|

ಭೋಪಾಲ (ಮಧ್ಯಪ್ರದೇಶ) – ಇಲ್ಲಿನ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಗಣೇಶ ಮೂರ್ತಿಗಳನ್ನು ಹಿಂದೂ ಮೂರ್ತಿ ತಯಾರಕರು ಮಾತ್ರ ತಯಾರಿಸಬೇಕು ಮತ್ತು ಮಾರಾಟ ಮಾಡಬೇಕು ಎಂದು ಕರೆ ನೀಡಿವೆ. ಈ ನಿಟ್ಟಿನಲ್ಲಿ ‘ಸಂಸ್ಕೃತಿ ಬಚಾವ್ ಮಂಚ್’ ಎಂಬ ಸಂಘಟನೆಯು ಅಂಗಡಿಗಳು ಮತ್ತು ಕಾರ್ಯಾಗಾರಗಳನ್ನು ಪರಿಶೀಲಿಸಲು ಪ್ರಾರಂಭಿಸಿದೆ. ಇದಕ್ಕೆ ಪ್ರತಿಯಾಗಿ, ಮುಸಲ್ಮಾನ ಮೂರ್ತಿಕಾರರು, ತಾವು ತಲೆಮಾರುಗಳಿಂದ ಈ ವ್ಯಾಪಾರ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ, ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ವಾತಾವರಣವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಸ್ಕೃತಿ ಬಚಾವ್ ಮಂಚ್‌ನ ನಿಲುವು!
ಸಂಸ್ಕೃತಿ ಬಚಾವ್ ಮಂಚ್‌ನ ಹಿಂದುತ್ವನಿಷ್ಠ ಕಾರ್ಯಕರ್ತರು, “ಯಾರಿಗೆ ದೇವರು ಮತ್ತು ಮೂರ್ತಿ ಪೂಜೆಯಲ್ಲಿ ಶ್ರದ್ಧೆ ಇಲ್ಲವೋ, ಅವರನ್ನು ನಂಬಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಫಲಕಗಳ ಮೇಲೆ ತಮ್ಮ ಹೆಸರು ಮತ್ತು ಧರ್ಮವನ್ನು ಸ್ಪಷ್ಟವಾಗಿ ಬರೆದಿರುವ ಅಂಗಡಿಗಳಿಂದ ಮಾತ್ರ ಜನರು ಮೂರ್ತಿಗಳನ್ನು ಖರೀದಿಸಬೇಕು ಎಂದು ಸಂಘಟನೆಯ ನಿಲುವಾಗಿದೆ.
ಭಾಜಪದ ಸ್ಥಳೀಯ ಶಾಸಕರ ಬೆಂಬಲ!
ಭಾಜಪ ಶಾಸಕ ರಾಮೇಶ್ವರ ಶರ್ಮಾ ಈ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಅವರು, “ಯಾರಿಗೆ ಮೂರ್ತಿ ಪೂಜೆಯ ಬಗ್ಗೆ ಶ್ರದ್ಧೆ ಇಲ್ಲವೋ, ಅವರು ಮೂರ್ತಿಗಳನ್ನು ಏಕೆ ತಯಾರಿಸಬೇಕು ಮತ್ತು ಮಾರಾಟ ಮಾಡಬೇಕು?” ಎಂದು ಅವರು ಪ್ರಶ್ನಿಸಿದ್ದಾರೆ. “ಮೊದಲು ಶ್ರದ್ಧೆ ಇರಲಿ, ನಂತರ ಈ ಕೆಲಸದಿಂದ ಜೀವನೋಪಾಯ ಗಳಿಸಿ” ಎಂದು ಹೇಳಿದ್ದಾರೆ. “ಇಂದು ಕೆಲವು ಕಟ್ಟರ ಮುಸಲ್ಮಾನರು ಉಗುಳಿನ ಮೂಲಕ ಸಮಾಜದಲ್ಲಿ ರೋಗಗಳನ್ನು ಹರಡುತ್ತಿದ್ದಾರೆ. ಹಾಗಾಗಿ ಶ್ರದ್ಧೆಗೆ ಸಂಬಂಧಿಸಿದ ಮೂರ್ತಿಗಳನ್ನು ಮಣ್ಣು ಮತ್ತು ಬಣ್ಣದಲ್ಲಿ ಏನು ಮಿಶ್ರಣ ಮಾಡಿರಬಹುದು ಎಂದು ನಂಬಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
‘ಉದ್ದೇಶಪೂರ್ವಕವಾಗಿ ಹಿಂದೂ-ಮುಸಲ್ಮಾನರ ಪ್ರಶ್ನೆ ಹುಟ್ಟುಹಾಕುವ ಪ್ರಯತ್ನ!’ (ಅಂತೆ) – ಮುಸಲ್ಮಾನ ಮೂರ್ತಿಕಾರರ ಆರೋಪ
ಭೋಪಾಲ್‌ನ ಮುಸಲ್ಮಾನ ಮೂರ್ತಿಕಾರರು ಹಿಂದುತ್ವನಿಷ್ಠ ಕಾರ್ಯಕರ್ತರ ಈ ನಿಲುವಿಗೆ ವಿರೋಧ ವ್ಯಕ್ತಪಡಿಸಿ, “ಹಿಂದೂಗಳು ನಮ್ಮ ಧಾರ್ಮಿಕ ಗ್ರಂಥಗಳನ್ನು ಮುದ್ರಿಸುತ್ತಾರೆ. ಅದಕ್ಕೆ ನಾವು ಎಂದಿಗೂ ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದು ಹೇಳಿದ್ದಾರೆ. (ಹಾಗಾದರೆ ಹಿಂದೂಗಳು ಆಕ್ಷೇಪಿಸಬಾರದು ಎಂದು ಎಲ್ಲಿಯೂ ಇಲ್ಲ, ಅಲ್ಲವೇ? – ಸಂಪಾದಕರು) “ನಾವು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಈಗ ಕೆಲವರು ಉದ್ದೇಶಪೂರ್ವಕವಾಗಿ ಹಿಂದೂ-ಮುಸಲ್ಮಾನರ ಪ್ರಶ್ನೆ ಹುಟ್ಟುಹಾಕಿ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಮೂರ್ತಿಗಳನ್ನು ತಯಾರಿಸುವುದು ನಮ್ಮ ಸಾಂಪ್ರದಾಯಿಕ ಕಸುಬಾಗಿದೆ. ಈಗ ಧರ್ಮದ ಆಧಾರದ ಮೇಲೆ ಈ ವ್ಯಾಪಾರವನ್ನು ವಿಭಜಿಸಲು ಪ್ರಯತ್ನಿಸಲಾಗುತ್ತಿದ್ದು, ಇದು ಸಮಾಜದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು” ಎಂದು ಹೇಳಿದ್ದಾರೆ. (ಮುಸಲ್ಮಾನ ಮೂರ್ತಿಕಾರರು ಗಣೇಶ ಮೂರ್ತಿಗಳನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಹಿಂದೂಗಳ ಮನಸ್ಸಿನಲ್ಲಿದೆ. ಇದರ ಬಗ್ಗೆ ಏನನ್ನೂ ಹೇಳದಿರುವುದರಿಂದ, ಉದ್ವಿಗ್ನತೆಯು ಮುಸಲ್ಮಾನರಿಂದಲೇ ಸೃಷ್ಟಿಯಾಗುತ್ತಿದೆ ಎಂಬುದನ್ನು ಗಮನಿಸಿ! – ಸಂಪಾದಕರು)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!