ಟ್ರಂಪ್ ಸರಕಾರವು ಭಾರತವನ್ನು ಶಾಲಾ ಮಗುವಿನಂತೆ ನಡೆಸಿಕೊಳ್ಳುತ್ತಿದೆ! – ರಿಕ್ ಸ್ಯಾಂಚೆಜ್, ಹಿರಿಯ ಪತ್ರಕರ್ತ, ಅಮೆರಿಕ American Journalist Trump India

‘ಭಾರತ ಒಂದು ದೊಡ್ಡ ಶಕ್ತಿ ಎಂಬುದನ್ನು ಟ್ರಂಪ್ ಅರ್ಥಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು

ನ್ಯೂಯಾರ್ಕ್ – ಭಾರತದ ಮೇಲೆ ಆಮದು ಸುಂಕಗಳನ್ನು ವಿಧಿಸಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಅಮೇರಿಕಾದ ಹಿರಿಯ ಪತ್ರಕರ್ತ ರಿಕ್ ಸ್ಯಾಂಚೆಜ್ ಅವರು ಟೀಕಿಸಿದ್ದಾರೆ. ಸ್ಯಾಂಚೆಜ್ ಅವರು, “ಟ್ರಂಪ್ ಅವರ ಈ ನೀತಿಯು ತುಂಬಾ ಅಹಂಕಾರದಿಂದ ಕೂಡಿದೆ. ಟ್ರಂಪ್ ಸರಕಾರವು ಭಾರತವನ್ನು ಒಂದು ಶಾಲಾ ಮಗುವಿನಂತೆ ನಡೆಸಿಕೊಳ್ಳುತ್ತಿದೆ, ಆದರೆ ಭಾರತವು ಶಾಲಾ ಮಗುವಲ್ಲ, ಅದೊಂದು ದೊಡ್ಡ ಶಕ್ತಿಯಾಗಿದೆ. ಭಾರತಕ್ಕೆ ತನ್ನದೇ ಆದ ಇತಿಹಾಸ, ಸಂಪನ್ಮೂಲಗಳು ಮತ್ತು ಅಪಾರ ಸಾಮರ್ಥ್ಯಗಳಿವೆ. ಜಗತ್ತಿಗೆ ಭಾರತದ ಕೊಡುಗೆಗಳು ಬಹಳ ಮಹತ್ವದ್ದಾಗಿವೆ. ಜಾಗತಿಕ ಇತಿಹಾಸದಲ್ಲಿ ಭಾರತದ ಕೊಡುಗೆಗಳು ಯುರೋಪ್ ಮತ್ತು ಮೆಸೊಪೊಟೇಮಿಯಾದ ಕೊಡುಗೆಗಳಿಗಿಂತ ಕಡಿಮೆಯಿಲ್ಲ. ಭಾರತವು ಅಮೆರಿಕಾಗೆ ‘ನಾವು ಯಾರಿಂದ ತೈಲವನ್ನು ಖರೀದಿಸಬೇಕು ಅಥವಾ ಮಾಡಬಾರದು ಎಂದು ನೀವು ಹೇಳುವ ಅಗತ್ಯವಿಲ್ಲ’ ಎಂದು ದಿಟ್ಟವಾಗಿ ಹೇಳಿದ ಕ್ಷಣವು ಪರಿವರ್ತನೆಯ ಕ್ಷಣವಾಗಿತ್ತು. ಇತಿಹಾಸಕಾರರು ಹಿಂತಿರುಗಿ ನೋಡಿದಾಗ, ‘ಇದೇ ಆ ಕ್ಷಣ, ಜಗತ್ತಿನ ಮಹಾಶಕ್ತಿ ಅಮೆರಿಕಾದ ಪ್ರಾಬಲ್ಯ ಕಡಿಮೆಯಾಗಿ ಈ ಶಕ್ತಿಯು ದಕ್ಷಿಣ ಏಷ್ಯಾ ಕಡೆಗೆ ಸರಿಯುತ್ತಿದೆ’ ಎಂದು ಅವರಿಗೆ ತಿಳಿದುಬರುತ್ತದೆ.”

ಸ್ಯಾಂಚೆಜ್ ಅವರು ಮಂಡಿಸಿದ ಕೆಲವು ಪ್ರಮುಖ ಅಂಶಗಳು

೧. ಟ್ರಂಪ್ ಸರಕಾರಕ್ಕೆ ಭಾರತದ ಇತಿಹಾಸ ಮತ್ತು ಅದರ ಮಹತ್ವದ ಬಗ್ಗೆ ಯಾವುದೇ ಕಲ್ಪನೆ ಇಲ್ಲದ ಕಾರಣ, ಅವರು ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

೨. ಟ್ರಂಪ್ ಸರಕಾರಕ್ಕೆ ಭಾರತ-ಚೀನಾ ಸಂಬಂಧಗಳು ಮತ್ತು ರಷ್ಯಾ-ಉಕ್ರೇನ್ ಸಂಬಂಧಗಳ ಬಗ್ಗೆ ಏನೂ ತಿಳಿದಿಲ್ಲ; ಆದ್ದರಿಂದಲೇ ಟ್ರಂಪ್ ಸರಕಾರದ ಪ್ರತಿನಿಧಿಗಳು ಮೂರ್ಖತನದ ಹೇಳಿಕೆಗಳನ್ನು ನೀಡುತ್ತಿದ್ದಾರೆ.