ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ದ್ರೋಹ ಮಾಡಿದೆ ಎಂದೂ ಆರೋಪ

ಬೆಂಗಳೂರು – ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವ ಕರ್ನಾಟಕ ಕಾಂಗ್ರೆಸ್ ಸರಕಾರದ ನಿರ್ಧಾರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಆಯ್ಕೆಗೆ ಮುಸ್ಲಿಂ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ಮುಸ್ಲಿಂ ಧರ್ಮಗುರುಗಳು ಬಾನು ಮುಷ್ತಾಕ್ ವಿರುದ್ಧ ‘ಫತ್ವಾ’ ಹೊರಡಿಸಲು ಪ್ರಯತ್ನಿಸಿದ್ದರು. ಆದರೆ ಸಚಿವ ಜಮೀರ್ ಅಹ್ಮದ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಧರ್ಮಗುರುಗಳ ಮೇಲೆ ಒತ್ತಡ ಹೇರಿ ಫತ್ವಾ ಹೊರಡಿಸದಂತೆ ತಡೆದಿದ್ದಾರೆ ಎಂದು ಮುಸ್ಲಿಂ ನಾಯಕ ಸಾದಿಕ್ ಪಾಷಾ ಆರೋಪಿಸಿದ್ದಾರೆ.
ಸಾದಿಕ್ ಪಾಷಾ ಅವರು ಮಾತು ಮುಂದುವರೆಸುತ್ತಾ,
1. ಶೇ 85 ರಷ್ಟು ಮುಸ್ಲಿಂ ಮತಗಳಿಂದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಿದೆ; ಆದರೆ ಅದು ಮುಸ್ಲಿಂ ಸಮುದಾಯಕ್ಕಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಮುಸ್ಲಿಂ ಯುವಕ-ಯುವತಿಯರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಸಿಗಬೇಕಿತ್ತು. ಅದರ ಬದಲಾಗಿ, ಅವರು ನಮ್ಮನ್ನು ಸಮಾಧಾನಪಡಿಸಲು ಇಂತಹ ನಾಟಕವಾಡುತ್ತಿದ್ದಾರೆ.
2. ನಮಗೆ ಅಲ್ಲಾಹನೇ ಏಕೈಕ ದೇವರು. ಕುಂಕುಮ ಹಚ್ಚಿಕೊಳ್ಳುವುದರಿಂದ ಮತ್ತು ಆರತಿ ಮಾಡುವುದರಿಂದ ಮುಸ್ಲಿಂ ಧರ್ಮವು ಹಾಳಾಗುತ್ತದೆ. ಬಾನು ಮುಷ್ತಾಕ್ ಅವರ ನಡವಳಿಕೆ ಮತ್ತು ಆಚರಣೆಗಳು ಮುಸ್ಲಿಮರಿಗೆ ಸರಿಯಲ್ಲ. ಅವರು ಧಾರ್ಮಿಕ ಆಚರಣೆಗಳನ್ನು ಅನುಸರಿಸುವುದಿಲ್ಲ.
3. ಬಾನು ಮುಷ್ತಾಕ್ ಅವರನ್ನು ಆಹ್ವಾನಿಸುವುದರಿಂದ ಹಿಂದೂ ಸಮುದಾಯದ ಭಾವನೆಗಳಿಗೂ ನೋವಾಗಬಹುದು ಮತ್ತು ಇದರಿಂದ ಕೋಮು ಗಲಭೆಗಳು ಆಗಬಹುದು.
4. ಸರಕಾರ ನಮ್ಮನ್ನು ಬಳಸಿಕೊಂಡು ವಿವಾದ ಸೃಷ್ಟಿಸುತ್ತಿದೆ. ಡಿ.ಜೆ-ಕೆ.ಜೆ ಹಳ್ಳಿ ಪ್ರಕರಣದಲ್ಲಿ ಅಮಾಯಕರು ಇನ್ನೂ ಕಾರಾಗೃಹದಲ್ಲಿದ್ದಾರೆ. ‘ನಮ್ಮನ್ನು ಗೆಲ್ಲಿಸಿದರೆ ಅಮಾಯಕರನ್ನು ಹೊರಗೆ ಕರೆತರುತ್ತೇವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದರು. ಕಳೆದ ಚುನಾವಣೆಯಲ್ಲಿ ನಾವು ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಡಿ.ಕೆ. ಶಿವಕುಮಾರ್ ಅವರ ಮಾತಿನಲ್ಲಿ ವಿಶ್ವಾಸವಿಟ್ಟು ಮತ ಹಾಕಿದೆವು. ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್‌ನವರು ಎಂದು ಗೊತ್ತಿತ್ತು; ಆದರೆ ಶಿವಕುಮಾರ್ ಕೂಡ ಆರ್‌ಎಸ್‌ಎಸ್‌ನವರು ಎಂದು ಮೊದಲೇ ಗೊತ್ತಿದ್ದರೆ, ನಾವು ಮತ ಹಾಕುವಾಗ ಯೋಚಿಸುತ್ತಿದ್ದೆವು.
5. ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯಕ್ಕೆ ದ್ರೋಹ ಮಾಡಿದೆ. ಇದು ಹೀಗೆಯೇ ಮುಂದುವರಿದರೆ, ಮುಂದಿನ ಚುನಾವಣೆಯಲ್ಲಿ ನಾವು ಅವರಿಗೆ ತಕ್ಕ ಉತ್ತರ ನೀಡುತ್ತೇವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!