ಡ್ರೋನ್ ಮೂಲಕ ಪಾಕಿಸ್ತಾನದಿಂದ ಮಾದಕವಸ್ತುಗಳ ಸಾಗಾಟ; ನಾಲ್ವರ ಬಂಧನ Pakistan Drone Drug Smuggling

ರೂಪಿಂದರ್, ನೌಶಾದ್, ಅರಬಾಜ್ ಮತ್ತು ತೌಸಿಫ್ ಇವರ ಬಂಧನ

ರಾಯಪುರ (ಛತ್ತೀಸಗಢ) – ಪಾಕಿಸ್ತಾನದಿಂದ ಡ್ರೋನ್ ಮೂಲಕ ಬಂದ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರಿಂದ ಪಾಕಿಸ್ತಾನ ನಿರ್ಮಿತ ಪಿಸ್ತೂಲ್ ಮತ್ತು 80 ಜೀವಂತ ಗುಂಡುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

1. ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ರೂಪಿಂದರ ಸಿಂಗ್ ಮತ್ತು ಆತನ ಸಹಚರರಾದ ನೌಶಾದ ಮಹಮ್ಮದ್, ಅರಬಾಜ್ ಮತ್ತು ತೌಸಿಫ್ ಇವರು ಡ್ರೋನ್‌ಗಳ ಮೂಲಕ ಪಾಕಿಸ್ತಾನದಿಂದ ಭಾರತದ ಪಂಜಾಬಿಗೆ ಮಾದಕವಸ್ತುಗಳನ್ನು ಸಾಗಿಸುತ್ತಿದ್ದರು. ಅಲ್ಲಿಂದ ದೇಶದ ಹಲವು ರಾಜ್ಯಗಳ ಮಾದಕವಸ್ತು ಮಾರಾಟಗಾರರಿಗೆ ಇವುಗಳನ್ನು ಸರಬರಾಜು ಮಾಡಲಾಗುತ್ತಿತ್ತು.

2. ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ, ಪಂಜಾಬ ನಿವಾಸಿಯಾದ ರೂಪಿಂದರ್ ಸಿಂಗ್ ನನ್ನು ಬಂಧಿಸಲಾಯಿತು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಅವನಿಂದ ಹೆರಾಯಿನ್, ಅಫೀಮು, ಪಾಕಿಸ್ತಾನ ನಿರ್ಮಿತ ಪಿಸ್ತೂಲ್ ಮತ್ತು 80 ಜೀವಂತ ಗುಂಡುಗಳು ಸಿಕ್ಕಿವೆ.

3. ಪಾಕಿಸ್ತಾನದಿಂದ ತನಗೆ ಪಂಜಾಬನಲ್ಲಿ ಮಾದಕವಸ್ತುಗಳು ಸಿಗುತ್ತಿದ್ದವು ಎಂದು ಸಿಂಗ್ ತಿಳಿಸಿದ್ದಾನೆ. ರಸ್ತೆಯ ಮಾರ್ಗವಾಗಿ ಅವನು ಛತ್ತೀಸಗಢದ ರಾಯಪುರ, ಬಿಲಾಸಪುರ ಮತ್ತು ಧಮತರಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಮಾದಕವಸ್ತುಗಳನ್ನು ಸಿಂಗ್ ಕಳ್ಳಸಾಗಣೆ ಮಾಡುತ್ತಿದ್ದನು.

4. ಪೊಲೀಸ್ ಮಹಾನಿರೀಕ್ಷಕ ಅಮರೇಶ್‌ ಮಿಶ್ರಾ ಈ ಕುರಿತು ಮಾತನಾಡಿ, ಮುಖ್ಯ ಸೂತ್ರಧಾರ ರೂಪಿಂದರ್ ಸಿಂಗ್ ನ ತಾಯಿಯನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದ್ದು,  ಆಕೆಯ ಖಾತೆಯಿಂದ ಹಣದ ವ್ಯವಹಾರ ಮತ್ತು ಹೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ದೇಶದಲ್ಲಿನ ಅಲ್ಪಸಂಖ್ಯಾತರು ಅಪರಾಧದ ಪ್ರತೀ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವುದು ಇಂತಹ ಘಟನೆಗಳಿಂದ ಮತ್ತೆ ಮತ್ತೆ ಬಹಿರಂಗವಾಗುತ್ತಿದೆ.