ಯಮುನೋತ್ರಿ ಧಾಮದ ಯಾತ್ರೆ ಸುರಕ್ಷಿತವಾಗಿ ಪುನರಾರಂಭವಾಗುವುದು ಸದ್ಯಕ್ಕೆ ಅನುಮಾನ

ಡೆಹ್ರಾಡೂನ್ (ಉತ್ತರಾಖಂಡ) – ಉತ್ತರಕಾಶಿ ಜಿಲ್ಲೆಯ ಯಮುನೋತ್ರಿ ಹೆದ್ದಾರಿಯಲ್ಲಿ 6 ಹೊಸ ಪ್ರದೇಶಗಳನ್ನು ‘ಭೂಕುಸಿತ ಸಂಭವಿಸುವ ಪ್ರದೇಶ’ಗಳೆಂದು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಜಂಗಲ್‌ಚಟ್ಟಿ ಮತ್ತು ನಾರದಚಟ್ಟಿ ನಡುವಿನ ರಸ್ತೆ ಕಳೆದ 8 ದಿನಗಳಿಂದ ಮುಚ್ಚಿದೆ. ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಸಿಯಾನಚಟ್ಟಿ ಸೇತುವೆಗೂ ಅಪಾಯ ಎದುರಾಗಿದೆ.
ಮಳೆಗಾಲದಲ್ಲಿ ಕುತ್ನೌರ್‌ನಿಂದ ಜಾನಕಿಚಟ್ಟಿ ನಡುವಿನ 12 ಸ್ಥಳಗಳಲ್ಲಿ ರಸ್ತೆ ಹಾಳಾಗಿದ್ದು ಹನುಮಾನ್‌ಚಟ್ಟಿಯಿಂದ ಫೂಲ್‌ಚಟ್ಟಿ ಮಾರ್ಗದ ಹಲವು ಸ್ಥಳಗಳಲ್ಲಿ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿವೆ. 25 ಕಿಮೀ ವ್ಯಾಪ್ತಿಯಲ್ಲಿ, 200 ರಿಂದ 300 ಮೀಟರ್ ಎತ್ತರದ ಬಂಡೆಗಳಿಂದ ಕಲ್ಲುಗಳು ಬೀಳುವ ಅಪಾಯವಿದೆ.
ಈ ಹಿನ್ನೆಲೆಯಲ್ಲಿ, ಯಮುನೋತ್ರಿ ಧಾಮದ ಯಾತ್ರೆ ಸುರಕ್ಷಿತವಾಗಿ ಪುನರಾರಂಭವಾಗುತ್ತದೆಯೇ? ಎಂಬ ಬಗ್ಗೆ ಅನಿಶ್ಚಿತತೆ ನಿರ್ಮಾಣವಾಗಿದೆ. ಸ್ಥಳೀಯ ಆಡಳಿತ ಮತ್ತು ಹೆದ್ದಾರಿ ಇಲಾಖೆ ರಸ್ತೆಗಳನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ; ಆದರೆ ನಿರಂತರ ಮಳೆಯಿಂದಾಗಿ ತೊಂದರೆಗಳು ಉಂಟಾಗುತ್ತಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!