ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳು ನೀಡಿದ್ದರು

ದುರ್ಗ (ಛತ್ತೀಸ್‌ಗಢ) – ಇಲ್ಲಿನ ಬೋರ್ಸಿ ಬಳಿಯ ನ್ಯೂ ಮನ್ನಮ್ ನಗರ ಪ್ರದೇಶದ ಒಂದು ಮನೆಯಲ್ಲಿ ನಡೆಯುತ್ತಿದ್ದ ಪ್ರಾರ್ಥನಾ ಸಭೆಯಲ್ಲಿ ಕಾರ್ಮಿಕರನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಹಿಂದೂ ಸಂಘಟನೆಗಳು ಇದನ್ನು ಬಹಿರಂಗಪಡಿಸಿದ ನಂತರ, ಆ ಪ್ರದೇಶದಲ್ಲಿ ಗೊಂದಲ ಉಂಟಾಯಿತು. ಈ ಘಟನೆಯ ಮಾಹಿತಿ ಸಿಕ್ಕ ತಕ್ಷಣ ಪೊಲೀಸ್ ಮತ್ತು ಆಡಳಿತದವರು ಸ್ಥಳಕ್ಕೆ ಧಾವಿಸಿ ಮನೋಹರ್ ತಾಂಡಿ ಮತ್ತು ಆಕಾಶ ಬಸೇರಾ ಎಂಬ ಇಬ್ಬರು ಪಾದ್ರಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಹಿಂದೂ ಸಂಘಟನೆಗಳ ಪ್ರಕಾರ, ಒಡಿಶಾದಿಂದ ಬಂದ ಕಾರ್ಮಿಕರಿಗೆ ಆಹಾರ ಮತ್ತು ಔಷಧದ ಆಮಿಷವೊಡ್ಡಿ ಪ್ರಾರ್ಥನಾ ಸಭೆಗೆ ಕರೆತರಲಾಗಿತ್ತು. ಈ ಸಮಯದಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗುತ್ತಿತ್ತು. ಇದರೊಂದಿಗೆ ಕಾರ್ಮಿಕರ ಮೇಲೆ ಒತ್ತಡ ಹೇರಿ ಅವರನ್ನು ಕ್ರೈಸ್ತ ಧರ್ಮ ಸ್ವೀಕರಿಸಲು ಪ್ರೇರೇಪಿಸಲಾಗುತ್ತಿತ್ತು. ಈ ಘಟನೆ ಬಯಲಿಗೆ ಬಂದ ನಂತರ ತಹಶೀಲ್ದಾರ್ ಪ್ರಫುಲ್ ಗುಪ್ತಾ ಮತ್ತು ಪೊಲೀಸ್ ಅಧೀಕ್ಷಕ ಸುಖನಂದನ್ ರಾಠೋಡ್ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದರು. ಮತಾಂತರದ ದೂರಿನ ಮೇರೆಗೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಲಹಾರೆ ತಿಳಿಸಿದರು. ಈ ಘಟನೆಯಿಂದಾಗಿ ರಾಜ್ಯದಲ್ಲಿ ಮತಾಂತರದ ಮೇಲೆ ನಿಯಂತ್ರಣ ಹೇರಬೇಕೆಂಬ ಬೇಡಿಕೆ ಮತ್ತೆ ಹೆಚ್ಚಾಗಿದೆ.
ಎರಡು ವರ್ಷಗಳಿಂದ ನಡೆಯುತ್ತಿದ್ದ ಪ್ರಾರ್ಥನಾ ಸಭೆ
ಸ್ಥಳೀಯ ಕಾರ್ಯಕರ್ತರ ನೀಡಿರುವ ಮಾಹಿತಿಯ ಪ್ರಕಾರ ಈ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದ ಈ ಪ್ರಾರ್ಥನಾ ಸಭೆಗಳು ನಡೆಯುತ್ತಿವೆ. ಈ ಹಿಂದೆ ವಿರೋಧ ವ್ಯಕ್ತವಾದಾಗ ಸ್ವಲ್ಪ ಸಮಯದವರೆಗೆ ಅವುಗಳನ್ನು ನಿಲ್ಲಿಸಲಾಗಿತ್ತು, ಆದರೆ ನಂತರ ಮತ್ತೆ ಪ್ರಾರಂಭಿಸಲಾಯಿತು. ಆಗಸ್ಟ್ 31, ಭಾನುವಾರ ನಡೆದ ಪ್ರಾರ್ಥನಾ ಸಭೆಗೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!