ಹಿಂದೂ ದಂಪತಿಗಳಿಗೆ 3 ಮಕ್ಕಳು ಇರಬೇಕು! : H.H. Dr Mohanji Bhagwat

  • ಪ.ಪೂ. ಸರಸಂಘಚಾಲಕ ಮೋಹನ್ ಜೀ ಭಾಗವತ್ ಅವರ ಮಹತ್ವ ಪೂರ್ಣ ಹೇಳಿಕೆ

  • ಹಿಂದೂಗಳಲ್ಲಿ ಜನನ ದರವು ಅತ್ಯಂತ ವೇಗವಾಗಿ ಕಡಿಮೆಯಾಗುತ್ತಿದೆ

ಪರಮಪೂಜ್ಯ ಸರ್ಸಂಗಚಾಲಕ್ ಮೋಹನ್‌ಜಿ ಭಾಗವತ್

ನವದೆಹಲಿ – ದಂಪತಿಗೆ 3 ಮಕ್ಕಳು ಇರಬೇಕು. ಯಾವುದೇ ಕುಟುಂಬದಲ್ಲಿ ಮೂರಕ್ಕಿಂತ ಕಡಿಮೆ ಮಕ್ಕಳಿದ್ದಲ್ಲಿ, ಆ ಸಮಾಜವು ನಿಧಾನವಾಗಿ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ದೇಶಕ್ಕೆ ಜನಸಂಖ್ಯೆ ನಿಯಂತ್ರಣದ ಜೊತೆಗೆ ಸಾಕಷ್ಟು ಜನಸಂಖ್ಯೆಯೂ ಕೂಡಾ ಅವಶ್ಯಕವಾಗಿದೆ. ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ದೇಶದ ಪ್ರತಿಯೊಂದು ವರ್ಗ, ಸಮುದಾಯ ಮತ್ತು ಧರ್ಮದ ಜನನ ದರ ಕಡಿಮೆಯಾಗಿದೆ; ಆದರೆ ಹಿಂದೂಗಳ ಜನನ ದರವು ಅತ್ಯಂತ ವೇಗವಾಗಿ ಕಡಿಮೆಯಾಗಿದೆ. ಜನಸಂಖ್ಯೆ ಹೆಚ್ಚಿದಾಗ, ಪ್ರಕೃತಿಯೂ ಕೂಡಾ ಅದನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಮೋಹನ್ ಜೀ ಭಾಗವತ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ಆರ್‌ಎಸ್‌ಎಸ್‌ನ ಶತಮಾನೋತ್ಸವದ ಸಂದರ್ಭದಲ್ಲಿ ಆಯೋಜಿಸಿದ್ದ 3 ದಿನಗಳ ಸಂವಾದದ ಕೊನೆಯ ದಿನದಂದು ಪ.ಪೂ. ಸರಸಂಘಚಾಲಕರು ಮಾತನಾಡುತ್ತಿದ್ದರು. ಈ ಹೇಳಿಕೆಯಿಂದ, ಅವರು ‘ಹಿಂದೂಗಳು 3 ಮಕ್ಕಳಿಗೆ ಜನ್ಮ ನೀಡಬೇಕು’ ಎಂದು ಸೂಚಿಸುತ್ತಿದ್ದಾರೆ.

ಪ.ಪೂ. ಸರಸಂಘಚಾಲಕರು ಮಂಡಿಸಿದ ಪ್ರಮುಖ ಅಂಶಗಳು!

1. ದೇಶದ ಅಗತ್ಯತೆಗಳು ಮತ್ತು ಜನಸಂಖ್ಯೆಯ ನಡುವೆ ಉತ್ತಮ ಸಮತೋಲನ ಅಗತ್ಯ!

ಜನಸಂಖ್ಯೆಯು ದೇಶಕ್ಕೆ ಒಂದು ಹೊರೆ ಮತ್ತು ಒಂದು ಅವಕಾಶ ಎರಡೂ ಆಗಿದೆ. ಜನಸಂಖ್ಯಾ ನೀತಿಯು ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುವ ಜೊತೆಗೆ ಅದನ್ನು ನಿಯಂತ್ರಿಸುವಂತಿರಬೇಕು. ಅಲ್ಲದೆ, ಇಡೀ ಜನಸಂಖ್ಯೆಯನ್ನು ಸರಿಯಾಗಿ ಪೋಷಿಸಲು ಸಾಧ್ಯವಾಗಬೇಕು. ಈ ನೀತಿಯಿಂದ ದೇಶದ ಅಗತ್ಯತೆಗಳು ಮತ್ತು ಜನಸಂಖ್ಯೆಯ ನಡುವೆ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

2. ವೈಜ್ಞಾನಿಕವಾಗಿ ಸರಿಯಾದ ಜನನ ದರ ಅಗತ್ಯ!

ಶಾಸ್ತ್ರಗಳ ಜೊತೆಗೆ ವಿಜ್ಞಾನವೂ ಕೂಡಾ ಜನನ ದರವು ಸರಿಯಾಗಿ ಇರಬೇಕು ಎಂದು ಹೇಳುತ್ತದೆ. ಒಂದು ವೇಳೆ ಹಾಗಾಗದಿದ್ದರೆ, ಸಂಬಂಧಿತ ವರ್ಗ ಅಥವಾ ಸಮಾಜವು ನಾಶವಾಗುತ್ತದೆ. ಈ ನೀತಿಯ ಅಡಿಯಲ್ಲಿ, ಪ್ರತಿಯೊಂದು ದೇಶ ದಂಪತಿಯ ಕನಿಷ್ಠ ಮೂರು ಮಕ್ಕಳ ತತ್ವ ಅಥವಾ ನೀತಿಯ ಮೇಲೆ ಮುಂದುವರಿಯುತ್ತಿದೆ.

3. ಕುಟುಂಬದಲ್ಲಿ 3 ಮಕ್ಕಳು ಇರಲು ಇದೇ ಕಾರಣ!
ಸಂಶೋಧನೆಯ ಪ್ರಕಾರ, 3 ಮಕ್ಕಳು ಇರುವ ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಆರೋಗ್ಯವಾಗಿರುತ್ತಾರೆ. ಆರೋಗ್ಯ ಅಧ್ಯಯನಗಳ ಪ್ರಕಾರ, ಇದರಿಂದ ಕುಟುಂಬದಲ್ಲಿ ಅಹಂಕಾರದ ಘರ್ಷಣೆ ಕಡಿಮೆಯಾಗುತ್ತದೆ. ಮಕ್ಕಳು ಅಹಂಕಾರವನ್ನು ನಿರ್ವಹಿಸುವುದನ್ನು ಕಲಿಯುತ್ತಾರೆ.