|

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬರೇಲಿಯಲ್ಲಿ ಹಿಂದೂ ಯುವಕರನ್ನು ಮತಾಂತರ ಮಾಡುತ್ತಿದ್ದ ಅಬ್ದುಲ್ ಮಜೀದ್‌ನ ಗ್ಯಾಂಗ್‌ನ ಚಟುವಟಿಕೆಗಳು ಬೆಳಕಿಗೆ ಬಂದಿವೆ. ಅಬ್ದುಲ್ ಮಜೀದ್ ಒಬ್ಬ ಮದರಸಾ ಮುಖ್ಯಸ್ಥನಾಗಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಮಜೀದ್ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್ ಬಗ್ಗೆ ಪೊಲೀಸರು ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಹಿಂದೂ ಯುವಕರನ್ನು ಮತಾಂತರ ಮಾಡಲು ಈ ಗ್ಯಾಂಗ್ ಆರ್ಥಿಕ ಸಹಾಯ ಮತ್ತು ಸುಂದರ ಮುಸ್ಲಿಂ ಯುವತಿಯರೊಂದಿಗೆ ಮದುವೆ ಮಾಡಿಸುವುದಾಗಿ ಆಮಿಷ ಒಡ್ಡುತ್ತಿತ್ತು. ಆರಂಭದಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಹಿಂದೂಗಳಿಗೆ ಸಹಾಯ ಮಾಡಲಾಗುತ್ತಿತ್ತು. ನಂತರ ಅವರನ್ನು ಮತಾಂತರ ಮಾಡಲಾಗುತ್ತಿತ್ತು. ಮುಂದೆ, ಅವರ ಕುಟುಂಬದವರನ್ನೂ ಮತಾಂತರ ಮಾಡಲಾಗುತ್ತಿತ್ತು. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಚಾಂಗುರ್ ಬಾಬಾ ಎಂಬಾತನ ಗ್ಯಾಂಗ್‌ನ ಚಟುವಟಿಕೆಗಳೂ ಬೆಳಕಿಗೆ ಬಂದಿದ್ದವು.
थाना भुता बरेली पुलिस द्वारा थाना भुता पर पंजीकृत मु0अ0सं0 377/2025 धारा 140(3)/351(3) बीएनएस व 3/5(1) उ0प्र0 विधि विरुद्ध धर्म संपरिवर्तन प्रतिषेध अधिनियम, 2021 से संबंधित 04 अभियुक्तों की गिरफ्तारी एवं बरामदगी के संबंध में सुश्री अंशिका वर्मा #SP South बरेली की बाइट।#UPPolice https://t.co/hOveW3QedX pic.twitter.com/YSnPOiNzS3
— Bareilly Police (@bareillypolice) August 26, 2025
೧. ಈ ಗ್ಯಾಂಗ್ ಹಿಂದೂಗಳನ್ನು ಹೇಗೆ ವಂಚಿಸುತ್ತಿತ್ತು ? ಎಂಬುದು ಬಹಿರಂಗವಾಗಿದೆ. ಸುಭಾಷ ನಗರದ ಬ್ರಿಜ್‌ಪಾಲ್ ಎಂಬ ಶಿಕ್ಷಕರನ್ನು ಈ ಗ್ಯಾಂಗ್ ತನ್ನ ಬಲೆಗೆ ಕೆಡವಿಕೊಂಡಿತ್ತು. 2014ರಲ್ಲಿ ಅಪಘಾತದಿಂದಾಗಿ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆಗ, ಸಲ್ಮಾನ್ ಮತ್ತು ಆರಿಫ್ ಇಬ್ಬರೂ ಅವರಿಗೆ ಆರ್ಥಿಕ ಸಹಾಯ ಮಾಡಿದರು. ನಂತರ, ಆಮಿಷವೊಡ್ಡಿ ಅವರನ್ನು ಮತ್ತು ಅವರ ಕುಟುಂಬವನ್ನು ಮತಾಂತರ ಮಾಡಿದರು.
೨. ಗ್ಯಾಂಗ್ ಸದಸ್ಯರು ಬಳಸುತ್ತಿದ್ದ ಮೊಬೈಲ್‌ಗಳಲ್ಲಿ ಮುಸ್ಲಿಂ ಯುವತಿಯರ ಫೋಟೋಗಳು ಸಿಕ್ಕಿವೆ. ಈ ಫೋಟೋಗಳನ್ನು ಹಿಂದೂಗಳಿಗೆ ಮದುವೆಯ ಆಮಿಷವೊಡ್ಡಲು ಬಳಸಲಾಗುತ್ತಿತ್ತು. ಹಿಂದೂಗಳನ್ನು ಮತಾಂತರ ಮಾಡಲು ಮಜೀದ್ ವಿವಿಧ ತಂತ್ರಗಳನ್ನು ಬಳಸುತ್ತಿದ್ದನು. ಮತಾಂತರಗೊಂಡ ಹಿಂದೂಗಳ ಸುನ್ನತಿ ಮಾಡಿಸುತ್ತಿದ್ದನು. ಮುಖ್ಯವಾಗಿ ಅಂಗವಿಕಲ ಮತ್ತು ಹಿಂದುಳಿದ ವರ್ಗದ ಯುವಕರನ್ನು ಗುರಿಯಾಗಿಸುತ್ತಿದ್ದನು. ಆತನ ಸಂಪರ್ಕ ದೇಶದ 27ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಇತ್ತು. ಆತನ ಬ್ಯಾಂಕ್ ಖಾತೆಯಲ್ಲಿ 13 ಲಕ್ಷ ರೂಪಾಯಿ, ಮತ್ತು 21 ವಿವಿಧ ಖಾತೆಗಳ ವಿವರಗಳು ಸಿಕ್ಕಿವೆ.
೩. ಈ ಗ್ಯಾಂಗ್ ಅನೇಕ ವಾಟ್ಸಾಪ್ ಗುಂಪುಗಳನ್ನು ಮಾಡಿಕೊಂಡಿತ್ತು. ಅವುಗಳಲ್ಲಿ ಭಯೋತ್ಪಾದಕರ ಸ್ಫೂರ್ತಿ ಜಿಹಾದಿ ಝಾಕಿರ್ ನಾಯ್ಕ್‌ನ ವೀಡಿಯೋಗಳು ಮತ್ತು ಪಾಕಿಸ್ತಾನದ ಧಾರ್ಮಿಕ ಉಪದೇಶಕರ ಆಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ಸಲ್ಮಾನ್ ಧಾರ್ಮಿಕ ಗ್ರಂಥಗಳು ಮತ್ತು ಪುಸ್ತಕಗಳನ್ನು ಒದಗಿಸುತ್ತಿದ್ದನು, ಆರಿಫ್ ಅವನಿಗೆ ಸಹಾಯ ಮಾಡುತ್ತಿದ್ದನು, ಮತ್ತು ಫಹೀಮ್ ಜನರ ಮಾಹಿತಿಯನ್ನು ಸಂಗ್ರಹಿಸಿ ಗ್ಯಾಂಗ್‌ಗೆ ತಲುಪಿಸುತ್ತಿದ್ದನು. ಈ ಗ್ಯಾಂಗ್‌ಗೆ ವಿದೇಶಿ ಹಣಕಾಸು ನೆರವು ಸಿಗುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಉಳಿದ ಸದಸ್ಯರ ಹುಡುಕಾಟ ಮುಂದುವರಿದಿದೆ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ