ಡೊನಾಲ್ಡ್ ಟ್ರಂಪ್ ಅವರ ಆಮದು ಸುಂಕ ನೀತಿಯನ್ನು ಟೀಕಿಸಿದ ಅಮೇರಿಕಾದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಹೇರಿದ ಶೇ. 50% ರಷ್ಟು ಆಮದು ಸುಂಕದ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಸುಂಕದಿಂದಾಗಿ ಅಮೇರಿಕಾದ ಜಾಗತಿಕ ವಿಶ್ವಾಸಾರ್ಹತೆ ನಾಶವಾಗಿದೆ ಎಂದು ಅವರು ಹೇಳಿದ್ದಾರೆ. ಈ ಕ್ರಮವು ಭಾರತವನ್ನು ಚೀನಾ ಹತ್ತಿರಕ್ಕೆ ಕರೆದೊಯ್ಯುತ್ತಿದೆ. ಅಲ್ಲದೇ, ಅಮೇರಿಕಾದ ಈ ನೀತಿಯಿಂದಾಗಿ ಎರಡೂ ದೇಶಗಳ ನಡುವೆ ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ನಿರ್ಮಿಸಲಾದ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಅಪಾಯ ಬಂದಿದೆ ಎಂದು ಸುಲ್ಲಿವಾನ್ ಎಚ್ಚರಿಕೆ ನೀಡಿದ್ದಾರೆ.
1. ಸುಲ್ಲಿವಾನ್ ಅವರು ಮುಂದೆ ಮಾತನಾಡಿ, ಹಿಂದೆ ಅಮೇರಿಕಾವನ್ನು ಸ್ಥಿರ ಮತ್ತು ವಿಶ್ವಾಸಾರ್ಹ ಎಂದು ಪರಿಗಣಿಸಲಾಗಿತ್ತು; ಆದರೆ ಈಗ ಅನೇಕ ದೇಶಗಳಲ್ಲಿ ಚೀನಾದ ವಿಶ್ವಾಸಾರ್ಹತೆ ಹೆಚ್ಚಾಗಿದೆ ಎಂದು ಹೇಳಿದರು.
2. ಅಮೇರಿಕಾ ಭಾರತದೊಂದಿಗೆ ಸಂಬಂಧಗಳನ್ನು ಬಲಪಡಿಸಲು ಪ್ರಯತ್ನಿಸಿತ್ತು, ಆದರೆ ಟ್ರಂಪ್ ಅವರ ನೀತಿಗಳಿಂದ ಅದು ಹಾನಿಗೊಂಡಿದೆ ಎಂದು ಸುಲ್ಲಿವಾನ್ ಹೇಳಿದರು. ಭಾರತದಂತಹ ಪ್ರಮುಖ ಮಿತ್ರನನ್ನು ಕಳೆದುಕೊಳ್ಳುವುದು ಅಮೇರಿಕಾಗೆ ಹಾನಿಕಾರಕ ಎಂದು ಅವರು ಸಲಹೆ ನೀಡಿದರು.
3. ಅಮೇರಿಕಾದ ಇನ್ನೊಬ್ಬ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅವರು ಕೂಡ ಟ್ರಂಪ್ ಅವರ ನೀತಿಗಳನ್ನು ‘ಜಟಿಲ’ ಎಂದು ಬಣ್ಣಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation