.
೨ ಆ. ಶ್ರೀರಾಮನ ಜಪದಿಂದ ಸಮಷ್ಟಿ ಸ್ತರದಲ್ಲಾಗುವ ಪರಿಣಾಮಗಳು
೧. ವಾಯುಮಂಡಲದಲ್ಲಿನ ರಜ-ತಮ ಗುಣಗಳು ಕಡಿಮೆಯಾಗಿ, ಸಾತ್ತ್ವಿಕತೆಯ ಮತ್ತು ಶ್ರೀರಾಮತತ್ತ್ವದ ರಕ್ಷಾಕವಚ ವಾಯು ಮಂಡಲದಲ್ಲಿ ಸಿದ್ಧವಾಗುತ್ತದೆ. ಅದರಿಂದ ಕೆಟ್ಟ ಶಕ್ತಿಗಳಿಂದ ಸಮಷ್ಟಿಯ ಮೇಲಿನ ದಾಳಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತವೆ.
೨. ಸಾಮೂಹಿಕ ನಾಮಜಪದಿಂದ ಪ್ರಕ್ಷೇಪಿತವಾಗುವ ಶ್ರೀರಾಮತತ್ತ್ವದಿಂದ ವಾಯುಮಂಡಲದಲ್ಲಿ ಸನಾತನ ರಾಷ್ಟ್ರದ (ರಾಮರಾಜ್ಯದ) ಉತ್ಪತ್ತಿಗೆ ಸಂಬಂಧಿಸಿದ ಶಕ್ತಿಬೀಜದ ಸ್ಥಾಪನೆಯಾಗುತ್ತದೆ.
೩. ಸಾಮೂಹಿಕ ನಾಮಜಪದಿಂದ ಪ್ರಕ್ಷೇಪಿಸುವ ಸೂಕ್ಷ್ಮ ನಾದದಿಂದ ಕೆಟ್ಟ ಶಕ್ತಿಗಳು ನಾಶವಾಗುತ್ತವೆ ಮತ್ತು ಸೂಕ್ಷ್ಮಲೋಕಗಳಲ್ಲಿನ ಜೀವಗಳಿಗೆ ಸನಾತನ ರಾಷ್ಟ್ರದ (ರಾಮರಾಜ್ಯದ) ಸ್ಥಾಪನೆಯ ಸಮಯವು ಹತ್ತಿರವಾಗುತ್ತಿರುವುದರ ಅರಿವಾಗಿ, ಅವರು ಭೂ ಲೋಕದಲ್ಲಿ (ಭೂಮಿಯ ಮೇಲೆ) ಜಸಿದ್ಧತೆ ಮಾಡಿಕೊಳ್ಳುತ್ತಾರೆ.
– ಶ್ರೀ. ನಿಷಾದ ದೇಶಮುಖ ((ಸೂಕ್ಷ್ಮದಿಂದ ದೊರಕಿದ ಜ್ಞಾನ)ಆಧ್ಯಾತ್ಮಿಕ ಮಟ್ಟ ಶೇ. ೬೩), ಫೋಂಡಾ, ಗೋವಾ (೧೭.೬.೨೦೨೫)
|
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !