ಪ್ರಧಾನಮಂತ್ರಿಗಳ ಐತಿಹಾಸಿಕ ಚೀನಾ ಪ್ರವಾಸ ! – PM Modi Visit China

ತಿಯಾನಜಿನ್ (ಚೀನಾ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಯಶಸ್ವಿ ಜಪಾನ ಪ್ರವಾಸ ಮುಗಿಸಿ ಈಗ ಚೀನಾದ ತಿಯಾನಜಿನ್ ನಗರಕ್ಕೆ ಬಂದಿಳಿದಿದ್ದಾರೆ. ಪ್ರಧಾನಮಂತ್ರಿಯವರು ಮುಖ್ಯವಾಗಿ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿರುವ ‘ಶಾಂಘೈ ಸಹಕಾರ ಸಂಘಟನೆ’ಯ ವಾರ್ಷಿಕ ಶೃಂಗಸಭೆಗಾಗಿ ಚೀನಾಕ್ಕೆ ಆಗಮಿಸಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಟ್ಯಾರಿಫ್’ (ಸುಂಕ) ನೀತಿಗಳಿಂದ ಭಾರತ-ಅಮೆರಿಕಾ ಸಂಬಂಧಗಳಲ್ಲಿ ಉಂಟಾಗಿರುವ ಬಿರಿಕಿನಿಂದಾಗಿ ಪ್ರಧಾನಿ ಮೋದಿಯವರ ಈ ಪ್ರವಾಸವನ್ನು ಐತಿಹಾಸಿಕ ಎಂದು ಪರಿಗಣಿಸಲಾಗಿದೆ. ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಲಿದ್ದಾರೆ. ಇದರಿಂದ ಇಡೀ ವಿಶ್ವದ ಗಮನ ಈ ಭೇಟಿಯತ್ತ ನೆಟ್ಟಿದೆ. ಪ್ರಧಾನಮಂತ್ರಿಯವರು 7 ವರ್ಷಗಳ ನಂತರ ಮೊದಲ ಬಾರಿಗೆ ಚೀನಾಕ್ಕೆ ಭೇಟಿ ನೀಡುತ್ತಿದ್ದಾರೆ.

ಚರ್ಚೆಯಲ್ಲಿ ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್ ಅವರು ಭಾರತ-ಚೀನಾ ಆರ್ಥಿಕ ಸಂಬಂಧಗಳನ್ನು ಪರಿಶೀಲಿಸಲಿದ್ದಾರೆ, ಜೊತೆಗೆ ಪೂರ್ವ ಲಡಾಖ್ ಗಡಿ ವಿವಾದದಿಂದ ಉದ್ವಿಗ್ನಗೊಂಡಿರುವ ಸಂಬಂಧಗಳನ್ನು ಸಾಮಾನ್ಯಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ.