ಅಮೇರಿಕಾದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸಂಸ್ಥೆ ‘ಜೆಫರೀಸ್’ನ ದಾವೆ

ವಾಷಿಂಗ್ಟನ್ (ಅಮೇರಿಕಾ) – ಮೇ ತಿಂಗಳಲ್ಲಿ ‘ಆಪರೇಷನ್ ಸಿಂದೂರ್’ ಅಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಮಿಲಿಟರಿ ಉದ್ವಿಗ್ನತೆಯ ನಂತರ, ಡೊನಾಲ್ಡ್ ಟ್ರಂಪ್ ಅವರು “ನನ್ನ ಮಧ್ಯಸ್ಥಿಕೆಯಿಂದಾಗಿ ಯುದ್ಧ ನಿಂತಿತು” ಎಂದು ಹೇಳಿಕೊಂಡಿದ್ದರು. ಹೀಗಿದ್ದರೂ ಟ್ರಂಪ್ ಬಯಸಿದಂತೆ, ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕೊನೆಗೊಳಿಸಿದ ಕೀರ್ತಿ ಅವರಿಗೆ ಸಿಗಲಿಲ್ಲ. ಟ್ರಂಪ್ ಅವರ ಹೇಳಿಕೆಗಳನ್ನು ಭಾರತ ನಿರಂತರವಾಗಿ ತಿರಸ್ಕರಿಸಿತು. ಪಾಕಿಸ್ತಾನದೊಂದಿಗಿನ ಸಂಘರ್ಷದಲ್ಲಿ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಭಾರತ ಪ್ರತಿ ಬಾರಿಯೂ ನಿರಾಕರಿಸಿತು. ಇದರಿಂದ ಭಾರೀ ಆರ್ಥಿಕ ನಷ್ಟವಾಗಿದ್ದರೂ ಭಾರತ ತನ್ನ ಈ ನಿಲುವನ್ನು ಕಾಯ್ದುಕೊಂಡಿತು. ಇದರಿಂದ ಟ್ರಂಪ್ ಕೋಪಗೊಂಡು ಭಾರತದ ಮೇಲೆ ಶೇಕಡ 50 ರಷ್ಟು ತೆರಿಗೆಯನ್ನು ವಿಧಿಸಿದರು ಎಂದು ಅಮೇರಿಕಾದ ಸಂಸ್ಥೆ ‘ಜೆಫರೀಸ್’ ಹೇಳಿದೆ. ಜೆಫರೀಸ್ ಒಂದು ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸಂಸ್ಥೆಯಾಗಿದೆ. ಈ ಕುರಿತು ಜೆಫರೀಸ್ ಒಂದು ವರದಿಯನ್ನು ಪ್ರಕಟಿಸಿದೆ.
ಜೆಫರೀಸ್ ವರದಿಯ ಪ್ರಮುಖ ಅಂಶಗಳು ಹೀಗಿವೆ !
೧. ಭಾರತದೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಅಧ್ಯಕ್ಷ ಟ್ರಂಪ್ ಅವರಿಗೆ ಅಗತ್ಯವಿರುವ ಜಾಗತಿಕ ಮನ್ನಣೆ ಕಡಿಮೆಯಾಗಿದೆ.
೨. ಭಾರತದ ಮೇಲೆ ತೆರಿಗೆ ವಿಧಿಸಲು ಟ್ರಂಪ್‌ಗೆ ಇತರ ಕೆಲವು ಕಾರಣಗಳಿವೆ. ರಷ್ಯಾ-ಉಕ್ರೇನ್ ಯುದ್ಧವು ಅವುಗಳಲ್ಲಿ ಪ್ರಮುಖ ಕಾರಣವಾಗಿದೆ. ಅಧ್ಯಕ್ಷರ ಚುನಾವಣಾ ಪ್ರಚಾರದ ಸಮಯದಲ್ಲಿ, ಟ್ರಂಪ್ ‘ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದಾಗಿ’ ಭರವಸೆ ನೀಡಿದ್ದರು. ಆದರೆ ಇದು ಇನ್ನೂ ಈಡೇರಿಲ್ಲ. ಇದರಿಂದ ಅವರು ಬೇಸರಗೊಂಡಿದ್ದಾರೆ. ಅದೇ ಸಮಯದಲ್ಲಿ, ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರೆಸಿದ್ದರಿಂದ ಅಮೇರಿಕಾದಲ್ಲಿ ಅಸಮಾಧಾನ ಮೂಡಿದೆ.
೩. ಹೀಗಿದ್ದರೂ, ಭಾರತವು ಪಾಕಿಸ್ತಾನದ ವಿಷಯದಲ್ಲಿ ಟ್ರಂಪ್ ಮಧ್ಯಪ್ರವೇಶಿಸದಂತೆ ತಡೆದಿದ್ದೇ ಶೇಕಡ 50 ರಷ್ಟು ಆಮದು ತೆರಿಗೆ ವಿಧಿಸಲು ನಿಜವಾದ ಮತ್ತು ಮೂಲಭೂತ ಕಾರಣವಾಗಿದೆ.
೪. ಟ್ರಂಪ್ ಅವರ ಈ ನಿರ್ಧಾರವು ರಾಜಕೀಯ ಮಟ್ಟದಲ್ಲಿ ತಿಳುವಳಿಕೆಯ ಕೊರತೆಯ ಒಂದು ಉದಾಹರಣೆಯಾಗಿದೆ. ಇಂತಹ ನಿರ್ಧಾರಗಳು ಅಮೇರಿಕಾದ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿವೆ; ಏಕೆಂದರೆ ಭಾರತವನ್ನು ದೂರ ತಳ್ಳುವುದರಿಂದ ಭಾರತ ಚೀನಾಕ್ಕೆ ಹತ್ತಿರವಾಗಬಹುದು.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation