‘ಭಾರತವು ಭಗವದ್ಗೀತೆ ಅಥವಾ ಕುರಾನ್‌ ನಿಂದಲ್ಲ, ಸಂವಿಧಾನದ  ಪ್ರಕಾರ ನಡೆಯುತ್ತದೆ!’ – AIIA President Statement

  • ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶಿದಿ ಅವರಿಗೆ ಅಸೂಯೆ

  • ಸಮಾನ ನಾಗರಿಕ ಸಂಹಿತೆಗೂ ವಿರೋಧ

  • ಸರಸಂಘಚಾಲಕರು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಕರೆಯುವುದು ನಮ್ಮ ಅವಮಾನ, ಎಂದು ಹೇಳಿಕೆ

(ಮೌಲಾನಾ ಎಂದರೆ ಇಸ್ಲಾಂನ ಅಧ್ಯಯನಕಾರ(ವಿದ್ವಾಂಸ?)

ನವದೆಹಲಿ – ಆಲ್ ಇಂಡಿಯಾ ಇಮಾಮ್ (ಮಸೀದಿಯಲ್ಲಿ ಪ್ರಾರ್ಥನೆ ಮಾಡುವವರು) ಅಸೋಸಿಯೇಷನ್ ನ ಅಧ್ಯಕ್ಷ ಮೌಲಾನಾ ಸಾಜಿದ್ ರಶಿದಿ, ಮಾತನಾಡುತ್ತಾ ಭಾರತವು ಭಗವದ್ಗೀತೆ ಅಥವಾ ಕುರಾನ್‌ ಮೂಲಕವಲ್ಲ, ಆದರೆ ಸಂವಿಧಾನ ಮತ್ತು ಕಾನೂನಿನ ಪ್ರಕಾರ ನಡೆಯುತ್ತದೆ ಎಂದು ಹೇಳಿದರು. ಪ.ಪೂ. ಸರಸಂಘಚಾಲಕ ಡಾ. ಮೋಹನ ಭಾಗವತ ಅವರು ಹಿಂದೂ ರಾಷ್ಟ್ರದ ಬಗ್ಗೆ ನೀಡಿದ ಹೇಳಿಕೆಯ ನಂತರ ಮೌಲಾನಾ ಸಾಜಿದ್ ಈ ಟಿಪ್ಪಣಿ ಮಾಡಿದ್ದಾರೆ. ದೇಶಕ್ಕಾಗಿ ರೂಪಿಸಲಾಗುತ್ತಿರುವ ಸಮಾನ ನಾಗರಿಕ ಸಂಹಿತೆಗೂ ತಾವು ವಿರೋಧ ವ್ಯಕ್ತಪಡಿಸುವುದಾಗಿ ಸಾಜಿದ್ ಅವರು ಹೇಳಿದರು. ಸಂಘದ ಶತಮಾನೋತ್ಸವಕ್ಕಾಗಿ ದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಪೂಜ್ಯ ಸರಸಂಘಚಾಲಕರು ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಬಣ್ಣಿಸಿದ್ದರು. ಅದರ ನಂತರ ಮೌಲಾನಾಗೆ ಅಸೂಯೆ ಪ್ರಾರಂಭವಾಗಿದೆ.

ಕಳೆದ ಕೆಲವು ತಿಂಗಳಲ್ಲಿ ಮೌಲಾನಾ ಸಾಜಿದ್ ರಶಿದಿ ಅವರು ನೀಡಿದ ಹೇಳಿಕೆಗಳು!

1. ಮೌಲಾನಾ ಅವರು ವಕ್ಫ್ ಮಸೂದೆಯನ್ನು ಬೆಂಬಲಿಸಿದ್ದರು. ಕಾಂಗ್ರೆಸ್ ಪಕ್ಷ ಅನೇಕ ವರ್ಷಗಳಿಂದ ವಕ್ಫ್ ಆಸ್ತಿಯನ್ನು ದುರುಪಯೋಗಪಡಿಸಿ ಕೊಂಡಿದೆ ಎಂದು ಅವರು ಆರೋಪಿಸಿದ್ದರು.

2. ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರ ಬಗ್ಗೆ ಸಾಜಿದ್ ಅಶ್ಲೀಲ ಹೇಳಿಕೆಯನ್ನೂ ಸಹ ನೀಡಿದ್ದರು.

3. ಏಪ್ರಿಲ್‌ ನಲ್ಲಿ ನಡೆದ ಪಹಲ್ಗಾಮ್ ದಾಳಿಯ ನಂತರ, ಪಾಕಿಸ್ತಾನವು ಭಾರತೀಯ ಮುಸ್ಲಿಮರ ಚಿತ್ರಣವನ್ನು ಹಾಳು ಮಾಡಿದೆ ಎಂದು ಮೌಲಾನಾ ಆರೋಪಿಸಿದ್ದರು.

ಸಂಪಾದಕೀಯ ನಿಲುವು

ಹಾಗಿದ್ದರೆ, ಮೌಲಾನಾ ಅವರು ಸಮಾನ ನಾಗರಿಕ ಸಂಹಿತೆಗೆ ಏಕೆ ವಿರೋಧ ವ್ಯಕ್ತಪಡಿಸುತ್ತಾರೆ? ಸಂವಿಧಾನದ ಪ್ರಕಾರ, ಎಲ್ಲಾ ನಾಗರಿಕರು ಸಮಾನರು. ಆದರೂ, ಸಂವಿಧಾನವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ  ವ್ಯಾಖ್ಯಾನಿಸುವ ಅಥವಾ ಅದನ್ನು ತಮಗೆ ಬೇಕಾದಂತೆ ಹೊಂದಿಸುವ ಪ್ರಯತ್ನ ಮಾಡುವ ಮೌಲಾನಾ ಅವರ ಮನೋಭಾವ  ಈ ಮೂಲಕ ತಿಳಿದುಬರುತ್ತದೆ!