ಗುಂಡು ಹಾರಿಸಿದ ಯುವತಿಯಿಂದ “ಭಾರತದ ಮೇಲೆ ಅಣುಬಾಂಬ್‌ನಿಂದ ದಾಳಿ ಮಾಡಿ” ಎಂದು ಹೇಳಿಕೆ !

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಮಿನಿಯಾಪೋಲಿಸ್ ನಗರದಲ್ಲಿರುವ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮಕ್ಕಳು ಮತ್ತು ವೃದ್ಧರ ಮೇಲೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡು ಹಾರಿಸಿದ ಯುವತಿಯ ಹೆಸರು ರಾಬಿನ್ ವೆಸ್ಟ್‌ಮನ್ ಎಂದಾಗಿದೆ. ಆಕೆ ತನ್ನ ಮೇಲೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಆಕೆ ಗುಂಡಿನ ದಾಳಿ ನಡೆಸುವ ಮೊದಲು ಒಂದು ವೀಡಿಯೋ ಮಾಡಿ ಅದರಲ್ಲಿ ಭಾರತದ ಹೆಸರೂ ಸೇರಿತ್ತು. ಈ ವೀಡಿಯೋದಲ್ಲಿ ಆಕೆಯ ಬಳಿ ಇದ್ದ ಶಸ್ತ್ರಾಸ್ತ್ರಗಳ ಮೇಲೆ ‘ನ್ಯೂಕ್ ಇಂಡಿಯಾ’ (ಭಾರತದ ಮೇಲೆ ಅಣುಬಾಂಬ್ ಹಾಕಿ), ‘ಕಿಲ್ ಟ್ರಂಪ್’ (ಟ್ರಂಪ್ ಅವರನ್ನು ಕೊಲ್ಲಿ) ಮತ್ತು ‘ಇಸ್ರೇಲ್ ಮಸ್ಟ್ ಫಾಲ್’ (ಇಸ್ರೇಲ್ ಸೋಲಬೇಕು) ಎಂದು ಬರೆದಿರುವುದು ಕಾಣುತ್ತದೆ. ಕೇವಲ ಭಾರತ ಮಾತ್ರವಲ್ಲದೆ, ಅನೇಕ ದೇಶಗಳ ವಿರುದ್ಧವೂ ಈ ರೀತಿಯ ಬರಹಗಳನ್ನು ಬರೆಯಲಾಗಿತ್ತು. ಟ್ರಂಪ್ ಅವರು ಈ ದಾಳಿಯನ್ನು ಮಾನವೀಯತೆಯ ಮೇಲಿನ ದಾಳಿ ಎಂದು ಕರೆದಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಗುಂಡು ಹಾರಿಸಿದ ಯುವತಿ ಚರ್ಚ್‌ಗೆ ಸಂಬಂಧಿಸಿದ ಶಾಲೆಯ ಮಾಜಿ ವಿದ್ಯಾರ್ಥಿನಿ ಆಗಿದ್ದಳು.
ಸಂಪಾದಕೀಯ ನಿಲುವುಈ ಘಟನೆಯಿಂದ, “ಅಮೆರಿಕದಲ್ಲಿ ಟ್ರಂಪ್ ಅವರಂತೆ ಅಲ್ಲಿನ ನಾಗರಿಕರೂ ಭಾರತದೊಂದಿಗೆ ಹುಚ್ಚರಂತೆ ವರ್ತಿಸುತ್ತಿದ್ದಾರೆಯೇ?” ಎಂಬ ಪ್ರಶ್ನೆ ಉದ್ಭವಿಸಿದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation