‘ಭಾರತದಲ್ಲಿನ ಬ್ರಾಹ್ಮಣರು ರಷ್ಯಾದ ತೈಲದಿಂದ ಲಾಭ ಪಡೆಯುತ್ತಿದ್ದಾರೆ!'(ಅಂತೆ) – Trump Adviser Navarro Controversy

“ಟ್ರಂಪ್ ಸಲಹೆಗಾರ ನವಾರೋ, ಭಾರತದ ಜಾತಿ ವಿಚಾರದಲ್ಲಿ ವಿವಾದ”

(ಡೀಪ್ ಸ್ಟೇಟ್ ಎಂದರೆ ಸರಕಾರಿ ಅಧಿಕಾರಿಗಳು ಮತ್ತು ಖಾಸಗಿ ಸಂಸ್ಥೆಗಳ ರಹಸ್ಯ ಜಾಲ. ಈ ವ್ಯವಸ್ಥೆಯ ಮೂಲಕ ಸರಕಾರದ ನೀತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಅನುಕೂಲಕರವಾಗಿ ರೂಪಿಸಲಾಗುತ್ತದೆ.)

ವಾಷಿಂಗ್ಟನ್ (ಅಮೆರಿಕ) – ರಷ್ಯಾದಿಂದ ತೈಲ ಖರೀದಿಸುವ ಭಾರತದ ಮೇಲೆ ಶೇ 50ರಷ್ಟು ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕದ ಭಾರತ ವಿರೋಧಿ ಮುಖ ಈಗ ಹೊರಬಿದ್ದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮುಖ ವ್ಯಾಪಾರ ಸಲಹೆಗಾರರಾದ ಪೀಟರ್ ನವರೋ, ರಷ್ಯಾದ ತೈಲದಿಂದ ಭಾರತದ ಬ್ರಾಹ್ಮಣರು ಲಾಭ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ನವರೋ ಈ ಹಿಂದಿನ ಹೇಳಿಕೆಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ‘ಮೋದಿ ಯುದ್ಧ’ ಎಂದು ಕರೆದಿದ್ದರು. ರಷ್ಯಾದ ತೈಲದಿಂದ ಭಾರತದ ಕೆಲವೇ ಕೆಲವು ಉದ್ಯಮಿಗಳಿಗೆ ಲಾಭವಾಗುತ್ತಿದೆ ಎಂದೂ ಅವರು ಹೇಳಿದ್ದರು. ಅಮೆರಿಕದ ಯುದ್ಧವು ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ವಿರುದ್ಧ ಇದೆ ಎಂದೂ ನವರೋ ಹೇಳಿದ್ದರು. ಆದರೆ ಈಗ, ಅವರು ಭಾರತದ ಆಂತರಿಕ ಸಾಮಾಜಿಕ ರಚನೆಯ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿದ್ದಾರೆ.

ನವರೋ ಅವರ ಈ ಹೇಳಿಕೆ ಹುಚ್ಚುತನದ್ದಲ್ಲ, ಅದರ ಹಿಂದೆ ಆಳವಾದ ರಾಜಕೀಯ ಸಿದ್ಧಾಂತ ಅಡಗಿದೆ. ಅಮೆರಿಕ ‘ಬ್ರಾಹ್ಮಣರ ವಿರುದ್ಧ’ ಹಿಂಸೆಯನ್ನು ಬಯಸುತ್ತಿದೆಯೇ ಎಂಬ ಪ್ರಶ್ನೆಗಳನ್ನು ತಜ್ಞರು ಕೇಳಲು ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಭಿಜಿತ ಮಜುಂದಾರ್ ಅವರ ಹೇಳಿಕೆ ಆಲೋಚನೆಗೆ ಹಚ್ಚುವಂತಿದೆ.

ಭಾರತದಲ್ಲಿ ಅಧಿಕಾರವನ್ನು ಉರುಳಿಸಲು ಅಮೆರಿಕದ ಪ್ರಯತ್ನಗಳು! – ಮಜುಂದಾರ್

ಟ್ರಂಪ್ ಆಡಳಿತವು ಭಾರತದ ಜಾತಿ ವಿಭಜನೆಯ ಲಾಭ ಪಡೆಯಲು ‘ಡೀಪ್ ಸ್ಟೇಟ್’-ಕಮ್ಯುನಿಸ್ಟ್-ಇಸ್ಲಾಮಿಸ್ಟ್ ತಂತ್ರವನ್ನು ಅನುಸರಿಸುತ್ತಿದೆ ಎಂದು ಮಜುಂದಾರ್ ಹೇಳಿದ್ದಾರೆ. ಈ ಪ್ರಯತ್ನ ಅತ್ಯಂತ ಭಯಾನಕವಾಗಿದೆ. ಅಮೆರಿಕ ಈಗ ಭಾರತದಲ್ಲಿ ಅಶಾಂತಿ ಹರಡಲು ಆರಂಭಿಸಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಮತ್ತು ಇದರ ಹಿಂದೆ ಅಮೆರಿಕದ ಗುಪ್ತಚರ ಸಂಸ್ಥೆಗಳು ಇರಬಹುದು. ಬಾಂಗ್ಲಾದೇಶ ಮತ್ತು ಪಾಕಿಸ್ತಾನದಂತೆ ಭಾರತದಲ್ಲಿಯೂ ಅಧಿಕಾರ ಬದಲಾಯಿಸಲು ಅಮೆರಿಕ ಪ್ರಯತ್ನಿಸುತ್ತಿದೆ ಮತ್ತು ಅದಕ್ಕಾಗಿ ಜನಾಂಗೀಯ ದ್ವೇಷ ಮತ್ತು ಹಿಂಸೆಯನ್ನು ಹರಡಲು ಪ್ರಯತ್ನಿಸುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು.

ಪ್ರಸಿದ್ಧ ‘ಎಕ್ಸ್’ (ಟ್ವಿಟರ್) ಖಾತೆ ‘ದಿ ಸ್ಕಿನ್ ಡಾಕ್ಟರ್’ ಹೇಳಿರುವ ಪ್ರಕಾರ, ಕೆಲವು ‘ಸ್ವದ್ವೇಷಿ’ ಭಾರತೀಯರು ಅಮೆರಿಕಕ್ಕೆ ಭಾರತದ ದೌರ್ಬಲ್ಯಗಳ ಮೇಲೆ ದಾಳಿ ಮಾಡಲು ಮಾರ್ಗದರ್ಶನ ನೀಡುತ್ತಿದ್ದಾರೆ, ಅಥವಾ ‘ಜಾತಿ ಯುದ್ಧಗಳನ್ನು’ ಪ್ರೋತ್ಸಾಹಿಸುವ ಮೂಲಕ ಭಾರತದಲ್ಲಿ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿರುವವರೊಂದಿಗೆ ಕೈಜೋಡಿಸುತ್ತಿದ್ದಾರೆ, ಅಥವಾ ಎರಡನ್ನೂ ಮಾಡುತ್ತಿದ್ದಾರೆ!

ಸಂಪಾದಕೀಯ ನಿಲುವು

  • ಭಾರತದ ಮೇಲೆ ಭಾರೀ ತೆರಿಗೆ ಹೇರಿ ಅದರ ಆರ್ಥಿಕ ಸ್ಥಿತಿಯನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿರುವ ಅಮೆರಿಕ ಈಗ ಭಾರತದ ಸಾಮಾಜಿಕ ಸಾಮರಸ್ಯವನ್ನೂ ಹಾಳು ಮಾಡಲು ನೋಡುತ್ತಿದೆ. ಅಮೆರಿಕದ ಈ ಪ್ರಯತ್ನ ಖಂಡನೀಯ! ಹಿಂದೂಗಳೇ, ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಹಿಂದೂಗಳ ಒಗ್ಗಟ್ಟು ಅವಶ್ಯಕವಾಗಿದೆ ಎಂಬುದನ್ನು ಮರೆಯಬೇಡಿ!
  • ಈಗ  ಅಮೆರಿಕದ ಈ ಹೇಳಿಕೆಯನ್ನು ಯಾವುದೇ ಬ್ರಾಹ್ಮಣ ವಿರೋಧಿ ಸಂಘಟನೆಗಳು ಅಥವಾ ಕಾಂಗ್ರೆಸ್‌ನಂತಹ ಹಿಂದೂ ವಿರೋಧಿ ಪಕ್ಷಗಳು ರಾಜಕೀಯಗೊಳಿಸಲು ಪ್ರಾರಂಭಿಸಿದರೆ, ಈ ಎಲ್ಲಾ ಸಂಘಟನೆಗಳು ಅಮೆರಿಕದ ‘ಡೀಪ್ ಸ್ಟೇಟ್’ನ ಏಜೆಂಟರು ಎಂಬುದು ಸ್ಪಷ್ಟವಾಗುತ್ತದೆ!